INDW vs PAKW: ಪಾಕ್​ನ ಬಗ್ಗು ಬಡಿದು ಶುಭಾರಂಭ ಮಾಡಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Feb 12, 2023 | 9:45 PM

ICC Womens T20 World Cup 2023: ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಬಿಸ್ಮಾ ಮರೂಫ್ (68) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕಿಗೆ ಉತ್ತಮ ಸಾಥ್ ನೀಡಿದ ಆಯೇಷಾ ನಸೀಮ್ ಅಜೇಯ 43 ರನ್​ ಬಾರಿಸಿದರು.

1 / 7
ICC Womens T20 World Cup 2023: ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

2 / 7
ಅದರಂತೆ ಇನಿಂಗ್ಸ್​ ಆರಂಭಿಸಿದ ಪಾಕ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 2ನೇ ಓವರ್​ನಲ್ಲೇ ಜವೇರಿಯಾ ಖಾನ್ (8) ವಿಕೆಟ್ ಪಡೆದು ದೀಪ್ತಿ ಶರ್ಮಾ ಟೀಮ್ ಇಂಡಿಯಾ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದಾದ ಬಳಿಕ ರಾಧಾ ಯಾದವ್ ಮನೀಬಾ (12) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ನಿದಾ ದಾರ್ ಅವರನ್ನು ಶೂನ್ಯಕ್ಕೆ ಪೂಜಾ ವಸ್ತ್ರಾಕರ್ ಪೆವಿಲಿಯನ್​ಗೆ ಕಳುಹಿಸಿದರು.

3 / 7
ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಬಿಸ್ಮಾ ಮರೂಫ್ (68) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕಿಗೆ ಉತ್ತಮ ಸಾಥ್ ನೀಡಿದ ಆಯೇಷಾ ನಸೀಮ್ ಅಜೇಯ 43 ರನ್​ ಬಾರಿಸಿದರು. ಅದರಂತೆ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ಪಾಕಿಸ್ತಾನ್ ತಂಡವು 149 ರನ್​ ಕಲೆಹಾಕಿತು.

4 / 7
150 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾಗೆ ಯಶಿಕಾ ಭಾಟಿಯಾ (17) ಹಾಗೂ ಶಫಾಲಿ ವರ್ಮಾ (33) ಉತ್ತಮ ಆರಂಭ ಒದಗಿಸಿದರು. ಅದರಂತೆ ಮೊದಲ 10 ಓವರ್​ಗಳಲ್ಲಿ ಭಾರತ ತಂಡವು 67 ರನ್​ ಕಲೆಹಾಕಿತು.

5 / 7
ಈ ಹಂತದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 60 ಎಸೆತಗಳಲ್ಲಿ 83 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಜೊತೆಗೂಡಿದ ಹರ್ಮನ್​ಪ್ರೀತ್ ಕೌರ್ ಹಾಗೂ ಜೆಮಿಮಾ 28 ರನ್​ಗಳ ಜೊತೆಯಾಟವಾಡಿದರು. ಆದರೆ 16 ರನ್​ಗಳಿಸಿದ್ದ ವೇಳೆ ಹರ್ಮನ್ ಪ್ರೀತ್ ಕ್ಯಾಚ್ ನೀಡಿ ಹೊರನಡೆದರು.

6 / 7
15 ಓವರ್​ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 103 ರನ್​ ಕಲೆಹಾಕಿದ್ದ ಟೀಮ್ ಇಂಡಿಯಾಗೆ ಕೊನೆಯ 5 ಓವರ್​ಗಳಲ್ಲಿ 47 ರನ್​ ಬೇಕಿತ್ತು. ಈ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 18 ಎಸೆತಗಳಲ್ಲಿ 28 ರನ್​ಗಳು ಬೇಕಿತ್ತು. ಅಲ್ಲದೆ 18ನೇ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ರಿಚಾ ಘೋಷ್ ರನ್​-ಬಾಲ್ ಅಂತರವನ್ನು ತಗ್ಗಿಸಿದರು. ಅದರಂತೆ ಕೊನೆಯ 2 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 14 ರನ್​ಗಳ ಅವಶ್ಯಕತೆಯಿತ್ತು.

7 / 7
19ನೇ ಓವರ್​ನಲ್ಲಿ ಅಬ್ಬರಿಸಿದ ಜೆಮಿಮಾ ರೋಡಿಗ್ರಸ್ 3 ಫೋರ್ ಬಾರಿಸುವ ಮೂಲಕ ಭಾರತ ತಂಡಕ್ಕೆ 7 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು. ಗೆಲುವಿನೊಂದಿಗೆ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಜೆಮಿಮಾ ಬ್ಯಾಟ್ ಮೇಲೆತ್ತಿದರು. ಮತ್ತೊಂದೆಡೆ 20 ಎಸೆತಗಳಲ್ಲಿ 31 ರನ್ ಬಾರಿಸಿ ರಿಚಾ ಘೋಷ್ ಅಜೇಯರಾಗಿ ಉಳಿದರು. ಪಾಕ್ ವಿರುದ್ಧದ ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡವು ಮಹಿಳಾ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿರುವುದು ವಿಶೇಷ.