Happy Birthday Shubman Gill: 23 ನೇ ವಸಂತಕ್ಕೆ ಕಾಲಿಟ್ಟ ಭಾರತದ ಯುವ ಓಪನರ್ ಶುಭಮನ್ ಗಿಲ್

| Updated By: ಪೃಥ್ವಿಶಂಕರ

Updated on: Sep 08, 2022 | 4:18 PM

Happy Birthday Shubman Gill: ಇಂದು ಭಾರತದ ಸ್ಟಾರ್ ಓಪನರ್ ಶುಭಮನ್ ಗಿಲ್ ಹುಟ್ಟುಹಬ್ಬ. ಟೀಂ ಇಂಡಿಯಾದ ಸ್ಟಾರ್ ಓಪನರ್ ಇಂದು 23 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1 / 5
ಇಂದು ಭಾರತದ ಸ್ಟಾರ್ ಓಪನರ್ ಶುಭಮನ್ ಗಿಲ್ ಹುಟ್ಟುಹಬ್ಬ. ಟೀಂ ಇಂಡಿಯಾದ ಸ್ಟಾರ್ ಓಪನರ್ ಇಂದು 23 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಿಲ್ ಪ್ರಸ್ತುತ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಿರತರಾಗಿದ್ದಾರೆ. 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿ ಗಿಲ್, ನಂತರ 2020 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು.

2 / 5
ಗಿಲ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮೊರ್ಗಾನ್‌ ಪರ ಪಾದಾರ್ಪಣೆ ಮಾಡಿದ್ದು, ಚೊಚ್ಚಲ ಪಂದ್ಯದಲ್ಲಿ ಗಿಲ್ ವೋರ್ಸೆಸ್ಟರ್‌ಶೈರ್ ವಿರುದ್ಧ 92 ರನ್‌ಗಳ ಮಿಂಚಿನ ಇನ್ನಿಂಗ್ಸ್ ಆಡಿದರು.

3 / 5
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶದ ಜೆರ್ಸಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಶುಭಮನ್‌ಗೆ ಇದೆ. ಆದರೆ ಅವರು ಇನ್ನೂ ಟಿ20 ಮಾದರಿಯಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿಲ್ಲ.

4 / 5
ಇದುವರೆಗೆ ಶುಭಮನ್ ಭಾರತ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 579 ರನ್ ಗಳಿಸಿದ್ದಾರೆ. ಇದರಲ್ಲಿ 91 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. 9 ಅಂತಾರಾಷ್ಟ್ರೀಯ ODI ಪಂದ್ಯಗಳನ್ನಾಡಿರುವ ಗಿಲ್ 499 ರನ್ ಗಳಿಸಿದ್ದಾರೆ. 130 ರನ್ ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ

5 / 5
ಕಳೆದ ತಿಂಗಳ ಕೊನೆಯಲ್ಲಿ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಆ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ 97 ಎಸೆತಗಳಲ್ಲಿ 130 ರನ್‌ಗಳ ಅದ್ಭುತ ಇನ್ನಿಂಗ್ಸ್ ನೀಡಿದರು. ಇದರಿಂದಾಗಿ ಜಿಂಬಾಬ್ವೆ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಗಿಲ್, ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.