IPL 2023: 400 ರನ್ ನೀಡಿದ ಹರ್ಷಲ್ ಪಟೇಲ್

Edited By:

Updated on: May 20, 2023 | 9:43 PM

IPL 2023 Kannada: ಅನುಭವಿ ವೇಗಿ ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್​ನಲ್ಲಿ 9 ರನ್ ನೀಡಿದರು. ಹಾಗೆಯೇ 2ನೇ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿ ಮತ್ತೆ ಲಯಕ್ಕೆ ಮರಳಿದ್ದರು.

1 / 7
IPL 2023: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲೂ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ದುಬಾರಿಯಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

IPL 2023: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 65ನೇ ಪಂದ್ಯದಲ್ಲೂ ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ದುಬಾರಿಯಾಗಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

2 / 7

ಅದರಂತೆ ಮೊದಲ ಓವರ್​ನಲ್ಲಿ ಮಾರಕ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಸಿರಾಜ್ ಆರ್​ಸಿಬಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇನ್ನು ವೇಯ್ನ್ ಪಾರ್ನೆಲ್ 2ನೇ ಓವರ್​ನಲ್ಲಿ ನೀಡಿದ್ದು ಕೇವಲ 5 ರನ್. ಅದರಂತೆ ಎಸ್​ಆರ್​ಹೆಚ್ ತಂಡವು ಮೊದಲೆರಡು ಓವರ್​ಗಳಲ್ಲಿ ಕೇವಲ 7 ರನ್​ ಮಾತ್ರ ಗಳಿಸಿದ್ದರು.

3 / 7

ಇನ್ನು ಐದನೇ ಓವರ್​ ವೇಳೆ ದಾಳಿಗಿಳಿದ ಮೈಕೆಲ್ ಬ್ರೇಸ್​ವೆಲ್ 6 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಆ ನಂತರ ಶಹಬಾಝ್ ಅಹ್ಮದ್ ಒಂದೇ ಓವರ್​ನಲ್ಲಿ 16 ರನ್ ಚಚ್ಚಿಸಿಕೊಂಡರು.

4 / 7

ಇದಾದ ಬಳಿಕ ದಾಗಿಳಿದ ಅನುಭವಿ ವೇಗಿ ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್​ನಲ್ಲಿ 9 ರನ್ ನೀಡಿದರು. ಹಾಗೆಯೇ 2ನೇ ಓವರ್​ನಲ್ಲಿ ಕೇವಲ 5 ರನ್ ಮಾತ್ರ ನೀಡಿ ಮತ್ತೆ ಲಯಕ್ಕೆ ಬಂದಿದ್ದರು. ಇನ್ನು 16ನೇ ಓವರ್​ನಲ್ಲಿ ನೀಡಿದ್ದು 8 ರನ್ ಮಾತ್ರ.

5 / 7

ಆದರೆ 19ನೇ ಓವರ್​ನಲ್ಲಿ 15 ರನ್​ ಚಚ್ಚಿಸಿಕೊಳ್ಳುವ ಮೂಲಕ ಹರ್ಷಲ್ ಪಟೇಲ್ ಮತ್ತೆ ದುಬಾರಿಯಾದರು. ಅಲ್ಲದೆ 4 ಓವರ್​ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರು.

6 / 7

ಈ 37 ರನ್ಗಳೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಅತೀ ಹೆಚ್ಚು ರನ್ ನೀಡಿದ ಬೌಲರ್ ಆಗಿ ಹರ್ಷಲ್ ಪಟೇಲ್ ಹೊರಹೊಮ್ಮಿದ್ದಾರೆ. 12 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಹರ್ಷಲ್ ಪಟೇಲ್ 258 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವ ಒಟ್ಟು ಸ್ಕೋರ್ 425 ರನ್ಗಳು.

7 / 7

ಅಂದರೆ 12 ಪಂದ್ಯಗಳಲ್ಲಿ ಪ್ರತಿ ಓವರ್ಗೆ 9.88 ಸರಾಸರಿಯಲ್ಲಿ ರನ್ ನೀಡುವ ಮೂಲಕ ಹರ್ಷಲ್ ಪಟೇಲ್ ದುಬಾರಿಯಾಗಿದ್ದಾರೆ. ಅಚ್ಚರಿ ಎಂದರೆ ಪವರ್ಪ್ಲೇನಲ್ಲಿ ಬೌಲಿಂಗ್ ಮಾಡದಿದ್ದರೂ ಇಷ್ಟೊಂದು ರನ್ ಬಿಟ್ಟುಕೊಟ್ಟಿರುವುದು ಕೂಡ ಅಚ್ಚರಿ. ಇದಾಗ್ಯೂ 13 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Published On - 11:16 pm, Thu, 18 May 23

Loading...
Unable to load recommendations.
Follow Us