Updated on: Oct 02, 2022 | 1:55 PM
ಟಿ20 ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಚುಟುಕು ಕದನದಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದೆ. ಇದರಲ್ಲಿ 8 ತಂಡಗಳು ನೇರವಾಗಿ ಸೂಪರ್ 12 ಗೆ ಅರ್ಹತೆ ಪಡೆದರೆ, ಇನ್ನುಳಿದ 8 ತಂಡಗಳಲ್ಲಿ 4 ತಂಡಗಳು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಡಲಿದೆ.
ಇತ್ತ ಟಿ20 ವಿಶ್ವಕಪ್ಗೆ ದಿನಗಳು ಮಾತ್ರ ಉಳಿದಿರುವಾಗ ಈ ಬಾರಿ ಮಿಂಚಬಲ್ಲ ಐದು ಆಟಗಾರರನ್ನು ಒಳಗೊಂಡ ವಿಶೇಷ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಕಳೆದ ಟಿ20 ವಿಶ್ವಕಪ್ನಲ್ಲಿ 289 ರನ್ ಬಾರಿಸುವ ಮೂಲಕ ಅಬ್ಬರಿಸಿದ್ದ ಡೇವಿಡ್ ವಾರ್ನರ್ ಈ ಬಾರಿ ತವರಿನಲ್ಲೂ ಅಬ್ಬರಿಸುವ ನಿರೀಕ್ಷೆಯನ್ನು ಐಸಿಸಿ ವ್ಯಕ್ತಪಡಿಸಿದೆ.
ವನಿಂದು ಹಸರಂಗ (ಶ್ರೀಲಂಕಾ); ಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ 2021 ರ ಟಿ20 ವಿಶ್ವಕಪ್ನಲ್ಲಿ 21 ವಿಕೆಟ್ ಕಬಳಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾದಲ್ಲೂ ಶ್ರೀಲಂಕಾ ಸ್ಪಿನ್ನರ್ ಮೋಡಿ ಮಾಡುವ ನಿರೀಕ್ಷೆಯಿದೆ.
ಜೋಸ್ ಬಟ್ಲರ್ (ಇಂಗ್ಲೆಂಡ್): ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಕಳೆದ ಒಂದು ವರ್ಷದಿಂದ ಉತ್ತಮ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ವೇಗದ ಪಿಚ್ನಲ್ಲಿ ಅಬ್ಬರಿಸುವ ಬಟ್ಲರ್ ಆಸ್ಟ್ರೇಲಿಯಾದಲ್ಲೂ ಸ್ಪೋಟಕ ಇನಿಂಗ್ಸ್ ಆಡುವ ವಿಶ್ವಾಸ ವ್ಯಕ್ತಪಡಿಸಿದೆ ಐಸಿಸಿ.
ಸೂರ್ಯಕುಮಾರ್ ಯಾದವ್ (ಭಾರತ): ಟೀಮ್ ಇಂಡಿಯಾದ ಹೊಸ ಸೆನ್ಸೇಷನ್ ಸೂರ್ಯಕುಮಾರ್ ಯಾದವ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭರ್ಜರಿ ಫಾರ್ಮ್ನಲ್ಲಿರುವ ಭಾರತದ 360 ಡಿಗ್ರಿ ಬ್ಯಾಟ್ಸ್ಮನ್ ಆಸೀಸ್ ನೆಲದಲ್ಲಿ ಅಬ್ಬರಿಸುವ ನಿರೀಕ್ಷೆಯನ್ನು ಐಸಿಸಿ ಹೊಂದಿದೆ.
ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್): ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಜ್ವಾನ್ ಸಹ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಬ್ಬರಿಸುವ ಸಾಧ್ಯತೆಯಿದೆ ಎಂದು ಐಸಿಸಿ ವಿಶ್ವಾಸ ವ್ಯಕ್ತಪಡಿಸಿದೆ. ಏಕೆಂದರೆ 2021 ರ ಟಿ20 ವಿಶ್ವಕಪ್ನಲ್ಲಿ ರಿಜ್ವಾನ್ ಬ್ಯಾಟ್ನಿಂದ 281 ರನ್ಗಳು ಮೂಡಿಬಂದಿತ್ತು. ಹೀಗಾಗಿ ಅದೇ ಫಾರ್ಮ್ನ್ನು ಆಸ್ಟ್ರೇಲಿಯಾದಲ್ಲೂ ಮುಂದುವರೆಸುವ ನಿರೀಕ್ಷೆಯಿದೆ.