IND vs AUS 3rd Test: ಆಸ್ಟ್ರೇಲಿಯಾ ಗೆಲುವಿಗೆ 76 ರನ್‌ಗಳ ಗುರಿ: ಭಾರತದ ಮಾಸ್ಟರ್ ಪ್ಲಾನ್ ಏನು ಗೊತ್ತೇ?
India vs Australia 3rd Test: ಅಲ್ಪ ಮೊತ್ತದ ಟಾರ್ಗೆಟ್ ಪಡೆದಿರುವ ಆಸ್ಟ್ರೇಲಿಯಾ ಇಂದು ಮೂರನೇ ದಿನ ಗುರಿ ಬೆನ್ನಟ್ಟಲು ಕಣಕ್ಕಿಳಿಯಲಿದೆ. ಅತ್ತ ರೋಹಿತ್ ಪಡೆ ಆಸೀಸ್ ಅನ್ನು ಬೇಗನೆ ಆಲೌಟ್ ಮಾಡಿದರೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ. ಇದಕ್ಕಾಗಿ ಏನು ಮಾಸ್ಟರ್ ಪ್ಲಾನ್ ಮಾಡಿದೆ ಎಂಬುದು ಕುತೂಹಲ ಕೆರಳಿಸಿದೆ.
1 / 10
ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಪಂದ್ಯ ರೋಚಕ ಘಟ್ಟದಲ್ಲಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 163 ರನ್ಗೆ ಸರ್ವಪತನ ಕಂಡ ಕಾರಣ ಕಾಂಗರೂ ಪಡೆಗೆ ಗೆಲ್ಲಲು 76 ರನ್‌ಗಳ ಟಾರ್ಗೆಟ್ ನೀಡಿದೆ.
2 / 10
ಅಲ್ಪ ಮೊತ್ತದ ಟಾರ್ಗೆಟ್ ಪಡೆದಿರುವ ಆಸ್ಟ್ರೇಲಿಯಾ ಇಂದು ಮೂರನೇ ದಿನ ಗುರಿ ಬೆನ್ನಟ್ಟಲು ಕಣಕ್ಕಿಳಿಯಲಿದೆ. ಅತ್ತ ರೋಹಿತ್ ಪಡೆ ಆಸೀಸ್ ಅನ್ನು ಬೇಗನೆ ಆಲೌಟ್ ಮಾಡಿದರೆ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ. ಇದಕ್ಕಾಗಿ ಏನು ಮಾಸ್ಟರ್ ಪ್ಲಾನ್ ಮಾಡಿದೆ ಎಂಬುದು ಕುತೂಹಲ ಕೆರಳಿಸಿದೆ.
3 / 10
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಸ್ಪಿನ್ನರ್ಗಳು ಯಶಸ್ಸು ಸಾಧಿಸಿದರು. ಅದೇ ಭಾರತ ಪರ ಸ್ಪಿನ್ನರ್ಗಳ ಜೊತೆ ವೇಗಿಗಳು ಕೂಡ ಮಾರಕವಾದರು. ಹೀಗಾಗಿ ಟೀಮ್ ಇಂಡಿಯಾ ಯಾವ ಯೋಜನೆಯೊಂದಿಗೆ ಕಣಕ್ಕಿಳಿಯುತ್ತೆ ನೋಡಬೇಕಿದೆ.
4 / 10
47 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸೀಸ್ ಪಡೆ ಕೊನೆಯ ಆರು ವಿಕೆಟ್ಗಳನ್ನು ಕೇವಲ 11 ರನ್‌ಗಳಿಗೆ ಕಳೆದುಕೊಂಡು ದಿಢೀರ್ ಕುಸಿತ ಅನುಭವಿಸಿತ್ತು. ಇದರಿಂದ ತಂಡ ಮೊದಲ ಇನಿಂಗ್ಸ್ನಲ್ಲಿ 197 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು.
5 / 10
ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ ಮೂರು ವಿಕೆಟ್ಗಳನ್ನು ಪಡೆದು ಕಾಂಗರೂ ಪಡೆ ಕಾಡಿದ್ದರು. ಈ ಮೂಲಕ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ಅತ್ಯಮೂಲ್ಯ 88 ರನ್‌ಗಳ ಮುನ್ನಡೆ ಪಡೆದುಕೊಂಡಿತು.
6 / 10
ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡುವಲ್ಲಿ ಮತ್ತೆ ವಿಫಲರಾದರು. 5 ರನ್ ಗಳಿಸಿದ್ದಾಗ ನಥನ್ ಲಿಯಾನ್‌ಗೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಬೌಲ್ಡ್ ಆದರು. ನಾಯಕ ರೋಹಿತ್ ಶರ್ಮಾ 12 ರನ್ ಗಳಿಸಿದರಷ್ಟೆ.
7 / 10
ಆದರೆ, ಚೇತೇಶ್ವರ ಪೂಜಾರ 142 ಎಸೆತಗಳನ್ನು ಎದುರಿಸಿ, ಐದು ಬೌಂಡರಿಗಳು ಮತ್ತು ಒಂದು ಸಿಕ್ಸರ್ನೊಂದಿಗೆ 59 ರನ್ಗಳನ್ನು ಕಲೆ ಹಾಕಿ ತಂಡಕ್ಕೆ ಆಸರೆಯಾದರು. ಅಲ್ಲದೇ, ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
8 / 10
ಪೂಜಾರ ಜೊತೆಗೂಡಿದ ಶ್ರೇಯಸ್ ಅಯ್ಯರ್ (26) ತಂಡಕ್ಕೆ ಚೇತರಿಕೆಯ ನೀಡುವ ಮುನ್ಸೂಚನೆ ನೀಡಿದರು. ಆದರೆ, ತಂಡದ ಮೊತ್ತ 113 ರನ್ಗಳು ಆಗಿದ್ದಾಗ ಶ್ರೇಯಸ್ ವಿಕೆಟ್ ಒಪ್ಪಿಸಿದರು.
9 / 10
ಇದಾದ ಬಳಿಕ ಶ್ರಿಕರ್ ಭರತ್ (3), ಆರ್.ಅಶ್ವಿನ್ (16), ಅಕ್ಷರ್ ಪಟೇಲ್ (15 ಅಜೇಯ) ಅವರಿಂದ ಅಲ್ಪ ರನ್ ಕಲೆ ಹಾಕಲು ಮಾತ್ರ ಸಾಧ್ಯವಾಯಿತು. ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಶೂನ್ಯಕ್ಕೆ ಔಟಾದರು. ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ನಾಥನ್ ಲಿಯಾನ್ ಭಾರತದ ಬ್ಯಾಟಿಂಗ್ ಪಡೆಯನ್ನು ಕಾಡಿ 8 ವಿಕೆಟ್ ಪಡೆದು ಮಿಂಚಿದರು.
10 / 10
ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲೌಟ್ ಆಗಿ 75 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಬ್ಯಾಟಿಂಗ್ ಮಾಡಲು ಪಿಚ್ ಕಷ್ಟಕರವಾಗಿದ್ದು, ಇಂದು ಬೌಲರ್ಗಳ ಯಾವರೀತಿ ಪ್ರದರ್ಶನ ತೋರುತ್ತಾರೆ ನೋಡಬೇಕಿದೆ.