Updated on: Jul 05, 2023 | 7:01 PM
ICC Test Cricket Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಟೆಸ್ಟ್ ಬ್ಯಾಟರ್ಗಳ ಹೊಸ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ನ್ಯೂಝಿಲೆಂಡ್ನ ಕೇನ್ ವಿಲಿಯಮ್ಸನ್ (Kane Williamson) ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ಕಳೆದ 4 ತಿಂಗಳುಗಳಿಂದ ಮೈದಾನಕ್ಕಿಳಿದಿಲ್ಲ. ಇತ್ತ ಕಳೆದ ಬಾರಿ ನಂಬರ್ 1 ಸ್ಥಾನದಲ್ಲಿದ್ದ ಜೋ ರೂಟ್ ಲಾರ್ಡ್ಸ್ ಟೆಸ್ಟ್ನಲ್ಲಿ ವಿಫಲರಾಗುವುದರೊಂದಿಗೆ 4 ಸ್ಥಾನ ಕುಸಿತ ಕಂಡಿದ್ದಾರೆ. ಹೀಗಾಗಿ ಕೇನ್ ವಿಲಿಯಮ್ಸನ್ ಅಗ್ರಸ್ಥಾನಕ್ಕೇರಿದ್ದಾರೆ.
ಇನ್ನು ಆ್ಯಶಸ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಸ್ಟೀವ್ ಸ್ಮಿತ್ 4 ಸ್ಥಾನ ಮೇಲೇರಿದ್ದು, ಈ ಮೂಲಕ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ. ಅದರಂತೆ ಟೆಸ್ಟ್ ಬ್ಯಾಟರ್ಗಳ ನೂತನ ರ್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ...
1- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 883 ಪಾಯಿಂಟ್ಸ್
3- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 842 ಪಾಯಿಂಟ್ಸ್
5- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 826 ಪಾಯಿಂಟ್ಸ್
6- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 818 ಪಾಯಿಂಟ್ಸ್
2- ಜೋ ರೂಟ್ (ಇಂಗ್ಲೆಂಡ್)- 859 ಪಾಯಿಂಟ್ಸ್
4- ಬಾಬರ್ ಆಝಂ (ಪಾಕಿಸ್ತಾನ್)- 829 ಪಾಯಿಂಟ್ಸ್
7- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)- 796 ಪಾಯಿಂಟ್ಸ್
8- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)- 792 ಪಾಯಿಂಟ್ಸ್
9- ದಿಮುತ್ ಕರುಣರತ್ನೆ (ಶ್ರೀಲಂಕಾ)- 759 ಪಾಯಿಂಟ್ಸ್
10- ರಿಷಭ್ ಪಂತ್ (ಭಾರತ)- 758 ಪಾಯಿಂಟ್ಸ್
Published On - 3:31 pm, Wed, 5 July 23