ICC Test Rankings: ಬುಮ್ರಾ ಅಧಿಪತ್ಯ ಅಂತ್ಯ; ಮತ್ತೊಬ್ಬ ಭಾರತೀಯನಿಗೆ ನಂ.1 ಪಟ್ಟ..!
ICC Test Rankings: ಐಸಿಸಿ ಇಂದು ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಅದರಂತೆ ಇಷ್ಟು ದಿನ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿರುವ ಆರ್ ಅಶ್ವಿನ್ ಈಗ ಟೆಸ್ಟ್‌ನಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ.
1 / 8
ಐಸಿಸಿ ಇಂದು ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಅದರಂತೆ ಇಷ್ಟು ದಿನ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿರುವ ಆರ್ ಅಶ್ವಿನ್ ಈಗ ಟೆಸ್ಟ್‌ನಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ.
2 / 8
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ 10 ಇನ್ನಿಂಗ್ಸ್‌ಗಳಲ್ಲಿ 26 ವಿಕೆಟ್ ಉರುಳಿಸಿದ್ದ ಅಶ್ವಿನ್ ಒಂದು ಸ್ಥಾನವನ್ನು ಜಿಗಿಯುವ ಮೂಲಕ 870 ರೇಟಿಂಗ್ನೊಂದಿಗೆ ನಂಬರ್ 1 ಸ್ಥಾನಕ್ಕೇರಿದ್ದಾರೆ.
3 / 8
ಮತ್ತೊಂದೆಡೆ ಈ ಹಿಂದೆ ನಂಬರ್ 1 ಸ್ಥಾನದಲ್ಲಿದ್ದ ಜಸ್ಪ್ರೀತ್ ಬುಮ್ರಾ ಎರಡು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲಿ ವಿಶ್ರಾಂತಿ ಪಡೆದಿರುವುದೇ ಬುಮ್ರಾ ನಂಬರ್ 1 ಸ್ಥಾನ ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಎನ್ನಬಹುದು.
4 / 8
ರಾಂಚಿಯಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಈ ವಿಶ್ರಾಂತಿಯ ಮೊದಲು, ಬುಮ್ರಾ ಅವರು ಸರಣಿಯಲ್ಲಿ ಆಡಿದ 3 ಟೆಸ್ಟ್‌ಗಳಲ್ಲಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು. ಆದರೆ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ರಾಂಚಿಯಲ್ಲಿ ಆಡದಿರುವ ಸಂಪೂರ್ಣ ಲಾಭವನ್ನು ಅಶ್ವಿನ್ ಪಡೆದುಕೊಂಡಿದ್ದಾರೆ.
5 / 8
ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ ನಂತರ, ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಭಾರತದ ಜಸ್ಪ್ರೀತ್ ಬುಮ್ರಾ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಇಬ್ಬರೂ 847 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಂದರೆ, ಅವರು ಅಶ್ವಿನ್‌ಗಿಂತ 23 ಪಾಯಿಂಟ್‌ಗಳ ಹಿಂದೆ ಇದ್ದಾರೆ.
6 / 8
ಐಸಿಸಿ ರ್ಯಾಂಕಿಂಗ್‌ನ ಟಾಪ್ 10 ಬೌಲರ್‌ಗಳ ಪಟ್ಟಿಯನ್ನು ನಾವು ನೋಡಿದರೆ, ಅದರಲ್ಲಿ ಭಾರತದ 3 ಬೌಲರ್‌ಗಳಿದ್ದಾರೆ. ಅಶ್ವಿನ್ ಮತ್ತು ಬುಮ್ರಾ ಹೊರತುಪಡಿಸಿ, 788 ರೇಟಿಂಗ್ ಅಂಕಗಳೊಂದಿಗೆ 7 ನೇ ಸ್ಥಾನದಲ್ಲಿರುವ ರವೀಂದ್ರ ಜಡೇಜಾ ಹೆಸರೂ ಇದೆ.
7 / 8
ಬುಮ್ರಾ 3ನೇ ಸ್ಥಾನಕ್ಕೆ ಜಾರಿದ ಪರಿಣಾಮವಾಗಿ ದಕ್ಷಿಣ ಆಫ್ರಿಕಾದ ರಬಾಡ ಒಂದು ಸ್ಥಾನ ಕುಸಿದಿದ್ದು, ಅವರೀಗ 834 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
8 / 8
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 820 ರೇಟಿಂಗ್ ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಭಾರತದಂತೆಯೇ ಆಸ್ಟ್ರೇಲಿಯಾ ಕೂಡ ಟಾಪ್ 5ರಲ್ಲಿ ಇಬ್ಬರು ಬೌಲರ್‌ಗಳನ್ನು ಹೊಂದಿದೆ.