IND vs AUS: ಟೆಸ್ಟ್ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿಗಿಂತ ಮೊಹಮ್ಮದ್ ಶಮಿಯೇ ಬೆಸ್ಟ್..!

Edited By:

Updated on: Feb 11, 2023 | 1:07 PM

IND vs AUS: ವಾಸ್ತವವಾಗಿ ವಿರಾಟ್ ಕೊಹ್ಲಿಯನ್ನು ಶಮಿ ಹಿಂದಿಕ್ಕಲು ಪ್ರಮುಖ ಕಾರಣವೆಂದರೆ ಆಸ್ಟ್ರೇಲಿಯಾ ವಿರುದ್ಧ ಶಮಿ ಬಾರಿಸಿದ ಆ 3 ಸಿಕ್ಸರ್.

1 / 5
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತದ ಮೊದಲ ಇನ್ನಿಂಗ್ಸ್ 400 ರನ್‌ಗಳಿಗೆ ಅಂತ್ಯಗೊಂಡಿದೆ. ಈ 400 ರನ್‌ಗಳಲ್ಲಿ ಮೊಹಮ್ಮದ್ ಶಮಿ ಅವರ ಕೊಡುಗೆ 37 ರನ್. ಟೆಸ್ಟ್ ಕ್ರಿಕೆಟ್‌ನ ವಿಷಯದಲ್ಲಿ ಇದು ಶಮಿ ಅವರ ಬಿರುಸಿನ ಇನ್ನಿಂಗ್ಸ್ ಆಗಿದ್ದು, ಈ ಇನ್ನಿಂಗ್ಸ್ ಮೂಲಕ ಶಮಿ, ವಿರಾಟ್ ಕೊಹ್ಲಿಯನ್ನು ಸಹ ಹಿಂದಿಕ್ಕಿದ್ದಾರೆ.

2 / 5
ವಾಸ್ತವವಾಗಿ ವಿರಾಟ್ ಕೊಹ್ಲಿಯನ್ನು ಶಮಿ ಹಿಂದಿಕ್ಕಲು ಪ್ರಮುಖ ಕಾರಣವೆಂದರೆ ಆಸ್ಟ್ರೇಲಿಯಾ ವಿರುದ್ಧ ಶಮಿ ಬಾರಿಸಿದ ಆ 3 ಸಿಕ್ಸರ್.

3 / 5
ನಾಗ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್‌ಗಳ ಬಿರುಸಿನ ಇನ್ನಿಂಗ್ಸ್‌ ಆಡಿದ ಶಮಿ, 3 ಭರ್ಜರಿ ಸಿಕ್ಸರ್‌ಗಳನ್ನು ಹೊಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಷಯದಲ್ಲಿ ವಿರಾಟ್ ಕೊಹ್ಲಿಯನ್ನು ಶಮಿ ಹಿಂದಿಕ್ಕಿದ್ದಾರೆ.

4 / 5
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 104 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು ಕೇವಲ 24 ಸಿಕ್ಸರ್‌ಗಳಷ್ಟೇ ಬಾರಿಸಿದ್ದಾರೆ. ಆದರೆ ಶಮಿ ಇದುವರೆಗೆ ಕೇವಲ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 25 ಸಿಕ್ಸರ್ ಬಾರಿಸಿದ್ದಾರೆ. ನಾಗ್ಪುರ ಟೆಸ್ಟ್‌ಗೂ ಮುನ್ನ ಶಮಿ 22 ಸಿಕ್ಸರ್‌ಗಳನ್ನು ಬಾರಿಸಿದ್ದರು.

5 / 5
ಇನ್ನು ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್ ಮೊದಲಿಗರಾಗಿದ್ದಾರೆ. ಸೆಹ್ವಾಗ್ ಟೆಸ್ಟ್ ಕ್ರಿಕೆಟ್​ನಲ್ಲಿ 91 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪ್ರಸ್ತುತ ಆಟಗಾರರ ಪೈಕಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರಲ್ಲಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.

Published On - 1:05 pm, Sat, 11 February 23