Virat Kohli: ಕೇವಲ 30 ರನ್​ಗಳಷ್ಟೇ ಬೇಕು; ಮತ್ತೊಂದು ದಾಖಲೆ ಬರೆಯಲು ಸಜ್ಜಾದ ಕಿಂಗ್ ಕೊಹ್ಲಿ..!

Edited By:

Updated on: Dec 03, 2022 | 1:19 PM

Virat Kohli: ವಿರಾಟ್ ಕೊಹ್ಲಿ ಮೊದಲ ಅಥವಾ ಎರಡನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 30 ರನ್ ಗಳಿಸಿದರೆ, ಅವರು ಯಾವುದೇ ದೇಶದಲ್ಲಿ 1000 ಏಕದಿನ ರನ್​ಗಳನ್ನು ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯಲಿದ್ದಾರೆ.

1 / 5
ಏಕದಿನ ಹಾಗೂ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೇ ಬಾಂಗ್ಲಾದೇಶಕ್ಕೆ ಹಾರಿದ್ದಾರೆ. ಈ ಇಭಯ ದೇಶಗಳ ನಡುವೆ ಡಿಸೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಕಿಂಗ್ ಕೊಹ್ಲಿ ಕೇವಲ 30 ರನ್ ಗಳಿಸಿದರೆ ಸಾಕು ಮತ್ತೊಂದು ವಿಶ್ವದಾಖಲೆ ಅವರ ಹೆಸರಲ್ಲಿ ದಾಖಲಾಗಲಿದೆ.

ಏಕದಿನ ಹಾಗೂ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಈಗಾಗಲೇ ಬಾಂಗ್ಲಾದೇಶಕ್ಕೆ ಹಾರಿದ್ದಾರೆ. ಈ ಇಭಯ ದೇಶಗಳ ನಡುವೆ ಡಿಸೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಕಿಂಗ್ ಕೊಹ್ಲಿ ಕೇವಲ 30 ರನ್ ಗಳಿಸಿದರೆ ಸಾಕು ಮತ್ತೊಂದು ವಿಶ್ವದಾಖಲೆ ಅವರ ಹೆಸರಲ್ಲಿ ದಾಖಲಾಗಲಿದೆ.

2 / 5

ಈ ಏಕದಿನ ಸರಣಿಯಲ್ಲಿ 30 ರನ್ ಬಾರಿಸುವುದರೊಂದಿಗೆ ಕಿಂಗ್ ಕೊಹ್ಲಿ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ ಅತಿ ವೇಗವಾಗಿ 1000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

3 / 5

ವಿರಾಟ್ ಕೊಹ್ಲಿ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ಆಡಿರುವ 15 ಏಕದಿನ ಪಂದ್ಯಗಳಲ್ಲಿ 970 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಸೇರಿವೆ. ಅಲ್ಲದೆ ಪ್ರಸ್ತುತ ಭಾರತ ತಂಡದಲ್ಲಿ ಆಡುತ್ತಿರುವ ಆಟಗಾರರಲ್ಲಿ 5 ಶತಕಗಳನ್ನು ಬಾರಿಸಿರುವ ಏಕೈಕ ಆಟಗಾರ ನಮ್ಮ ವಿರಾಟ್.

4 / 5

ಪ್ರಸ್ತುತ, ಯಾವುದೇ ದೇಶದಲ್ಲಿ ವೇಗವಾಗಿ 1000 ಏಕದಿನ ರನ್ ಪೂರ್ಣಗೊಳಿಸಿರುವ ದಾಖಲೆಯೂ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ರೋಹಿತ್ 18 ಏಕದಿನ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಅದೇ ಸಮಯದಲ್ಲಿ, ಶಿಖರ್ ಧವನ್ ಅವರು ಇಂಗ್ಲೆಂಡ್ನಲ್ಲಿ 19 ಇನ್ನಿಂಗ್ಸ್ಗಳಲ್ಲಿ 1000 ಏಕದಿನ ರನ್ ಪೂರೈಸಿದ ದಾಖಲೆ ಬರೆದಿದ್ದಾರೆ.

5 / 5

ಆದರೆ ಈಗ ವಿರಾಟ್ ಕೊಹ್ಲಿ ಮೊದಲ ಅಥವಾ ಎರಡನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 30 ರನ್ ಗಳಿಸಿದರೆ, ಅವರು ಯಾವುದೇ ದೇಶದಲ್ಲಿ 1000 ಏಕದಿನ ರನ್​ಗಳನ್ನು ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯಲಿದ್ದಾರೆ.

Published On - 1:19 pm, Sat, 3 December 22

Loading...
Unable to load recommendations.
Follow Us