India vs Bangladesh: ಭಾರತ-ಬಾಂಗ್ಲಾ ಕೊನೆಯ ಏಕದಿನ ಪಂದ್ಯ ಯಾವಾಗ?: ಟೀಮ್ ಇಂಡಿಯಾ ನಾಯಕ ಯಾರು..?
TV9 Web | Updated By: Vinay Bhat
Updated on:
Dec 08, 2022 | 12:08 PM
KL Rahul Captain: ರೋಹಿತ್ ಶರ್ಮಾ ತೃತೀಯ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ನಾಯಕನ ಜವಾಬ್ದಾರಿ ಉಪ ನಾಯಕನಾಗಿರುವ ಕೆಎಲ್ ರಾಹುಲ್ ವಹಿಸಲಿದ್ದಾರೆ. ಅಂತಿಮ ಏಕದಿನ ಪಂದ್ಯ ಡಿಸೆಂಬರ್ 10 ಶನಿವಾರದಂದು ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಏರ್ಪಡಿಸಲಾಗಿದೆ.
1 / 7
ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೆ, ಢಾಕಾದ ಶೇರೆ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಬೌಲರ್ಗಳು ಯಶಸ್ಸು ಸಾಧಿಸಲಿಲ್ಲ. 69 ರನ್ಗೆ ಬಾಂಗ್ಲಾದ 6 ವಿಕೆಟ್ ಕಬಳಿಸಲು ಯಶಸ್ಸಿಯಾದ ಬೌಲರ್ಗಳು ನಂತರದ ಒಂದು ವಿಕೆಟ್ ಕೀಳಲು ಪರದಾಡಿದರು.
2 / 7
ದ್ವಿತೀಯ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ನಾಯಕ ರೋಹಿತ್ ಶರ್ಮಾ ಹೋರಾಟಕ್ಕೆ ಫಲ ಸಿಗಲಿಲ್ಲ. 5 ರನ್ಗಳ ರೋಚಕ ಜಯದೊಂದಿಗೆ ಬಾಂಗ್ಲಾ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದೀಗ ಅಂತಿಮ ಏಕದಿನವನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಪ್ಲಾನ್ ಮಾಡಿಕೊಂಡಿದೆ.
3 / 7
India vs BAN
4 / 7
ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು.
5 / 7
ತೃತೀಯ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಇಂದು ಚಿತ್ತಗಾಂಗ್ಗೆ ತಲುಪಿದ್ದಾರೆ. ಕೆಲ ಆಟಗಾರರು ಇಂದು ಮಧ್ಯಾಹ್ನದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಇದರ ನಡುವೆ ರೋಹಿತ್ ಶರ್ಮಾ ಇಂಜುರಿಯಿಂದ ಮೂರನೇ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹಾಗಾದರೆ ಟೀಮ್ ಇಂಡಿಯಾ ನಾಯಕ ಯಾರು?
6 / 7
ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ರೋಹಿತ್ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಇದೀಗ ಇವರು ತೃತೀಯ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ನಾಯಕನ ಜವಾಬ್ದಾರಿ ಉಪ ನಾಯಕನಾಗಿರುವ ಕೆಎಲ್ ರಾಹುಲ್ ವಹಿಸಲಿದ್ದಾರೆ.
7 / 7
ರೋಹಿತ್ ಜೊತೆಗೆ ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿನಿ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
Published On - 12:08 pm, Thu, 8 December 22