Hardik Pandya: ಮತ್ತೊಂದು ಸೋಲು: ಈ ಬಾರಿ ಸೋಲಿಗೆ ಹಾರ್ದಿಕ್ ಪಾಂಡ್ಯ ದೂರಿದ್ದು ಯಾರನ್ನು ನೋಡಿ

|

Updated on: Aug 07, 2023 | 7:40 AM

WI vs IND 2nd T20I: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲೂ ಭಾರತ ಸೋಲು ಕಂಡಿದೆ. ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಸೋತ ಬಳಿಕ ಮಾತನಾಡಿದ್ದು ಏನು ಹೇಳಿದರು ನೋಡಿ.

1 / 8
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 4 ರನ್​ಗಳಿಂದ ಸೋಲುಂಡಿದ್ದ ಭಾರತ ಇದೀಗ ದ್ವಿತೀಯ ಪಂದ್ಯದಲ್ಲೂ ಸೋಲು ಕಂಡಿದೆ. ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ.

2 / 8
ಇದೀಗ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿ ಟೀಮ್ ಇಂಡಿಯಾ ಇದೆ. ವಿಂಡೀಸ್ ಎರಡು ವಿಕೆಟ್​ಗಳ ಜಯದೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಭಾರತ ವಿರುದ್ಧ ವಿಂಡೀಸ್ ಇದೇ ಮೊದಲ ಬಾರಿಗೆ ಸತತ ಎರಡು ಟಿ20 ಪಂದ್ಯವನ್ನು ಗೆದ್ದಿತು.

3 / 8
ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪಂದ್ಯ ಸೋತ ಬಳಿಕ ಮಾತನಾಡಿದ್ದು, ನಿಜ ಹೇಳಬೇಕೆಂದರೆ ನಮ್ಮದು ಸಂತೋಷಕರವಾದ ಬ್ಯಾಟಿಂಗ್ ಪ್ರದರ್ಶನವಲ್ಲ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು. 160+ ಅಥವಾ 170 ರನ್ ಗಳಿಸುತ್ತಿದ್ದರೆ ಅದು ಉತ್ತಮ ಸ್ಕೋರ್ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

4 / 8
ವೆಸ್ಟ್ ಇಂಡೀಸ್ ಬ್ಯಾಟಿಂಗ್ ಅದ್ಭುತವಾಗಿತ್ತು. ಅವರು ಸ್ಪಿನ್ನರ್​ಗಳ ಮರ್ಮವನ್ನು ಅರಿತು ಚೆನ್ನಾಗಿ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ 2 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದರೂ ನಂತರ ಅವರು ಕಮ್​ಬ್ಯಾಕ್ ಮಾಡಿ ಬ್ಯಾಟಿಂಗ್ ಮಾಡಿದ ರೀತಿ ಜಯಕ್ಕೆ ಕಾರಣವಾಯಿತು ಎಂಬುದು ಹಾರ್ದಿಕ್ ಪಾಂಡ್ಯ ಮಾತು.

5 / 8
ನಾವು ಈಗಿರುವ ಸಂದರ್ಭದಲ್ಲಿ ನಮ್ಮ ಅಗ್ರ 7 ಬ್ಯಾಟರ್​ಗಳನ್ನಷ್ಟೆ ನಂಬಬೇಕು. ಜೊತೆಗೆ ಬೌಲರ್​ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಎಂದು ಅಂದುಕೊಳ್ಳಬೇಕು. ನಮ್ಮ ತಂಡ ಸರಿಯಾಗಿ ಬ್ಯಾಲೆನ್ಸ್ ಆಗಿದೆಯೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಮುಖ್ಯವಾಗಿ ಬ್ಯಾಟರ್​ಗಳು ಹೆಚ್ಚಿನ ಜವಾಬ್ದಾರಿ ಹೊರಬೇಕು - ಹಾರ್ದಿಕ್ ಪಾಂಡ್ಯ.

6 / 8
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ನಮಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಅವರ ಆಟದ ಶೈಲಿಯನ್ನು ಗಮನಿಸಿದರೆ ಇದು ಅವರ ಎರಡನೇ ಅಂತರರಾಷ್ಟ್ರೀಯ ಪಂದ್ಯ ಎಂದು ಅನಿಸುತ್ತಿಲ್ಲ ಎಂದು 51 ರನ್ ಸಿಡಿಸಿ ತಂಡಕ್ಕೆ ನೆರವಾಗಿ ತಿಲಕ್ ವರ್ಮಾ ಬಗ್ಗೆ ಹಾರ್ದಿಕ್ ಹೇಳಿದ್ದಾರೆ.

7 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮತ್ತೊಮ್ಮೆ ವೈಫಲ್ಯ ಅನುಭವಿಸಿತು. ಶುಭ್​ಮನ್ ಗಿಲ್ 7 ರನ್​ಗೆ ಔಟಾದರೆ, ಸೂರ್ಯಕುಮಾರ್ ಯಾದವ್ 1, ಇಶಾನ್ ಕಿಶನ್ 27, ಸ್ಯಾಮ್ಸನ್ 7, ನಾಯಕ ಹಾರ್ದಿಕ್ ಪಾಂಡ್ಯ 24 ರನ್​ಗೆ ಔಟಾದರು. ತಿಲಕ್ ವರ್ಮಾ 41 ಎಸೆತಗಳಲ್ಲಿ 51 ರನ್ ಸಿಡಿಸಿದರು. ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತು.

8 / 8
ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ 40 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. 18.5 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ ವಿಂಡೀಸ್ ಜಯ ಸಾಧಿಸಿತು.

Published On - 7:39 am, Mon, 7 August 23