IND vs AUS 2nd ODI: ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ
India vs Australia 2nd ODI: ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೇವಲ 49 ರನ್ಗು ಮುನ್ನವೇ ಟೀಮ್ ಇಂಡಿಯಾದ ಅರ್ಧ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ರೋಹಿತ್ ಪಡೆ ಒಟ್ಟು ಗಳಿಸಿದ್ದು ಕೇವಲ 117 ರನ್.
1 / 8
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಭಾರತ 5 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ಬ್ಯಾಟಿಂಗ್- ಬೌಲಿಂಗ್ನಲ್ಲಿ ಉತ್ತಮ ಆಟವಾಡಿತ್ತು. ಆದರೆ, ದ್ವಿತೀಯ ಏಕದಿನದಲ್ಲಿ ನಡೆದಿದ್ದು ಇದರ ತದ್ವಿರುದ್ದ.
2 / 8
ಭಾನುವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಟೀಮ್ ಇಂಡಿಯಾ 10 ವಿಕೆಟ್ಗಳ ಸೋಲು ಅನುಭವಿಸಿತು. ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬೌಲಿಂಗ್ನಲ್ಲಿ ಎದುರಾಳಿಯ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.
3 / 8
ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಕೇವಲ 49 ರನ್ಗು ಮುನ್ನವೇ ಟೀಮ್ ಇಂಡಿಯಾದ ಅರ್ಧ ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ರೋಹಿತ್ ಪಡೆ ಒಟ್ಟು ಗಳಿಸಿದ್ದು ಕೇವಲ 117 ರನ್.
4 / 8
ಭಾರತ ಪರ ಗರಿಷ್ಠ ರನ್ ಕಲೆಹಾಕಿದ್ದೇ ವಿರಾಟ್ ಕೊಹ್ಲಿ. 35 ಎಸೆತಗಳಲ್ಲಿ 4 ಫೋರ್ನೊಂದಿಗೆ 31 ರನ್ ಗಳಿಸಿದರು. ಕೊಹ್ಲಿ ಕ್ರೀಸ್ನಲ್ಲಿ ಇರುವ ವರೆಗೆ ತಂಡ ಸವಾಲಿನ ಮೊತ್ತ ಕಲೆಹಾಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಇವರು ಕೂಡ ಔಟಾಗಿದ್ದು ಹೊಡೆತ ಬಿದ್ದಿತು.
5 / 8
ಮಿಚೆಲ್ ಸ್ಟಾರ್ಕ್ (5 ವಿಕೆಟ್) ಬೌಲಿಂಗ್ ಬಿರುಗಾಳಿಗೆ ಮೊದಲ ಓವರ್ನ ಮೂರನೇ ಎಸೆತದಲ್ಲೇ ಭಾರತ ಶುಭ್ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು.
6 / 8
ರೋಹಿತ್ ಶರ್ಮಾ (13,) ಸೂರ್ಯ ಕುಮಾರ್ ಯಾದವ್ (0) ವಿಕೆಟ್ ಒಪ್ಪಿಸಿದರು. 9ನೇ ಓವರ್ನಲ್ಲಿ ಕೆಎಲ್ ರಾಹುಲ್ (9) ಔಟಾದರೆ ಹಾರ್ದಿಕ್ ಪಾಂಡ್ಯ (1), ನಂತರದಲ್ಲಿ ಕೊಹ್ಲಿ-ಜಡೇಜಾ ಕೂಡ ವಿಕೆಟ್ ಒಪ್ಪಿಸಿದರು.v
7 / 8
ಅಕ್ಷರ್ ಪಟೇಲ್ 29 ಎಸೆತಗಳಲ್ಲಿ 29 ರನ್ ಬಾರಿಸಿ ತಂಡದ ಮೊತ್ತವನ್ನು 100 ದಾಟಿಸಿದರು. ಅಂತಿಮವಾಗಿ ಭಾರತ 26 ಓವರ್ಗಳಲ್ಲಿ 117 ರನ್ಗೆ ಸರ್ವಪತನ ಕಂಡಿತು. ಆಸೀಸ್ ಪರ ಸ್ಟಾರ್ಕ್ 5 ವಿಕೆಟ್ ಕಬಳಿಸಿದರೆ, ಸೀನ್ ಅಬಾಟ್ 3 ಮತ್ತು ನೇಥನ್ ಎಲಿಸ್ 2 ವಿಕೆಟ್ ಪಡೆದರು.
8 / 8
ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್ ಮತ್ತು ಮಿಚೆಲ್ ಮಾರ್ಷ್ 66 ರನ್ ಗಳಸಿ ಗೆಲುವಿಗೆ ಕಾರಣರಾದರು. ಕಾಂಗರೂ ಪಡೆ 10 ವಿಕೆಟ್ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ.
Published On - 9:45 am, Mon, 20 March 23