Mohammed Shami: ತಂಡಕ್ಕೆ ಅಗತ್ಯವಿಲ್ಲ ಎಂದು ಕೈಬಿಟ್ಟದ್ದರು: ಮೊಹಮ್ಮದ್ ಶಮಿಯ ಕಮ್​ಬ್ಯಾಕ್ ಕಥೆಯೇ ರೋಚಕ

Updated on: Nov 16, 2023 | 12:18 PM

India vs New Zealand, ICC ODI World Cup Semi Final 1: ಇಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾರತ ಫೈನಲ್​ಗೇರಲು ಪ್ರಮುಖ ಕಾರಣರಾಗಿರುವ ಇದೇ ಮೊಹಮ್ಮದ್ ಶಮಿ ಶಮಿ ಕೆಲವೇ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅನೇಕ ಬಾರಿ ತಂಡದಿಂದ ಹೊರಗುಳಿದಿದ್ದರು. ಐಪಿಎಲ್​ನಲ್ಲೂ ಇವರಿಗೆ ಘನತೆಗೆ ತಕ್ಕ ಗೌರವ ಸಿಗಲಿಲ್ಲ.

1 / 8
ಬುಧವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಫೈನಲ್​ಗೆ ಲಗ್ಗೆಯಿಟ್ಟಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ರೋಹಿತ್ ಪಡೆ 70 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಬುಧವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಝಿಲೆಂಡ್ ತಂಡವನ್ನು ಸೋಲಿಸಿ ಫೈನಲ್​ಗೆ ಲಗ್ಗೆಯಿಟ್ಟಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವನ್ನು ರೋಹಿತ್ ಪಡೆ 70 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

2 / 8

ಭಾರತದ ಪರ ವೇಗಿ ಮೊಹಮ್ಮದ್ ಶಮಿ ಕಿವೀಸ್ ಪಡೆಗೆ ಕಂಟಕವಾಗಿ ಪರಿಣಮಿಸಿದರು. ಶಮಿ 9.5 ಓವರ್​ಗಳಲ್ಲಿ 57 ರನ್ ನೀಡಿ 7 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಜೊತೆಗೆ ಅನೇಕ ದಾಖಲೆ ಬರೆದರು. ಇಂದು ಶಮಿ ವಿಶ್ವದ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಶಮಿಯ ಈ ಸಾಧನೆ ಹಿಂದೆ ನೋವಿನ ಕಥೆ ಇದೆ.

3 / 8

ಇಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಾ ಭಾರತ ಫೈನಲ್​ಗೇರಲು ಪ್ರಮುಖ ಕಾರಣರಾಗಿರುವ ಇದೇ ಶಮಿ ಕೆಲವೇ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅನೇಕ ಬಾರಿ ತಂಡದಿಂದ ಹೊರಗುಳಿದಿದ್ದರು. ಐಪಿಎಲ್​ನಲ್ಲೂ ಇವರಿಗೆ ಘನತೆಗೆ ತಕ್ಕ ಗೌರವ ಸಿಗಲಿಲ್ಲ.

4 / 8

2013ರ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಶಮಿ ಮೊದಲ ಪಂದ್ಯದಲ್ಲಿ ಪಡೆದಿದ್ದು 1 ವಿಕೆಟ್. ನಂತರ ಎದುರಾಳಿಗರಿಗೆ ಕಂಟಕವಾಗುತ್ತಾ ಸಾಗಿದ ಶಮಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಆಗಿ ಹೊರಹೊಮ್ಮಿದರು.

5 / 8

ಆದರೆ, ಮ್ಯಾನೇಜ್ಮೆಂಟ್ ಭಾರತ ತಂಡಕ್ಕೆ ಯುವ ಬೌಲರ್​ಗಳನ್ನು ಪರಿಚಯಿಸಲು ಮುಂದಾಯಿತು. ಆಗ ಶಮಿಯನ್ನು ತಂಡದಿಂದ ಕೈಬಿಡಲಾಯಿತು. ಉತ್ತಮ ಲಯದಲ್ಲಿದ್ದರೂ ಶಮಿಗೆ ಅವಕಾಶ ಸಿಗಲಿಲ್ಲ. ಇದರ ನಡುವೆ 2015 ರ ವಿಶ್ವಕಪ್ ನಂತರ ಇಂಜುರಿಗೆ ಕೂಡ ಒಳಗಾದರು. ಇದರಿಂದ ಚೇತರಿಸಿಕೊಳ್ಳಲು 18 ತಿಂಗಳುಗಳನ್ನು ತೆಗೆದುಕೊಂಡರು.

6 / 8

ಆ ಸಮಯ ತಂಡಕ್ಕೆ ಆಯ್ಕೆಯಾದರೂ ಅವಕಾಶ ಸಿಕ್ಕಿದ್ದು ಬೆರಳಣಿಕೆಯಷ್ಟು ಮಾತ್ರ. ನಂತರವೂ ಸಾಕಷ್ಟು ದಿನಗಳವರೆಗೆ ಟೀಮ್ ಇಂಡಿಯಾದಿಂದ ಹೊರಗುಳಿಯಬೇಕಾಯಿತು. ಅಲ್ಲದೆ ಕೌಟುಂಬಿಕ ಜೀವನವೂ ಸರಿಯಾಗಿರಲಿಲ್ಲ.

7 / 8

ಇಂಜುರಿ, ತಂಡದಲ್ಲಿ ಸ್ಥಾನವಿಲ್ಲ, ಕುಟುಂಬದಲ್ಲಿ ಸಮಸ್ಯೆ ಇದರಿಂದ ಬೇಸತ್ತ ಶಮಿ ಒಂದಲ್ಲ, ಎರಡಲ್ಲ.. ಬರೋಬ್ಬರಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಚಿಂತಿಸಿದ್ದರು. ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ವಿಧಿಸಿದ್ದಾಗ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿದ್ದ ಶಮಿ, ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದರು.

8 / 8

ಆದರೆ, ಇಂದು ಮೊಹಮ್ಮದ್ ಶಮಿ ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಶಮಿ ಬೌಲಿಂಗ್ ಮಾಡಲು ಬಂದರೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳೆಲ್ಲ ಇವರಿಗೆ ಬೆಂಬಲ ನೀಡುತ್ತಿದ್ದಾರೆ. ಸದ್ಯ ವಿಶ್ವಕಪ್ 2023 ರಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಶಮಿ ಆಡಿರುವ ಕೇವಲ 6 ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ.

Loading...
Unable to load recommendations.
Follow Us