ICC ODI Rankings: ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ ಗಿಲ್; ಅಗ್ರ ಐವರಲ್ಲಿ ಮೂವರು ಭಾರತೀಯರು

Updated on: Jun 24, 2026 | 3:55 PM

ICC ODI Rankings: ICC ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಆಟಗಾರರ ಪ್ರಾಬಲ್ಯ ಮುಂದುವರಿದಿದೆ. ಅಫ್ಘಾನಿಸ್ತಾನ ಸರಣಿ ಬಳಿಕ ಶುಭ್​ಮನ್ ಗಿಲ್ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಮೂರನೇ ಸ್ಥಾನಕ್ಕೆ ಕುಸಿದರೆ, ರೋಹಿತ್ ಶರ್ಮಾ ಟಾಪ್ 5 ರಲ್ಲಿದ್ದಾರೆ. ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡಾ ಗಮನಾರ್ಹ ಏರಿಕೆ ಕಂಡಿದ್ದು, ಭಾರತೀಯ ಆಟಗಾರರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಿಂಚಿದ್ದಾರೆ.

1 / 5
ಐಸಿಸಿ ಬಿಡುಗಡೆ ಮಾಡಿರುವ ಇತ್ತೀಚಿನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರರ ಪ್ರಾಬಲ್ಯ ಮುಂದುವರೆದಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಆಟಗಾರರೆಲ್ಲ  ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಮುಂಬಡ್ತಿ ಪಡೆದಿದ್ದಾರೆ. ಅದರಲ್ಲೂ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅಫ್ಘಾನಿಸ್ತಾನದ ವಿರುದ್ಧ ಅಬ್ಬರಿಸಿದ್ದ ಶುಭ್​ಮನ್ ಗಿಲ್, ಏಕದಿನ ರ್ಯಾಂಕಿಂಗ್​ನಲ್ಲಿ ಕಿಂಗ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ (PC-PTI).

2 / 5
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಕೊಹ್ಲಿ ತಪ್ಪಿಸಿಕೊಂಡಿದ್ದರು. ಹೀಗಾಗಿ ಕೊಹ್ಲಿ ಏಕದಿನ ರ್ಯಾಂಕಿಂಗ್​ನಲ್ಲಿ ಕುಸಿತ ಅನುಭವಿಸಿದ್ದಾರೆ. ಇದರ ಫಲವಾಗಿ ಶುಭ್​ಮನ್ ಗಿಲ್, ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಮುಂಬಡ್ತಿ ಪಡೆದಿದ್ದಾರೆ (PC-PTI).

3 / 5
ಶುಭ್​ಮನ್ ಗಿಲ್ 791 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 816ರೇಟಿಂಗ್ ಪಾಯಿಂಟ್‌ ಹೊಂದಿದ್ದಾರೆ. ಅಫ್ಘನ್ ವಿರುದ್ಧದ ಏಕದಿನ ಸರಣಿಗೂ ಮುನ್ನ 5ನೇ ಸ್ಥಾನದಲ್ಲಿದ್ದ ಗಿಲ್, ಮೊದಲ ಏಕದಿನದಲ್ಲಿ  84 ರನ್ ಮತ್ತು ಎರಡನೇ ಏಕದಿನದಲ್ಲಿ 154 ರನ್​ಗಳ ಇನ್ನಿಂಗ್ಸ್ ಆಡಿದ್ದರು (PC-PTI).

4 / 5
ಮತ್ತೊಂದೆಡೆ, ಏಕದಿನ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿತ ಕಂಡಿರುವ ವಿರಾಟ್ ಕೊಹ್ಲಿ ಈಗ 768 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದು ಟಾಪ್ 5 ರೊಳಗೆ ಕಾಣಿಸಿಕೊಂಡ ಮೂರನೇ ಭಾರತೀಯ ಆಟಗಾರನೆನಿಸಿಕೊಂಡಿದ್ದಾರೆ. ಆದರೆ ಕೆಎಲ್ ರಾಹುಲ್ ಎರಡು ಸ್ಥಾನ ಕುಸಿದು ಟಾಪ್ 10 ರಿಂದ ಹೊರಬಿದ್ದಿದ್ದಾರೆ (PC-PTI).

5 / 5
78 ಎಸೆತಗಳಲ್ಲಿ 125 ರನ್ ಬಾರಿಸಿದ್ದ ಇಶಾನ್ ಕಿಶನ್ 21 ಸ್ಥಾನಗಳ ಜಿಗಿದು 43 ನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದ ಯಶಸ್ವಿ ಜೈಸ್ವಾಲ್ 84 ಸ್ಥಾನಗಳ ಏರಿಕೆ ಕಂಡು 71 ನೇ ಸ್ಥಾನಕ್ಕೆ ತಲುಪಿದ್ದಾರೆ. ಅಜೇಯ 110 ರನ್ ಗಳಿಸಿದ್ದರೂ, ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ (PC-PTI).

Published On - 3:55 pm, Wed, 24 June 26

Follow Us