30 ನೇ ವಸಂತಕ್ಕೆ ಕಾಲಿಟ್ಟ ಜಸ್ಪ್ರೀತ್ ಬುಮ್ರಾ; ಕ್ರಿಕೆಟ್ ದುನಿಯಾದಲ್ಲಿ ಯಾರ್ಕರ್ ಕಿಂಗ್ ಸೃಷ್ಟಿಸಿರುವ ಅಪರೂಪದ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

Updated on: Dec 06, 2023 | 10:25 AM

Happy Birthday Jasprit Bumrah: ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಚಾಣಾಕ್ಯ ಬೌಲಿಂಗ್​ನಿಂದ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಸಂಪಾಧಿಸಿದ್ದಾರೆ.

1 / 8
ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಚಾಣಾಕ್ಯ ಬೌಲಿಂಗ್​ನಿಂದ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಸಂಪಾಧಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಚಾಣಾಕ್ಯ ಬೌಲಿಂಗ್​ನಿಂದ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಹೆಸರು ಸಂಪಾಧಿಸಿದ್ದಾರೆ.

2 / 8

ಅತಿ ಕಡಿಮೆ ಸಮಯದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಎಂದು ಗುರುತಿಸಿಕೊಂಡ ಬುಮ್ರಾ, ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನಲ್ಲಿ 11 ಪಂದ್ಯಗಳನ್ನಾಡಿ 20 ವಿಕೆಟ್‌ಗಳನ್ನು ಗಳಿಸಿದ್ದರು. ಹಾಗೆಯೇ ಭಾರತವನ್ನು ಫೈನಲ್​ಗೆ ಕೊಂಡೊಯ್ಯುವಲ್ಲು ಪ್ರಮುಖ ಪಾತ್ರವಹಿಸಿದ್ದರು. ಇನ್ನು 30 ನೇ ವಸಂತಕ್ಕೆ ಕಾಲಿಟ್ಟಿರುವ ಬುಮ್ರಾ ಕ್ರಿಕೆಟ್​ ಲೋಕದಲ್ಲಿ ಮಾಡಿರುವ ಕೆಲವು ಅದ್ಭುತ ದಾಖಲೆಗಳನ್ನು ನೋಡುವುದಾದರೆ..

3 / 8

ಜಸ್ಪ್ರೀತ್ ಬುಮ್ರಾ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. 2019 ರ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ, ಜಮೈಕಾ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಈ ಸಾಧನೆಯನ್ನು ಸಾಧಿಸಿದ್ದರು.

4 / 8

ಇದರಲ್ಲಿ ಬುಮ್ರಾ ಸತತ ಮೂರು ಎಸೆತಗಳಲ್ಲಿ ಡ್ಯಾರೆನ್ ಬ್ರಾವೋ, ಶಮ್ರಾ ಬ್ರೂಕ್ಸ್ ಮತ್ತು ರೋಸ್ಟನ್ ಚೇಸ್ ಅವರನ್ನು ಬಲಿಪಶುಗಳನ್ನಾಗಿ ಮಾಡಿದರು. ವೇಗದ ಬೌಲರ್ ಮಾತ್ರವಲ್ಲದೆ, ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್‌ನಿಂದ ಕೂಡ ದಾಖಲೆ ನಿರ್ಮಿಸಿದ್ದಾರೆ.

5 / 8

2022 ರಲ್ಲಿ, ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ, ಸ್ಟುವರ್ಟ್ ಬ್ರಾಡ್ ಬೌಲ್ ಮಾಡಿದ ಒಂದು ಓವರ್‌ನಲ್ಲಿ ಬರೋಬ್ಬರಿ 35 ರನ್ ಚಚ್ಚಿದ್ದರು. ಇದು ಇಲ್ಲಿಯವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.

6 / 8

ಅಲ್ಲದೆ 2019 ರಲ್ಲಿಯೇ ಬುಮ್ರಾ ಏಕದಿನ ಸ್ವರೂಪದಲ್ಲಿ ತಮ್ಮ 100 ವಿಕೆಟ್‌ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ 21 ನೇ ಭಾರತೀಯ ಬೌಲರ್ ಎನಿಸಿಕೊಳ್ಳುವುದರ ಜೊತೆಗೆ, ಈ ಮೈಲಿಗಲ್ಲನ್ನು ತಲುಪಿದ ಎರಡನೇ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

7 / 8

2018 ರ ವರ್ಷವನ್ನು ಜಸ್ಪ್ರೀತ್ ಬುಮ್ರಾ ಅವರ ವೃತ್ತಿಜೀವನದ ಅತ್ಯುತ್ತಮ ವರ್ಷ ಎಂದು ಕರೆಯಬಹುದು. ಈ ವರ್ಷ ಅವರು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆಯನ್ನು ಸಾಧಿಸಿದ್ದರು. ಇದರೊಂದಿಗೆ ಬುಮ್ರಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಮೂರು ದೇಶಗಳಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.

8 / 8

ಇದಲ್ಲದೆ, ಬುಮ್ರಾ ಅವರು ಭಾರತೀಯ ಬೌಲರ್ ಆಗಿ ತಮ್ಮ ಟೆಸ್ಟ್ ಚೊಚ್ಚಲ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆಯುವ ವಿಷಯದಲ್ಲಿ ನಂಬರ್-1 ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. 2018 ರಲ್ಲಿ ಟೆಸ್ಟ್ ಕ್ರಿಕೆಟ್​ ಪದಾರ್ಪಣೆ ಮಾಡಿದ ಬುಮ್ರಾ ಆ ವರ್ಷ ಒಟ್ಟು 48 ಟೆಸ್ಟ್ ವಿಕೆಟ್‌ಗಳನ್ನು ಪಡೆದರು. ಈ ಮೂಲಕ 1979 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ವರ್ಷದಲ್ಲಿ ಒಟ್ಟು 40 ವಿಕೆಟ್‌ಗಳನ್ನು ಪಡೆದಿದ್ದ ಮಾಜಿ ಭಾರತೀಯ ಆಟಗಾರ ದಿಲೀಪ್ ದೋಷಿ ಅವರ ದಾಖಲೆಯನ್ನು ಮುರಿದರು.

Published On - 9:50 am, Wed, 6 December 23

Loading...
Unable to load recommendations.
Follow Us