ವಿಶ್ವಕಪ್ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಕೊಹ್ಲಿಗೆ ನಾಯಕತ್ವ, ತಂಡದಲ್ಲಿಲ್ಲ ರೋಹಿತ್..!
ICC World Cup 2023: ಏಕದಿನ ವಿಶ್ವಕಪ್ನ ಲೀಗ್ ಹಂತ ಮುಗಿದಿದ್ದು, ಬುಧವಾರದಿಂದ ಸೆಮಿಫೈನಲ್ ಸುತ್ತು ಆರಂಭವಾಗಲಿದೆ. ಈ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ, ‘ಟೂರ್ನಮೆಂಟ್‌ನ ತಂಡ'ವನ್ನು ಆಯ್ಕೆ ಮಾಡಿದ. 12 ಆಟಗಾರರ ಈ ತಂಡದಲ್ಲಿ ಭಾರತೀಯರೇ ಹೆಚ್ಚು ಪ್ರಾಬಲ್ಯ ಸಾಧಿಸಿದ್ದಾರೆ.
1 / 15
ಏಕದಿನ ವಿಶ್ವಕಪ್ನ ಲೀಗ್ ಹಂತ ಮುಗಿದಿದ್ದು, ಬುಧವಾರದಿಂದ ಸೆಮಿಫೈನಲ್ ಸುತ್ತು ಆರಂಭವಾಗಲಿದೆ. ಈ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ, ‘ಟೂರ್ನಮೆಂಟ್‌ನ ತಂಡ'ವನ್ನು ಆಯ್ಕೆ ಮಾಡಿದ. 12 ಆಟಗಾರರ ಈ ತಂಡದಲ್ಲಿ ಭಾರತೀಯರೇ ಹೆಚ್ಚು ಪ್ರಾಬಲ್ಯ ಸಾಧಿಸಿದ್ದಾರೆ.
2 / 15
ಆಯ್ಕೆಯಾಗಿರುವ12 ಸದಸ್ಯರ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ನೀಡಲಾಗಿದ್ದು, ಟೀಂ ಇಂಡಿಯಾದಿಂದ ಕೊಹ್ಲಿ ಸೇರಿದಂತೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
3 / 15
ಆದರೆ ಈ ವಿಶ್ವಕಪ್ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಉಳಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ತಂಡದಲ್ಲಿ ಯಾವ ದೇಶದ ಯಾವ ಆಟಗಾರ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..
4 / 15
ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): ಆಫ್ರಿಕಾದ ಈ ಆರಂಭಿಕ ಆಟಗಾರ ಆಡಿರುವ 9 ಪಂದ್ಯಗಳಲ್ಲಿ 65.67 ರ ಸರಾಸರಿಯಲ್ಲಿ 591 ರನ್ ದಾಖಸಿದ್ದಾರೆ. ಪಂದ್ಯಾವಳಿಯಲ್ಲಿ 4 ಶತಕ ಸಿಡಿಸಿರುವ ಡಿ ಕಾಕ್ಗೆ ಆರಂಭಿಕ ಸ್ಥಾನ ನೀಡಲಾಗಿದೆ.
5 / 15
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): ಮತ್ತೊಬ್ಬ ಆರಂಭಿಕನಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್ ವಾರ್ನರ್, ಆಡಿರುವ 9 ಪಂದ್ಯಗಳಲ್ಲಿ 55.44 ಸರಾಸರಿ, 499 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 2 ಅರ್ಧಶತಕಗಳು ಸೇರಿವೆ.
6 / 15
ರಚಿನ್ ರವೀಂದ್ರ (ನ್ಯೂಜಿಲೆಂಡ್): ಮೂರನೇ ಕ್ರಮಾಂಕದಲ್ಲಿ ಯುವ ಬ್ಯಾಟ್ ರಚಿನ್ ರವೀಂದ್ರಗೆ ಅವಕಾಶ ನೀಡಲಾಗಿದ್ದು, ಈ ಕಿವೀಸ್ ಸ್ಟಾರ್ 9 ಪಂದ್ಯಗಳಲ್ಲಿ 3 ಶತಕ ಮತ್ತು 2 ಅರ್ಧಶತಕ ಸಹಿತ 565 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 5 ವಿಕೆಟ್ ಸಹ ಪಡೆದಿದ್ದಾರೆ.
7 / 15
ವಿರಾಟ್ ಕೊಹ್ಲಿ (ಭಾರತ): ಈ ತಂಡದ ನಾಯಕತ್ವವನ್ನು ಕಿಂಗ್ ಕೊಹ್ಲಿಗೆ ನೀಡಲಾಗಿದ್ದು, ವಿರಾಟ್ ಈ ಪಂದ್ಯಾವಳಿಯಲ್ಲಿ 99.00 ಸರಾಸರಿಯಲ್ಲಿ 594 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 5 ಅರ್ಧಶತಕಗಳು ಸೇರಿವೆ.
8 / 15
ಏಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ): ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆದಿರುವ ಈ ಆಫ್ರಿಕನ್ ಸ್ಟಾರ್ 49.50 ಸರಾಸರಿಯಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳ ನೆರವಿನಿಂದ 396 ರನ್ ಗಳಿಸಿದ್ದಾರೆ.
9 / 15
ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): ಬ್ಯಾಟಿಂಗ್ ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದಿರುವ ಮ್ಯಾಕ್ಸ್‌ವೆಲ್ 7 ಪಂದ್ಯಗಳಲ್ಲಿ 1 ದ್ವಿಶತಕ ಸೇರಿದಂತೆ 397 ರನ್ ಸಿಡಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 5 ವಿಕೆಟ್ಗಳನ್ನೂ ಪಡೆದಿದ್ದಾರೆ.
10 / 15
ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ): ಈ ಬೌಲಿಂಗ್ ಆಲ್‌ರೌಂಡರ್ ಆಡಿರುವ 8 ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿದಂತೆ 157 ರನ್ ಬಾರಿಸಿದ್ದಾರೆ. ಬೌಲಿಂಗ್ನಲ್ಲಿ 6.40 ರ ಎಕಾನಮಿ ದರದಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.
11 / 15
ರವೀಂದ್ರ ಜಡೇಜಾ (ಭಾರತ): ಭಾರತದ ಈ ಸ್ಟಾರ್ ಆಲ್‌ರೌಂಡರ್ ಆಡಿರುವ 9 ಪಂದ್ಯಗಳಲ್ಲಿ 111 ರನ್ ಬಾರಿಸಿದ್ದು, 3.96 ರ ಎಕಾನಮಿಯಲ್ಲಿ ಇದುವರೆಗೆ 16 ವಿಕೆಟ್‌ಗಳನ್ನು ಪಡೆದಿದ್ದಾರೆ.
12 / 15
ಮೊಹಮ್ಮದ್ ಶಮಿ (ಭಾರತ): ಈ ವಿಶ್ವಕಪ್ನಲ್ಲಿ ಕೇವಲ 5 ಪಂದ್ಯಗಳನ್ನು ಆಡಿರುವ ಶಮಿ 4.78 ಎಕಾನಮಿ ದರದಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಈ ಟೂರ್ನಿಯಲ್ಲಿ ಎರಡು ಬಾರಿ 5 ವಿಕೆಟ್ಗಳ ಗೊಂಚಲು ಪಡೆದಿದ್ದಾರೆ.
13 / 15
ಆಡಮ್ ಝಂಪಾ (ಆಸ್ಟ್ರೇಲಿಯಾ): ಆಸೀಸ್ ಸ್ಪಿನ್ನರ್ ಝಂಪಾ ಆಡಿರುವ 9 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.
14 / 15
ಜಸ್ಪ್ರೀತ್ ಬುಮ್ರಾ (ಭಾರತ): ಯಾರ್ಕರ್ ಕಿಂಗ್ ಬುಮ್ರಾ 17 ಪಡೆದಿದ್ದು, ಈ ಟೂರ್ನಮೆಂಟ್ನಲ್ಲಿ ಅಧಿಕ ವಿಕೆಟ್ ಪಡೆದ ಬೌಲರ್ಗಳ ಪೈಕಿ ಒಬ್ಬರಾಗಿದ್ದಾರೆ.
15 / 15
ದಿಲ್ಶನ್ ಮಧುಶಂಕ (ಶ್ರೀಲಂಕಾ): ಟೂರ್ನಿಯಲ್ಲಿ 12ನೇ ಆಟಗಾರನಾಗಿ ಆಯ್ಕೆಯಾಗಿರುವ ದಿಲ್ಶನ್, ಆಡಿರುವ 9 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.