IND vs AUS: ಒಂದೇ ಇನ್ನಿಂಗ್ಸ್​ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್..!

|

Updated on: Mar 11, 2023 | 12:32 PM

Rohit Sharma: ತಮ್ಮ ಶಾರ್ಟ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ರೋಹಿತ್, ಒಂದೇ ಬಾರಿಗೆ 2 ದೊಡ್ಡ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

1 / 5
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಆಸ್ಟ್ರೇಲಿಯಾ ನೀಡಿರುವ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿದೆ. ನಾಯಕ ರೋಹಿತ್ ಹಾಗೂ ಗಿಲ್ ತಂಡಕ್ಕೆ ಅರ್ಧಶತಕದ ಜೊತೆಯಾಟ ತಂದುಕೊಟ್ಟಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದ್ದಾರೆ. ಇದರೊಂದಿಗೆ ದಾಖಲೆಯೊಂದನ್ನು ಕೂಡ ಮಾಡಿದ್ದಾರೆ.

2 / 5
ತಮ್ಮ ಶಾರ್ಟ್ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ ರೋಹಿತ್, ಒಂದೇ ಬಾರಿಗೆ 2 ದೊಡ್ಡ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

3 / 5
ಈ ಇನ್ನಿಂಗ್ಸ್​ನೊಂದಿಗೆ 17 ಸಾವಿರ ಅಂತಾರಾಷ್ಟ್ರೀಯ ರನ್ ಪೂರೈಸಿದ ರೋಹಿತ್ ಈ ಸಾಧನೆ ಮಾಡಿದ ಭಾರತದ 7ನೇ ಹಾಗೂ ವಿಶ್ವದ ಒಟ್ಟಾರೆ 28ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

4 / 5
ಇದರೊಂದಿಗೆ ತವರಿನಲ್ಲಿ ಅತಿ ವೇಗವಾಗಿ 2000 ಟೆಸ್ಟ್ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡ ರೋಹಿತ್, ಈ ವಿಚಾರದಲ್ಲಿ ಮೊಹಮ್ಮದ್ ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ.

5 / 5
ಸದ್ಯ ಅಂತಿಮ ಟೆಸ್ಟ್​ನಲ್ಲಿ ಬೃಹತ್ ಟಾರ್ಗೆಟ್ ಬೆನ್ನಟ್ಟಿರುವ ಭಾರತ ಈ ಸುದ್ದಿ ಬರೆಯುವ ವೇಳೆಗೆ 1 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ. ತಂಡದ ಪರ ಗಿಲ್ ಅರ್ಧಶತಕ ಬಾರಿಸಿ ಆಡುತ್ತಿದ್ದಾರೆ.

Published On - 12:32 pm, Sat, 11 March 23