6,6,6,6,6,6,6: ಹ್ಯಾರಿಸ್ ರೌಫ್​ನ ಚೆಂಡಾಡಿದ ಸೌತ್ ಆಫ್ರಿಕನ್ನರು..!

|

Updated on: Dec 16, 2024 | 6:33 AM

Pakistan vs South Africa: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಸೌತ್ ಆಫ್ರಿಕಾ ಕ್ಲೀನ್ ಸ್ವೀಪ್ ಮಾಡಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 11 ರನ್​​ಗಳಿಂದ ಗೆದ್ದಿದ್ದ ಸೌತ್ ಆಫ್ರಿಕಾ ದ್ವಿತೀಯ ಪಂದ್ಯದಲ್ಲಿ 7 ವಿಕೆಟ್​​ಗಳ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯವು ಮಳೆಯ ಕಾರಣ ರದ್ದಾಗಿದೆ.

1 / 6
4 ಓವರ್​ಗಳಲ್ಲಿ ಬರೋಬ್ಬರಿ 57 ರನ್​​ಗಳು... ಈ ಐವತ್ತೇಳು ರನ್​ಗಳಲ್ಲಿ ಚಚ್ಚಿಸಿಕೊಂಡ ಸಿಕ್ಸ್​​ಗಳ ಸಂಖ್ಯೆ ಬರೋಬ್ಬರಿ 7. ಹೀಗೆ ಸೌತ್ ಆಫ್ರಿಕಾ ಬ್ಯಾಟರ್​​ಗಳ ಅಬ್ಬರಕ್ಕೆ ತತ್ತರಿಸಿದ ಬೌಲರ್ ಹೆಸರು ಹ್ಯಾರಿಸ್ ರೌಫ್.

2 / 6
ಸೆಂಚುರಿಯನ್​​ನ ಸೂಪರ್​​ಸ್ಪೋರ್ಟ್ ​ಪಾರ್ಕ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸೈಮ್ ಅಯ್ಯೂಬ್ (98) ಅರ್ಧಶತಕ ಬಾರಿಸಿದರೆ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಇರ್ಫಾನ್ ಖಾನ್ 30 ರನ್ ಚಚ್ಚಿದರು. ಪರಿಣಾಮ 20 ಓವರ್​ಗಳಲ್ಲಿ ಪಾಕ್ ತಂಡದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 206 ಕ್ಕೆ ಬಂದು ನಿಂತಿತು.

3 / 6
ಬಲಿಷ್ಠ ಬೌಲಿಂಗ್ ಬಳಗವನ್ನು ಹೊಂದಿದ್ದ ಪಾಕಿಸ್ತಾನ್ ತಂಡವು ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದರು. ಆದರೆ ಈ ವಿಶ್ವಾಸವನ್ನು ಸೌತ್ ಆಫ್ರಿಕಾ ಆರಂಭಿಕ ರೀಝ ಹೆಂಡ್ರಿಕ್ಸ್ ಪವರ್​ಪ್ಲೇನಲ್ಲೇ ಕುಗಿಸಿದ್ದರು. ಏಕೆಂದರೆ ಮೊದಲ ಆರು ಓವರ್​​ಗಳಲ್ಲೇ ಸೌತ್ ಆಫ್ರಿಕಾ ತಂಡ 52 ರನ್​ ಕಲೆಹಾಕಿತು.

4 / 6
ಅದರಲ್ಲೂ ಹ್ಯಾರಿಸ್ ರೌಫ್ ಎಸೆದ ಮೊದಲ ಓವರ್​ನಲ್ಲೇ ರೀಝ ಹೆಂಡ್ರಿಕ್ಸ್ 2 ಭರ್ಜರಿ ಸಿಕ್ಸ್​ಗಳೊಂದಿಗೆ 14 ರನ್ ಕಲೆಹಾಕಿದ್ದರು. ಇನ್ನು 11ನೇ ಓವರ್​​ನಲ್ಲಿ ಮರಳಿದ ರೌಫ್​ಗೆ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತೆರಡು ಸಿಕ್ಸ್ ಸಿಡಿಸಿದರು. ಈ ಓವರ್​ನಲ್ಲೂ 14 ರನ್ ಮೂಡಿಬಂತು.

5 / 6
ಇದಾದ ಬಳಿಕ ಹ್ಯಾರಿಸ್ ರೌಫ್ 16ನೇ ಓವರ್ ಎಸೆದರು. ಈ ಬಾರಿ ಕೂಡ ರೀಝ ಹೆಂಡ್ರಿಕ್ಸ್ 2 ಭರ್ಜರಿ ಸಿಕ್ಸ್ ಸಿಡಿಸಿ ಒಟ್ಟು 16 ರನ್ ಚಚ್ಚಿದರು. ಇನ್ನು 19ನೇ ಓವರ್​ನಲ್ಲಿ ಮರಳಿದ ಹ್ಯಾರಿಸ್ ರೌಫ್ ಓವರ್​ನಲ್ಲಿ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 1 ಸಿಕ್ಸ್ ಬಾರಿಸಿ ಒಟ್ಟು 13 ರನ್ ಕಲೆಹಾಕಿದರು.

6 / 6
ಈ ಮೂಲಕ ಹ್ಯಾರಿಸ್ ರೌಫ್ 4 ಓವರ್​​ಗಳಲ್ಲಿ 7 ಸಿಕ್ಸ್ ಹಾಗೂ 1 ಫೋರ್​ ಚಚ್ಚಿಸಿಕೊಂಡು ಬರೋಬ್ಬರಿ 57 ರನ್​​ ನೀಡಿದರು. ಈ ಐವತ್ತೇಳು ರನ್​​ಗಳೊಂದಿಗೆ ಸೌತ್ ಆಫ್ರಿಕಾ ತಂಡ 19.3 ಓವರ್​​ಗಳಲ್ಲಿ 210 ರನ್​​ ಕಲೆಹಾಕಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.