Hardik Pandya: ಹೀನಾಯ ಸೋಲಿಗೆ ನಾಯಕ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನ ಗೊತ್ತೇ?

Updated on: Jul 30, 2023 | 7:30 AM

IND vs WI 2nd ODI: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದ ಕಾರಣ ಹಾರ್ದಿಕ್ ಪಾಂಡ್ಯ ತಂಡದ ನಾಯತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಹೀನಾಯ ಸೋಲಿನ ಬಳಿಕ ಹಾರ್ದಿಕ್ ಆಡಿದ ಮಾತುಗಳೇನು ಕೇಳಿ.

1 / 7
ಬಾರ್ಬಡೊಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಹಿರಿಯ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ದುರ್ಬಲವಾದಂತೆ ಕಂಡಿತು.

ಬಾರ್ಬಡೊಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಹಿರಿಯ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ದುರ್ಬಲವಾದಂತೆ ಕಂಡಿತು.

2 / 7

ಬ್ಯಾಟಿಂಗ್ - ಬೌಲಿಂಗ್ ಎರಡೂ ವಿಭಾಗಗಳಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಗೆಲುವು ಕಾಣಲು ಸಾಧ್ಯವಾಗಲಿಲ್ಲ. 6 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.

3 / 7

ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದ ಕಾರಣ ಹಾರ್ದಿಕ್ ಪಾಂಡ್ಯ ತಂಡದ ನಾಯತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಹೀನಾಯ ಸೋಲಿನ ಬಳಿಕ ಹಾರ್ದಿಕ್ ಆಡಿದ ಮಾತುಗಳೇನು ಕೇಳಿ.

4 / 7

ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನಿಂಗ್ಸ್‌ ಬಳಿಕ ಎರಡನೇ ಇನ್ನಿಂಗ್ಸ್​ಗೆ ವಿಕೆಟ್‌ ಉತ್ತಮವಾಗಿತ್ತು. ಈ ಸೋಲಿನಿಂದ ನಿರಾಸೆಯಾಗಿದೆ. ಆದರೆ ಈ ಸೋಲಿನಿಂದ ಅನೇಕ ವಿಷಯಗಳನ್ನು ಕಲಿತಿದ್ದೇವೆ ಎಂದು ಹಾರ್ದಿಕ್ ಪಾಂಡ್ಯ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.

5 / 7

ನಮ್ಮ ಆರಂಭಿಕರು ಬ್ಯಾಟಿಂಗ್ ಮಾಡಿದ ರೀತಿ ಉತ್ತಮವಾಗಿತ್ತು. ಇಶಾನ್ ಕಿಶನ್ ಬ್ಯಾಟಿಂಗ್ ಭಾರತೀಯ ಕ್ರಿಕೆಟ್‌ಗೆ ಮುಖ್ಯವಾಗಿದೆ. ಶಾರ್ದೂಲ್ ಠಾಕೂರ್ ನಮ್ಮ ಭರವಸೆಯನ್ನು ಜೀವಂತವಾಗಿಟ್ಟರು. ಶಾಯ್ ಹೋಪ್ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅವರು ಅಂದುಕೊಂಡಿದ್ದನ್ನು ಸಾಧಿಸಿದರು- ಹಾರ್ದಿಕ್ ಪಾಂಡ್ಯ.

6 / 7

ವಿಶ್ವಕಪ್‌ಗೆ ಸಿದ್ಧವಾಗಲು ನಾನು ಇನ್ನಷ್ಟು ಹೆಚ್ಚು ಓವರ್‌ಗಳನ್ನು ಬೌಲ್ ಮಾಡಬೇಕಾಗಿದೆ. ವಿಶ್ವಕಪ್‌ ವೇಳೆಗೆ ಎಲ್ಲವೂ ಸರಿ ಆಗುತ್ತದೆ ಎಂದು ಅಂದುಕೊಂಡಿದ್ದೇವೆ. ಈಗ ಸರಣಿಯು 1-1 ರಲ್ಲಿ ನಿಂತಿದೆ. ಹೀಗಾಗಿ ಮುಂದಿನ ಪಂದ್ಯ ನೋಡುಗರಿಗೆ ಹಾಗೂ ಆಟಗಾರರಿಗೆ ರೋಚಕವಾಗಿರುತ್ತದೆ ಎಂದು ಹಾರ್ದಿಕ್ ಹೇಳಿದ್ದಾರೆ.

7 / 7

ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 40.5 ಓವರ್​ಗಳಲ್ಲಿ 181 ರನ್​ಗಳಿಗೆ ಆಲೌಟ್ ಆಯಿತು. ಕಿಶನ್ 55 ರನ್ ಗಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಅವರ ಅಜೇಯ 63 ರನ್​ಗಳ ನೆರವಿನಿಂದ 36.4 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಜಯ ಸಾಧಿಸಿತು.

Loading...
Unable to load recommendations.
Follow Us