AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2023: 5 ವಿಶ್ವಕಪ್ ಗೆದ್ದ ಚಾಂಪಿಯನ್ ಕ್ಯಾಪ್ಟನ್​ಗೆ ನಾಯಕತ್ವ ಪಟ್ಟಕಟ್ಟಿದ ಡೆಲ್ಲಿ..!

WPL 2023: ನಾಯಕತ್ವದ ವಿಷಯದಲ್ಲಿ ಲ್ಯಾನಿಂಗ್ ದೆಹಲಿ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ್ತಿಯಾಗಿದ್ದಾರೆ. ಹೀಗಾಗಿ ಡೆಲ್ಲಿ ತಂಡ ಮೆಗ್ ಲ್ಯಾನಿಂಗ್​ಗೆ ನಾಯಕತ್ವ ನೀಡಿದೆ.

ಪೃಥ್ವಿಶಂಕರ
|

Updated on:Mar 02, 2023 | 2:23 PM

Share
ಅಂತಿಮವಾಗಿ ಮಹಿಳಾ ಪ್ರೀಮಿಯರ್ ಲೀಗ್‌ನ ಐದು ತಂಡಗಳ ನಾಯಕಿಯರು ಯಾರು ಎಂಬುದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಗುರುವಾರ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು ನಾಯಕಿಯರನ್ನು ಘೋಷಿಸಿದ್ದವು. ಇದೀಗ ಲೀಗ್ ಆರಂಭಕ್ಕೆ ಎರಡು ದಿನಗಳ ಮೊದಲು ಡೆಲ್ಲಿ ತನ್ನ ನಾಯಕಿಯ ಹೆಸರನ್ನು ಸಹ ಪ್ರಕಟಿಸಿದ್ದು, ಆಸ್ಟ್ರೇಲಿಯಾದ ಟಿ20 ವಿಶ್ವ ಚಾಂಪಿಯನ್ ಕ್ಯಾಪ್ಟನ್ ಮೆಗ್ ಲ್ಯಾನಿಂಗ್ ಅವರಿಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದೆ.

1 / 5
ಡೆಲ್ಲಿ ತಂಡ ಹರಾಜಿನಲ್ಲಿ 1 ಕೋಟಿ 10 ಲಕ್ಷ ರೂಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್‌ ಅವರನ್ನು ಖರೀದಿಸಿತ್ತು. ನಾಯಕತ್ವದ ವಿಷಯದಲ್ಲಿ ಲ್ಯಾನಿಂಗ್ ದೆಹಲಿ ತಂಡದಲ್ಲಿ ಅತ್ಯಂತ ಅನುಭವಿ ಆಟಗಾರ್ತಿಯಾಗಿದ್ದಾರೆ. ಹೀಗಾಗಿ ಡೆಲ್ಲಿ ತಂಡ ಮೆಗ್ ಲ್ಯಾನಿಂಗ್​ಗೆ ನಾಯಕತ್ವ ನೀಡಿದೆ.

2 / 5
ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಕಳೆದ ಮೂರು ಟಿ20 ವಿಶ್ವಕಪ್ ಗೆದ್ದಿದೆ. ಇದಲ್ಲದೆ, 2022 ರಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಸಹ ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಗೆದ್ದುಕೊಂಡಿತು. ಇದಕ್ಕೂ ಮುನ್ನ ನಡೆದ ಟಿ20 ವಿಶ್ವಕಪ್ ಕೂಡ ಲ್ಯಾನಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಒಟ್ಟು 5 ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕಿ ಲ್ಯಾನಿಂಗ್.

3 / 5
ನಾಯಕಿಯ ಜೊತೆಗೆ ಉಪನಾಯಕಿಯನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಘೋಷಿಸಿದ್ದು, ಈ ಜವಾಬ್ದಾರಿಯನ್ನು ಭಾರತದ ಸ್ಫೋಟಕ ಬ್ಯಾಟರ್​ ಜೆಮಿಮಾ ರಾಡ್ರಿಗಸ್‌ಗೆ ನೀಡಲಾಗಿದೆ. ಜೆಮಿಮಾ ಹಿಂದೆಂದೂ ಉಪನಾಯಕಿ ಜವಾಬ್ದಾರಿ ನಿಭಾಯಿಸಿಲ್ಲ.

4 / 5
ಲ್ಯಾನಿಂಗ್ ಹೊರತುಪಡಿಸಿ ಇನ್ನೆರಡು ತಂಡಗಳ ಕಮಾಂಡ್ ಆಸ್ಟ್ರೇಲಿಯಾ ಆಟಗಾರರ ಕೈಯಲ್ಲಿದ್ದು, ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ ಯುಪಿ ವಾರಿಯರ್ಸ್‌ನ ನಾಯಕಿಯಾಗಿದ್ದು, ಬೆತ್ ಮೂನಿ ಗುಜರಾತ್‌ನ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಆರ್‌ಸಿಬಿ ನಾಯಕಿಯಾಗಿ ಸ್ಮೃತಿ ಮಂಧಾನ ಮತ್ತು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

5 / 5

Published On - 2:23 pm, Thu, 2 March 23