ICC Test Ranking: ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತೀಯರದ್ದೇ ಪಾರುಪತ್ಯ
ICC Test Ranking: ಇತ್ತೀಚೆಗೆ ಬಿಡುಗಡೆಯಾಗಿರುವ ನೂತನ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಆಲ್ರೌಂಡರ್ಸ್ಗಳೆ ಪಾರುಪತ್ಯ ಮೆರೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ, ಆಲ್ ರೌಂಡರ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
1 / 6
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರು ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ.
2 / 6
ಇತ್ತೀಚೆಗೆ ಬಿಡುಗಡೆಯಾಗಿರುವ ನೂತನ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಆಲ್ರೌಂಡರ್ಸ್ಗಳೆ ಪಾರುಪತ್ಯ ಮೆರೆದಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ, ಆಲ್ ರೌಂಡರ್‌ಗಳ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
3 / 6
ಉಳಿದಂತೆ ಈ ಪಟ್ಟಿಯಲ್ಲಿ ಅಗ್ರ ಐವರಲ್ಲಿ ಒಟ್ಟು ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದು, ಜಡೇಜಾ ಹೊರತುಪಡಿಸಿ, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕೂಡ ಈ ಪಟ್ಟಿಯ ಭಾಗವಾಗಿದ್ದಾರೆ. ಅಶ್ವಿನ್ 330 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಕ್ಷರ್ ಪಟೇಲ್ 281 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
4 / 6
ಇದಕ್ಕೂ ಮೊದಲು ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿದ್ದರು. ಆದರೆ ಬೆನ್ ಸ್ಟೋಕ್ಸ್ ಅವರ ಕಳಪೆ ಪ್ರದರ್ಶನದ ಲಾಭ ಪಡೆದಿರುವ ಅಕ್ಷರ್, ಸ್ಟೋಕ್ಸ್ರನ್ನು ಹಿಂದಕ್ಕೆ ತಳ್ಳಿ ತಾವು ಮೇಲಕ್ಕೇರಿದ್ದಾರೆ. ಹೀಗಾಗಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ಸಂಪೂರ್ಣ ಪ್ರಾಬಲ್ಯ ಗೋಚರಿಸುತ್ತಿದೆ. ಇದರಿಂದ ಟೀಂ ಇಂಡಿಯಾ ಗೆಲುವಿನಲ್ಲಿ ಆಲ್ ರೌಂಡರ್‌ಗಳ ಕೊಡುಗೆ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
5 / 6
ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಶತಕ ಸಿಡಿಸಿದ್ದು, ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಪಡೆದಿದ್ದರು. ರಾಜ್‌ಕೋಟ್ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ, ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ 469 ರೇಟಿಂಗ್ ಅಂಕಗಳನ್ನು ಸಂಪಾಧಿಸಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್ ಆಗಿದೆ.
6 / 6
ಈ ಮೂವರನ್ನು ಹೊರತುಪಡಿಸಿ ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಭಾರತದಿಂದ ಮತ್ತ್ಯಾವ ಆಟಗಾರನು ಟಾಪ್ 10ರೊಳಗೆ ಇರಲಿ, ಟಾಪ್ 35 ರೊಳಗೂ ಕಾಣಿಸಿಕೊಂಡಿಲ್ಲ. 36ನೇ ಸ್ಥಾನದಲ್ಲಿ ವೇಗಿ ಮೊಹಮ್ಮದ್ ಶಮಿ ಇದ್ದರೆ, 37ನೇ ಸ್ಥಾನದಲ್ಲಿ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಇದ್ದಾರೆ.