ಮುಂದುವರೆದು ಮಾತನಾಡಿರುವ ಗವಾಸ್ಕರ್, ಎರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವ ತೊರೆದ ನಂತರ ಅಶ್ವಿನ್ ಅವರನ್ನು ನಾಯಕನನ್ನಾಗಿ ಮಾಡಬೇಕಿತ್ತು. ಅಶ್ವಿನ್ ಒಬ್ಬ ಅದ್ಭುತ ಆಟಗಾರ, ಸಂಪೂರ್ಣ ಜವಾಬ್ದಾರಿಯೊಂದಿಗೆ ನಾಯಕನ ಪಾತ್ರವನ್ನು ನಿರ್ವಹಿಸುವ ಸಾಮಥ್ರ್ಯ ಆತನಲ್ಲಿತ್ತು. ರೋಹಿತ್ ಶರ್ಮಾ ಅವರನ್ನು ಎಲ್ಲಾ ಮೂರು ಸ್ವರೂಪಗಳ ನಾಯಕರನ್ನಾಗಿ ಮಾಡಬಾರದಿತ್ತು. ಇದರಿಂದಾಗಿಯೇ ರೋಹಿತ್ ಒತ್ತಡದಲ್ಲಿದ್ದಾರೆ. ರೋಹಿತ್ ಬದಲಿಗೆ ಅಶ್ವಿನ್ ಅವರನ್ನು ಟೆಸ್ಟ್ ನಾಯಕರನ್ನಾಗಿ ಮಾಡಬೇಕಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.