IND vs AUS: ಮೂರು ಮಾದರಿಯಲ್ಲೂ ಬುಮ್ರಾ ಬೆಸ್ಟ್ ಬೌಲರ್ ಎಂದು ಆಸೀಸ್ ಮಾಜಿ ನಾಯಕ

|

Updated on: Sep 23, 2024 | 6:38 PM

IND vs AUS: ಬುಮ್ರಾ ಒಬ್ಬ ಶ್ರೇಷ್ಠ ಬೌಲರ್. ಹೊಸ ಚೆಂಡಿನಲಿರಲಿ, ಸ್ವಲ್ಪ ಹಳೆಯ ಚೆಂಡಿನಿರಲಿ ಅಥವಾ ಹಳೆಯ ಚೆಂಡಿನಲ್ಲಿರಲಿ, ಬ್ಯಾಟ್ಸ್‌ಮನ್‌ಗೆ ಎಲ್ಲ ರೀತಿಯಲ್ಲೂ ತೊಂದರೆ ಕೊಡುವ ಪ್ರತಿಭೆ ಬುಮ್ರಾ ಅವರಲ್ಲಿದೆ. ಬುಮ್ರಾ ಎಲ್ಲಾ ಮೂರು ಮಾದರಿಗಳಲ್ಲಿ ಅತ್ಯುತ್ತಮ ವೇಗದ ಬೌಲರ್. ಅವರ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

1 / 7
ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಈ ವರ್ಷದ ಕೊನೆಯಲ್ಲಿ  ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಡಬ್ಲ್ಯುಟಿಸಿ ಫೈನಲ್ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಅತ್ಯಂತ ಮಹತ್ವದಾಗಿದೆ. ನವೆಂಬರ್ 22 ರಿಂದ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ಸರಣಿ ಪ್ರಾರಂಭವಾಗಲಿದೆ.

2 / 7
ಆದರೆ ಸರಣಿ ಆರಂಭಕ್ಕೂ ಮುನ್ನವೇ ಆಸೀಸ್ ಆಟಗಾರರ ಮೈಂಡ್ ಗೇಮ್ ಶುರುವಾಗಿದ್ದು, ಕೆಲವು ಆಟಗಾರರು ಟೀಂ ಇಂಡಿಯಾವನ್ನು ಸೋಲಿಸೆಯೇ ತೀರುತ್ತೇವೆ ಎಂಬ ಹೇಳಿಕೆ ನೀಡುತ್ತಿದ್ದರೆ, ಇನ್ನು ಕೆಲವು ಆಟಗಾರರು ಟೀಂ ಇಂಡಿಯಾ ಆಟಗಾರರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ. ಅವರ ಸಾಲಿಗೆ ಇದೀಗ ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಸೇರಿದ್ದಾರೆ.

3 / 7
ಆಸೀಸ್ ಬ್ಯಾಟಿಂಗ್ ವಿಭಾಗದ ಪ್ರಮುಖ ಬೆನ್ನೇಲುಬಾಗಿರುವ ಸ್ಟೀವ್ ಸ್ಮಿತ್, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾರನ್ನು ಹೊಗಳಿದ್ದು, ಪ್ರಸ್ತುತ ಕ್ರಿಕೆಟ್​ನಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ವೇಗದ ಬೌಲರ್ ಎಂದು ಬಣ್ಣಿಸಿದ್ದಾರೆ.

4 / 7
ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ ಕಳೆದ ಎರಡು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. ಈ ತಂಡದ ವಿರುದ್ಧ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಬೇಕಾದರೆ, ಬುಮ್ರಾ ಕೊಡುಗೆ ಬಹಳ ಮುಖ್ಯ. ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ನೀಡುವ ಜವಾಬ್ದಾರಿ ಬುಮ್ರಾ ಅವರ ಮೇಲಿದೆ. ಅದಕ್ಕೆ ಪೂರಕವಾಗಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ಬುಮ್ರಾ ತಮ್ಮ ಕೈಚೆಳಕ ತೊರುತ್ತಿದ್ದಾರೆ.

5 / 7
ಈ ನಡುವೆ ಕ್ರೀಡಾ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸ್ಮಿತ್, ಬುಮ್ರಾ ಒಬ್ಬ ಶ್ರೇಷ್ಠ ಬೌಲರ್. ಹೊಸ ಚೆಂಡಿನಲಿರಲಿ, ಸ್ವಲ್ಪ ಹಳೆಯ ಚೆಂಡಿನಿರಲಿ ಅಥವಾ ಹಳೆಯ ಚೆಂಡಿನಲ್ಲಿರಲಿ, ಬ್ಯಾಟ್ಸ್‌ಮನ್‌ಗೆ ಎಲ್ಲ ರೀತಿಯಲ್ಲೂ ತೊಂದರೆ ಕೊಡುವ ಪ್ರತಿಭೆ ಬುಮ್ರಾ ಅವರಲ್ಲಿದೆ. ಬುಮ್ರಾ ಎಲ್ಲಾ ಮೂರು ಮಾದರಿಗಳಲ್ಲಿ ಅತ್ಯುತ್ತಮ ವೇಗದ ಬೌಲರ್. ಅವರ ವಿರುದ್ಧ ಆಡುವುದು ಯಾವಾಗಲೂ ಸವಾಲಿನ ಸಂಗತಿ ಎಂದಿದ್ದಾರೆ.

6 / 7
ಸ್ಟೀವ್ ಸ್ಮಿತ್ ಕಳೆದ ಕೆಲವು ಸರಣಿಗಳಲ್ಲಿ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸ್ಮಿತ್ ಈ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬರುವ ಸಾಧ್ಯತೆಗಳಿವೆ. ಡೇವಿಡ್ ವಾರ್ನರ್ ನಿವೃತ್ತಿಯ ನಂತರ, ಆಸ್ಟ್ರೇಲಿಯಾದಲ್ಲಿ ಆರಂಭಿಕ ಜೋಡಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಮಿತ್ ಆಸ್ಟ್ರೇಲಿಯಾದ ಅನುಭವಿ ಬ್ಯಾಟ್ಸ್‌ಮನ್ ಆಗಿದ್ದು, ತಂಡದ ಪರ ಇದುವರೆಗೆ 109 ಟೆಸ್ಟ್‌ಗಳನ್ನು ಆಡಿದ್ದಾರೆ. ಇದಲ್ಲದೆ ಭಾರತದ ವಿರುದ್ಧ ಸ್ಮಿತ್​ಗೆ 10000 ರನ್ ಪೂರೈಸುವ ಅವಕಾಶವೂ ಇದೆ.

7 / 7
ಇತ್ತ ಭಾರತದ ಪರ 2018 ರಲ್ಲಿ ತನ್ನ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದ ಬುಮ್ರಾ ಇದುವರೆಗೆ 37 ಪಂದ್ಯಗಳಿಂದ 164 ವಿಕೆಟ್ ಪಡೆದಿದ್ದಾರೆ. ಭಾರತ ಹಲವು ಪಂದ್ಯಗಳ ಗೆಲ್ಲುವಲ್ಲಿ ಬುಮ್ರಾ ಮಹತ್ವದ ಕೊಡುಗೆ ನೀಡಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿಯೂ ಅವರು ಪ್ರಭಾವಿ ಪ್ರದರ್ಶನ ನೀಡಿ ತಂಡಕ್ಕೆ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.