ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ನಾಲ್ವರ ನಾಮನಿರ್ದೇಶನ; ರೇಸ್ನಲ್ಲಿ ಒಬ್ಬ ಭಾರತೀಯ..!
ICC Men's Test Cricketer of the Year 2023: 2023 ರಲ್ಲಿ ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಆಟಗಾರರನ್ನು ಐಸಿಸಿ, ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ 2023 ಗೆ ನಾಮನಿರ್ದೇಶನ ಮಾಡಿದೆ. ಈ ನಾಲ್ವರು ಆಟಗಾರರ ಪೈಕಿ ಭಾರತದ ಏಕೈಕ ಆಟಗಾರ ಆರ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಇಬ್ಬರು ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ಸೇರಿದ್ದಾರೆ.
1 / 6
2023 ರಲ್ಲಿ ಟೆಸ್ಟ್ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ವರು ಆಟಗಾರರನ್ನು ಐಸಿಸಿ, ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ 2023 ಗೆ ನಾಮನಿರ್ದೇಶನ ಮಾಡಿದೆ. ಈ ನಾಲ್ವರು ಆಟಗಾರರ ಪೈಕಿ ಭಾರತದ ಏಕೈಕ ಆಟಗಾರ ಆರ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಇಬ್ಬರು ಆಟಗಾರರಾದ ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ಸೇರಿದ್ದಾರೆ.
2 / 6
ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ತಂಡಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ . ಆರ್ ಅಶ್ವಿನ್ ಕಳೆದ ವರ್ಷ ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಹೀಗಾಗಿ ಅಶ್ವಿನ್ಗೆ ಈ ಅವಕಾಶ ದೊರೆತಿದೆ.
3 / 6
2023 ರಲ್ಲಿ, ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಶ್ವಿನ್ ಈ ವರ್ಷ ಆಡಿದ 7 ಟೆಸ್ಟ್ ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 41 ವಿಕೆಟ್ ಪಡೆದಿದ್ದಾರೆ ಮತ್ತು 4 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಟೆಸ್ಟ್‌ನಲ್ಲಿ ಅಶ್ವಿನ್ ಅವರ ಅತ್ಯುತ್ತಮ ಪ್ರದರ್ಶನವೆಂದರೆ 71 ರನ್‌ಗಳಿಗೆ 7 ವಿಕೆಟ್ ಪಡೆದಿರುವುದಾಗಿದೆ.
4 / 6
ಕಳೆದ ವರ್ಷ, ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅವರು 13 ಟೆಸ್ಟ್ ಪಂದ್ಯಗಳಲ್ಲಿ 3 ಶತಕ ಮತ್ತು 6 ಅರ್ಧ ಶತಕಗಳನ್ನು ಒಳಗೊಂಡಂತೆ 52.60 ಸರಾಸರಿಯೊಂದಿಗೆ 1210 ರನ್ ಕಲೆಹಾಕಿದ್ದರು. ಇದರೊಂದಿಗೆ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
5 / 6
ಇನ್ನು ಟ್ರಾವಿಸ್ ಹೆಡ್ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಅಂದರೆ 2023 ರಲ್ಲಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಹೆಡ್ ಮೂರನೇ ಸ್ಥಾನದಲ್ಲಿದ್ದರು. ಆಡಿದ 12 ಪಂದ್ಯಗಳಲ್ಲಿ 41.77 ಸರಾಸರಿಯಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ ಹೆಡ್ 919 ರನ್ ಕಲೆಹಾಕಿದ್ದರು. ಕಳೆದ ವರ್ಷ ಅವರ ಅತ್ಯುತ್ತಮ ಸ್ಕೋರ್ 163 ರನ್ ಆಗಿತ್ತು.
6 / 6
ಹಾಗೆಯೇ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಕಳೆದ ವರ್ಷ ಆಡಿದ 8 ಪಂದ್ಯಗಳಲ್ಲಿ 65.58 ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧ ಶತಕಗಳನ್ನು ಒಳಗೊಂಡಂತೆ 787 ರನ್ ಸಿಡಿಸಿದ್ದರು. ಟೆಸ್ಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೂಟ್ 5 ನೇ ಸ್ಥಾನದಲ್ಲಿದ್ದರೆ, ಈ ವರ್ಷದ ಅವರ ಅತ್ಯುತ್ತಮ ಸ್ಕೋರ್ 153 ಔಟಾಗದೆ.