
ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್ ಬ್ಯಾಟ್ಸ್ಮನ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಮುಂಬಡ್ತಿ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್, ಶ್ರೇಯಾಂಕ ಪಟ್ಟಿಯಲ್ಲಿ ನಾಯಕ ಶುಭಮನ್ ಗಿಲ್ ಅವರನ್ನು ಸರಿಗಟ್ಟಿದ್ದು, ಅಗ್ರ 10 ರೊಳಗೆ ಸ್ಥಾನ ಪಡೆದಿದ್ದಾರೆ(PC-BCCI).
ಈ ಟೆಸ್ಟ್ ಸರಣಿಗೂ ಮೊದಲು ಅಗ್ರ 10 ರಿಂದ ಹೊರಗಿದ್ದ ರಿಷಭ್ ಪಂತ್ ಇದೀಗ 711 ರೇಟಿಂಗ್ ಪಾಯಿಂಟ್ಗಳೊಂದಿಗೆ ಆರು ಸ್ಥಾನಗಳ ಮುಂಬಡ್ತಿ ಪಡೆದಿದ್ದು, ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಇತ್ತ ಶುಭ್ಮನ್ ಗಿಲ್ ಕೂಡ 711 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ. ಇದರರ್ಥ ರಿಷಭ್ ಪಂತ್ ಹಾಗೂ ಶುಭ್ಮನ್ ಗಿಲ್ ಪ್ರಸ್ತುತ 7ನೇ ಸ್ಥಾನದಲ್ಲಿದ್ದಾರೆ(PC-BCCI).
ರಿಷಭ್ ಪಂತ್ ಗಾಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 39 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 66 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದರ ಫಲವಾಗಿ ಪಂತ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಇತ್ತ ನಾಯಕ ಶುಭ್ಮನ್ ಗಿಲ್ ಎರಡು ಇನ್ನಿಂಗ್ಸ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ಗಿಲ್ ಮೊದಲ ಇನ್ನಿಂಗ್ಸ್‌ನಲ್ಲಿ 16 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಎಂಟು ರನ್ಗಳಿಸಲಷ್ಟೇ ಶಕ್ತರಾಗಿದ್ದರು(PC-BCCI).
ಇನ್ನು ಗಾಲೆ ಟೆಸ್ಟ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಯಶಸ್ವಿ ಜೈಸ್ವಾಲ್ ಟಾಪ್ 10 ರಿಂದ ಹೊರಬಿದ್ದಿದ್ದಾರೆ. ಎರಡು ಸ್ಥಾನ ಕುಸಿತ ಕಂಡಿರುವ ಜೈಸ್ವಾಲ್, 701 ರೇಟಿಂಗ್ ಪಾಯಿಂಟ್ಗಳೊಂದಿಗೆ 11 ನೇ ಸ್ಥಾನಕ್ಕೆ ಜಾರಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್‌ನಲ್ಲಿ ಗಳಿಸಿದ ರನ್‌ಗಳನ್ನು ಈ ಶ್ರೇಯಾಂಕದಲ್ಲಿ ಪರಿಗಣಿಸಲಾಗಿಲ್ಲ. ಈ ಕಾರಣದಿಂದ ರ್ಯಾಂಕಿಂಗ್ ಪಟ್ಟಿಯಲ್ಲಿ ಬದಲಾವಣೆಗಳಾಗಿವೆ(PC-BCCI).
ಉಳಿದಂತೆ ಬೌಲರ್ಗಳ ರ್ಯಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದು, ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಬುಮ್ರಾ ಹೊರತುಪಡಿಸಿ ಟಾಪ್ 10 ರಲ್ಲಿ ಭಾರತದ ಬೇರೆ ಯಾವುದೇ ಬೌಲರ್ ಇಲ್ಲ. ಟಾಪ್ 20 ರಲ್ಲಿ, ಮೊಹಮ್ಮದ್ ಸಿರಾಜ್ ನಾಲ್ಕು ಸ್ಥಾನ ಕುಸಿದು 18 ನೇ ಸ್ಥಾನಕ್ಕೆ ಮತ್ತು ರವೀಂದ್ರ ಜಡೇಜಾ ಮೂರು ಸ್ಥಾನ ಕುಸಿದು 19 ನೇ ಸ್ಥಾನಕ್ಕೆ ತಲುಪಿದ್ದಾರೆ(PC-BCCI).