4 ಓವರ್ ಮೇಡನ್… ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ಆಯುಷ್ ಶುಕ್ಲಾ
Hong Kong vs Mongolia: ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗೋಲಿಯಾ ತಂಡವು 14.2 ಓವರ್ಗಳಲ್ಲಿ ಕೇವಲ 17 ರನ್ಗಳಿಸಿ ಆಲೌಟ್ ಆಗಿದೆ. ಈ ಗುರಿಯನ್ನು ಬೆನ್ನತ್ತಿದ ಹಾಂಗ್ ಕಾಂಗ್ ತಂಡವು 1.4 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 18 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
1 / 7
ಎಸೆದಿದ್ದು 4 ಓವರ್.... ಪಡೆದಿದ್ದು 1 ವಿಕೆಟ್... ನೀಡಿದ್ದು 0 ರನ್. ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಪಂದ್ಯವೊಂದರಲ್ಲಿ ನಾಲ್ಕು ಮೇಡನ್ ಓವರ್ ಎಸೆಯುವ ಮೂಲಕ ಆಯುಷ್ ಶುಕ್ಲಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೌಲಾಲಂಪುರದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಆಯುಷ್ ಈ ಸಾಧನೆ ಮಾಡಿದ್ದಾರೆ.
2 / 7
ಈ ಪಂದ್ಯದಲ್ಲಿ ಹಾಂಗ್ ಕಾಂಗ್ ಮತ್ತು ಮಂಗೋಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಮಂಗೋಲಿಯಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆಯುಷ್ ಶುಕ್ಲಾ ನೀಡಿದ ಮೊದಲ ಆಘಾತದಿಂದ ಮಂಗೋಲಿಯಾ ತಂಡವು ಚೇತರಿಸಿಕೊಳ್ಳಲೇ ಇಲ್ಲ.
3 / 7
ಮೊದಲ ಓವರ್ನ ಕೊನೆಯ ಎಸೆತದಲ್ಲಿ ಮೊದಲ ವಿಕೆಟ್ ಪಡೆಯುವ ಮೂಲಕ ಆಯುಷ್ ಶುಕ್ಲಾ ಹಾಂಗ್ ಕಾಂಗ್ ಪರ ಶುಭಾರಂಭ ಮಾಡಿದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಓವರ್ಗಳನ್ನು ಎಸೆದರೂ ಮಂಗೋಲಿಯಾ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಇತ್ತ ಅತ್ಯುತ್ತಮ ಸ್ಪಿನ್ನಿಂಗ್ನೊಂದಿಗೆ ಆಯುಷ್ ಶುಕ್ಲಾ 4 ಓವರ್ಗಳನ್ನು ಮೇಡನ್ ಮಾಡಿದರು.
4 / 7
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 4 ಓವರ್ಗಳನ್ನು ಮೇಡನ್ ಮಾಡಿದ ಏಷ್ಯಾದ ಮೊದಲ ಬೌಲರ್ ಎನಿಸಿಕೊಂಡರು. ಅಷ್ಟೇ ಅಲ್ಲದೆ ಈ ಸಾಧನೆಗೈದ ವಿಶ್ವದ ಮೂರನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಲಾಕಿ ಫರ್ಗುಸನ್ ಹಾಗೂ ಸಾದ್ ಬಿನ್ ಝಫರ್ ಈ ಸಾಧನೆ ಮಾಡಿದ್ದರು.
5 / 7
2024ರ ಟಿ20 ವಿಶ್ವಕಪ್ನಲ್ಲಿ ಪಪುವಾ ನ್ಯೂ ಗಿನಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ 4 ಮೇಡನ್ ಓವರ್ ಎಸೆದಿದ್ದರು. ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಫರ್ಗುಸನ್ ಯಾವುದೇ ರನ್ ನೀಡದೇ 3 ವಿಕೆಟ್ ಕಬಳಿಸಿ ಮಿಂಚಿದ್ದರು.
6 / 7
ಇದಕ್ಕೂ ಮುನ್ನ 2021 ರಲ್ಲಿ ಪನಾಮ ವಿರುದ್ಧದ ಪಂದ್ಯದಲ್ಲಿ ಕೆನಡಾ ಬೌಲರ್ ಸಾದ್ ಬಿನ್ ಝಫರ್ 4 ಓವರ್ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 4 ಮೇಡನ್ ಓವರ್ ಎಸೆದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದರು.
7 / 7
ಇದೀಗ ಮಂಗೋಲಿಯಾ ವಿರುದ್ಧ 4 ಓವರ್ಗಳಲ್ಲಿ ಯಾವುದೇ ರನ್ ನೀಡದೇ ಹಾಂಗ್ ಕಾಂಗ್ ಸ್ಪಿನ್ನರ್ ಆಯುಷ್ ಶುಕ್ಲಾ 1 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 4 ಓವರ್ಗಳನ್ನು ಮೇಡನ್ ಮಾಡಿದ ವಿಶ್ವದ ಮೂರನೇ ಹಾಗೂ ಏಷ್ಯಾದ ಮೊದಲ ಬೌಲರ್ ಎಂಬ ದಾಖಲೆಯನ್ನು ಆಯುಷ್ ತಮ್ಮದಾಗಿಸಿಕೊಂಡಿದ್ದಾರೆ.