IND vs AUS 1st ODI: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ

|

Updated on: Mar 18, 2023 | 10:41 AM

India vs Australia 1st ODI: ಬಾರ್ಡರ್- ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ನಂತರ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಜಯ ಸಾಧಿಸಿದೆ.

1 / 8
ಟೆಸ್ಟ್ ಸರಣಿ ಬಳಿಕ ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಭಾರತ (India vs Australia) ಭರ್ಜರಿ ಆರಂಭ ಪಡೆದುಕೊಂಡಿದೆ.

2 / 8
ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

3 / 8
ಕೆಎಲ್ ರಾಹುಲ್ (KL Rahul) ಅವರ ಅಜೇಯ 75 ರನ್ ಮತ್ತು ರವೀಂದ್ರ ಜಡೇಜಾ ಆಲ್ರೌಂಡ್ ಪ್ರದರ್ಶನದಿಂದ ಭಾರತ 39.5 ಓವರ್​ನಲ್ಲೇ 189 ರನ್​ಗಳ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿತು.

4 / 8
ಈ ಪಂದ್ಯದಲ್ಲಿ ಟಾಸ್ ಸೊತ ಆಸ್ಟ್ರೇಲಿಯಾ ಬ್ಯಾಟಿಂಗ್​ಗೆ ಇಳಿಯಿತು. ಆದರೆ, ಮಿಚೆಲ್ ಮಾರ್ಶ್ ಬಿಟ್ಟರೆ ಉಳಿದ ಎಲ್ಲ ಬ್ಯಾಟರ್​ಗಳು ಭಾರತೀಯ ಬೌಲಿಂಗ್ ದಾಳಿಗೆ ಪೆವಿಲಿಯನ್ ಸೇರಿಕೊಂಡರು. ಮಾರ್ಶ್ 65 ಎಸೆತಗಳಲ್ಲಿ 10 ಫೋರ್, 5 ಸಿಕ್ಸರ್​ನೊಂದಿಗೆ 81 ರನ್ ಕಲೆಹಾಕಿದರು.

5 / 8
ಆಸ್ಟ್ರೇಲಿಯಾ 35.4 ಓವರ್​ನಲ್ಲಿ 188 ರನ್​ಗೆ ಸರ್ವಪತನ ಕಂಡಿತು. ಟೀಮ್ ಇಂಡಿಯಾ ಪರ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು.

6 / 8
ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಕಳಪೆ ಆರಂಭ ಪಡೆದುಕೊಂಡಿತು. ಇಶಾನ್ ಕಿಶನ್ 3 ರನ್ , ಶುಭ್​ಮನ್ ಗಿಲ್ 20, ವಿರಾಟ್ ಕೊಹ್ಲಿ 4 ಹಾಗೂ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದರು. ಹಾರ್ದಿಕ್ 25 ರನ್​ಗಳ ಕಾಣಿಕೆ ನೀಡಿದರು.

7 / 8
ನಂತರ 6ನೇ ವಿಕೆಟ್​ಗೆ ಜೊತೆಯಾದ ಕೆಎಲ್ ರಾಹುಲ್ (ಅಜೇಯ 75) ಹಾಗೂ ರವೀಂದ್ರ ಜಡೇಜಾ (ಅಜೇಯ 45) ಬೊಂಬಾಟ್ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ 39.5 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ ಜಯ ಸಾಧಿಸುವಂತೆ ಮಾಡಿದರು.

8 / 8
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಕಿತ್ತು ಮಿಂಚಿದರೆ, ಮಾರ್ಕಸ್ ಸ್ಟೋಯಿನಿಸ್ 2 ವಿಕೆಟ್ ಪಡೆದರು.