IND vs BAN: ಏಕದಿನ ವಿಶ್ವಕಪ್​ನಲ್ಲಿ ಲಾರಾ-ಡಿವಿಲಿಯರ್ಸ್ ದಾಖಲೆ ಮುರಿದ ರೋಹಿತ್- ಕೊಹ್ಲಿ..!

|

Updated on: Oct 19, 2023 | 9:56 PM

IND vs BAN, ICC ODI World Cup 2023: ಅಕ್ಟೋಬರ್ 19 ರ ಗುರುವಾರದಂದು ಪುಣೆಯ MCA ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಾಲ್ಕನೇ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

1 / 10
ಅಕ್ಟೋಬರ್ 19 ರ ಗುರುವಾರದಂದು ಪುಣೆಯ MCA ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಾಲ್ಕನೇ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

2 / 10
ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 40 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಇದರೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ  ದಾಖಲೆಯಲ್ಲಿ ಬಿರಾನ್ ಲಾರಾ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿದರು.

3 / 10
ರೋಹಿತ್ ಕೇವಲ 21 ಇನ್ನಿಂಗ್ಸ್‌ಗಳಲ್ಲಿ 1243 ರನ್ ಸಿಡಿಸಿದ್ದು, 2023 ರ ಆವೃತ್ತಿಯಲ್ಲಿ ಸ್ಕೋರಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ರೋಹಿತ್ ಕೇವಲ 2 ರನ್​ಗಳಿಂದ ವಿಶ್ವಕಪ್‌ನಲ್ಲಿ ತಮ್ಮ ಐದನೇ ಅರ್ಧಶತಕದಿಂದ ವಂಚಿತರಾದರು.

4 / 10
ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಏಕದಿನ ವಿಶ್ವಕಪ್‌ನಲ್ಲಿ ತಮ್ಮ 11 ನೇ ಅರ್ಧಶತಕವನ್ನು ದಾಖಲಿಸಿದ್ದು, ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಡಿವಿಲಿಯರ್ಸ್ ಮತ್ತು ಲಾರಾ ಅವರನ್ನು ಹಿಂದಿಕ್ಕಿದ್ದಾರೆ.

5 / 10
ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ 44 ಇನ್ನಿಂಗ್ಸ್‌ಗಳಲ್ಲಿ 2278 ರನ್‌ಗಳೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

6 / 10
ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 35 ಇನ್ನಿಂಗ್ಸ್‌ಗಳಲ್ಲಿ 1532 ರನ್ ಗಳಿಸಿದ್ದಾರೆ.

7 / 10
ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಮಾಜಿ ವಿಕೆಟ್​ಕೀಪರ್ ಬ್ಯಾಟರ್ ಕುಮಾರಸಂಗಕ್ಕಾರ 35 ಇನ್ನಿಂಗ್ಸ್‌ಗಳಲ್ಲಿ 1532 ರನ್ ಕಲೆಹಾಕಿದ್ದರು.

8 / 10
ಉಳಿದಂತೆ ಇದೀಗ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ಟೀಂ ಇಂಡಿಯಾದ ಮಾಜಿ ಹಾಗೂ ಹಾಲಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಂಟ್ರಿಕೊಟ್ಟಿದ್ದಾರೆ.

9 / 10
ಈ ಇಬ್ಬರ ಆಗಮನದಿಂದ 33 ಇನ್ನಿಂಗ್ಸ್‌ಗಳಲ್ಲಿ 1225 ರನ್ ಕಲೆಹಾಕಿದ್ದ ಬ್ರಿಯಾನ್ ಲಾರಾ ಹಾಗೂ 22 ಇನ್ನಿಂಗ್ಸ್‌ಗಳಲ್ಲಿ 1207 ರನ್ ಸಿಡಿಸಿದ್ದ ಎಬಿ ಡಿವಿಲಿಯರ್ಸ್ ಕ್ರಮವಾಗಿ 6 ಮತ್ತು 7ನೇ ಸ್ಥಾನಕ್ಕೆ ಕುಸಿದಿದ್ದಾರೆ.

10 / 10
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಆಟಗಾರರ ಪೈಕಿ ಇದೀಗ ಭಾರತದ ಮೂವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ.