ICC Test rankings: ಅಶ್ವಿನ್ ನಂ.1; ದಾಖಲೆಯ ಶತಕದ ಬಳಿಕ 8 ಸ್ಥಾನ ಮೇಲೇರಿದ ಕೊಹ್ಲಿ..!
ICC Test rankings: ಅಶ್ವಿನ್ ಸೇರಿದಂತೆ ಟಾಪ್ 10 ಐಸಿಸಿ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಜಸ್ಪ್ರೀತ್ ಬುಮ್ರಾ 7ನೇ ಸ್ಥಾನದಲ್ಲಿದ್ದರೆ, ಜಡೇಜಾ 9 ನೇ ಸ್ಥಾನದಲ್ಲಿದ್ದಾರೆ.
1 / 6
ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದ್ದು, ನೂತನ ಶ್ರೇಯಾಂಕದಲ್ಲಿ ಆರ್. ಅಶ್ವಿನ್ ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಸ್ಥಾನವನ್ನು ಅಲಂಕರೀಸಿದ್ದಾರೆ. ಈ ವಿಚಾರದಲ್ಲಿ ಅಶ್ವಿನ್, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 25 ವಿಕೆಟ್ ಪಡೆದ ಕಾರಣ ಅಶ್ವಿನ್ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.
2 / 6
ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ 869 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಜೇಮ್ಸ್ ಆಂಡರ್ಸನ್ 859 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಂದರೆ, ವಿಶ್ವದ ನಂಬರ್ ಒನ್ ಮತ್ತು ನಂಬರ್ 2 ಟೆಸ್ಟ್ ಬೌಲರ್‌ಗಳ ನಡುವೆ ಈಗ 10 ಅಂಕಗಳ ಅಂತರವಿದೆ. ಈಗ ಆಂಡರ್ಸನ್ ಈ ಅಂತರವನ್ನು ಕಡಿಮೆ ಮಾಡಲು ಆಶಸ್ ಸರಣಿಗಾಗಿ ಕಾಯಬೇಕಾಗಿದೆ. ಇತ್ತ, ಅಶ್ವಿನ್ ಅಂತರವನ್ನು ಹೆಚ್ಚಿಸಬೇಕಾದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮಿಂಚಬೇಕಾಗಿದೆ.
3 / 6
ಐಸಿಸಿಯ ಟೆಸ್ಟ್ ಬೌಲರ್‌ಗಳ ಇತ್ತೀಚಿನ ಶ್ರೇಯಾಂಕದಲ್ಲಿ ಟಾಪ್ 5 ರಲ್ಲಿರುವ ಏಕೈಕ ಸ್ಪಿನ್ನರ್ ಅಶ್ವಿನ್. ಇವರನ್ನು ಹೊರತುಪಡಿಸಿ ಉಳಿದ 4 ಮಂದಿ ವೇಗದ ಬೌಲರ್‌ಗಳಾಗಿದ್ದಾರೆ. ಆ್ಯಂಡರ್ಸನ್ ಹೊರತಾಗಿ, ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ (841 ರೇಟಿಂಗ್ ಪಾಯಿಂಟ್), ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (825) ಮತ್ತು ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ (787) ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.
4 / 6
ಅಶ್ವಿನ್ ಸೇರಿದಂತೆ ಟಾಪ್ 10 ಐಸಿಸಿ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಜಸ್ಪ್ರೀತ್ ಬುಮ್ರಾ 7ನೇ ಸ್ಥಾನದಲ್ಲಿದ್ದರೆ, ಜಡೇಜಾ 9 ನೇ ಸ್ಥಾನದಲ್ಲಿದ್ದಾರೆ.
5 / 6
ಇನ್ನು ಐಸಿಸಿ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಭರ್ಜರಿ ಮುಂಬಡ್ತಿ ಪಡೆದಿರುವ ಕೊಹ್ಲಿ 8 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ 13ನೇ ಸ್ಥಾನಕ್ಕೇರಿದ್ದಾರೆ.
6 / 6
ಕೊಹ್ಲಿಯನ್ನು ಹೊರತುಪಡಿಸಿ ರಿಷಬ್ ಪಂತ್ 9ನೇ ಸ್ಥಾನದಲ್ಲಿದ್ದಾರೆ, ನಾಯಕ ರೋಹಿತ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ.
Published On - 4:19 pm, Wed, 15 March 23