Updated on: Feb 17, 2024 | 6:36 PM
ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ತಮ್ಮ ಶತಕದ ಅಬ್ಬರವನ್ನು ಮುಂದುವರೆಸಿದ್ದಾರೆ. ಮಣಿಪುರ ವಿರುದ್ಧ ನಡೆಯುತ್ತಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 63ನೇ ಶತಕ ಸಿಡಿಸಿದರು.
ಭಾಝ್ ಬಾಲ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಚೇತೇಶ್ವರ ಪೂಜಾರ ಕೇವಲ 102 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಶತಕದ ನಂತರ ಪೂಜಾರ ಹೆಚ್ಚು ಹೊತ್ತು ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ 105 ಎಸೆತಗಳನ್ನು ಎದುರಿಸಿದ ಪೂಜಾರ 1 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ 108 ರನ್ ಗಳಿಸಿದರು. ಇದು ಈ ರಣಜಿ ಸೀಸನ್ನಲ್ಲಿ ಪೂಜಾರ ಅವರ ಮೂರನೇ ಶತಕವಾಗಿತ್ತು.
ಪೂಜಾರ ಈ ಹಿಂದೆ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯದಲ್ಲಿ 243 ರನ್‌ಗಳ ದ್ವಿಶತಕದ ಇನ್ನಿಂಗ್ಸ್ ಆಡಿದ್ದರೆ, ಆ ನಂತರ ರಾಜಸ್ಥಾನ ವಿರುದ್ಧ 110 ರನ್ ಬಾರಿಸಿದ್ದರು.
ಈ ಬಾರಿಯ ರಣಜಿ ಸೀಸನ್ನಲ್ಲಿ ಪೂಜಾರ ಇದುವರೆಗೆ 243*(356), 49(100), 43(77), 43(105), 66(137), 91(133), 3(16), 0(6), 110(230), 25 (60) ಮತ್ತು 108 (105) ರನ್ ಕಲೆಹಾಕಿದ್ದಾರೆ.
ಏತನ್ಮಧ್ಯೆ ಮಣಿಪುರ ವಿರುದ್ಧ ಚೇತೇಶ್ವರ ಪೂಜಾರ ಹೊರತುಪಡಿಸಿ, ನಾಯಕ ಅರ್ಪಿತ್ ವಾಸವಾಡ 148 ರನ್ ಕಲೆಹಾಕಿದರು. ಅರ್ಪಿತ್ ತಮ್ಮ ಈ ಇನ್ನಿಂಗ್ಸ್‌ನಲ್ಲಿ 197 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 18 ಬೌಂಡರಿಗಳನ್ನು ಬಾರಿಸಿದರು.
ಈ ಇಬ್ಬರಲ್ಲದೆ ಪ್ರೇರಕ್ ಮಂಕಡ್ ಕೂಡ 173 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಪ್ರರೆಕ್ ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ್ದವು.