IND vs ENG: ಧ್ರುವ್ ಜುರೆಲ್ ಭವಿಷ್ಯದ ಎಂಎಸ್ ಧೋನಿ ಎಂದ ಭಾರತದ ಮಾಜಿ ನಾಯಕ
IND vs ENG: ಮೂರನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ ಜುರೇಲ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 90 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಅಲ್ಲದೆ ತಮ್ಮ ಆಟದಿಂದ ಪರಿಣಿತರ ಪ್ರಶಂಸೆಗೆ ಪಾತ್ರರಾದರು. ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಧ್ರುವ್ ಅವರನ್ನು ಭವಿಷ್ಯದ ಧೋನಿ ಎಂದಿದ್ದು ಅವರ ಆಟಕ್ಕೆ ಸಾಕ್ಷಿಯಾಗಿತ್ತು.
1 / 6
ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಭಾರತದ ವಿಕೆಟ್‌ಕೀಪರ್ ಧ್ರುವ್ ಜುರೆಲ್ ಅವರಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸರಣಿಯಲ್ಲಿ ಎರಡನೇ ಪಂದ್ಯವನ್ನಾಡುತ್ತಿರುವ ಜುರೇಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
2 / 6
ಮೂರನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ ಜುರೇಲ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 90 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಅಲ್ಲದೆ ತಮ್ಮ ಆಟದಿಂದ ಪರಿಣಿತರ ಪ್ರಶಂಸೆಗೆ ಪಾತ್ರರಾದರು. ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಧ್ರುವ್ ಅವರನ್ನು ಭವಿಷ್ಯದ ಧೋನಿ ಎಂದಿದ್ದು ಅವರ ಆಟಕ್ಕೆ ಸಾಕ್ಷಿಯಾಗಿತ್ತು.
3 / 6
ಆಂಗ್ಲರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಕೆಟ್ಟ ಎಸೆತಗಳನ್ನು ದಂಡಿಸುತ್ತಿದ್ದ ಧ್ರುವ್ ಆಟವನ್ನು ನೋಡಿದ ಗವಾಸ್ಕರ್, ಜುರೆಲ್ ಅವರ ಉಪಸ್ಥಿತಿಯನ್ನು ದಂತಕಥೆ ಎಂಎಸ್ ಧೋನಿಯವರ ಉಪಸ್ಥಿತಿಗೆ ಹೋಲಿಸಿದರು ಮತ್ತು ಭವಿಷ್ಯದಲ್ಲಿ ಜುರೇಲ್ ಅನೇಕ ಶತಕಗಳನ್ನು ಸಿಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
4 / 6
ತಮ್ಮ ಇನ್ನಿಂಗ್ಸ್‌ನಲ್ಲಿ 149 ಎಸೆತಗಳನ್ನು ಎದುರಿಸಿದ ಜುರೇಲ್ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದ್ದರು. ಅಲ್ಲದೆ ಅವರು ಎಂಟನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಅವರೊಂದಿಗೆ 76 ರನ್‌ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು.
5 / 6
ಮೂರನೇ ಟೆಸ್ಟ್ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಜುರೇಲ್ ಮೊದಲ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ನಲ್ಲೂ ತಮ್ಮ ಸಾಮಥ್ಯ್ರ ತೋರಿದ್ದ ಜುರೇಲ್, ತಮ್ಮ ಅದ್ಭುತ ಕೈಚಳಕದ ಮೂಲಕ ಬೈರ್ಸ್ಟೋವ್ರನ್ನು ರನ್ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
6 / 6
ಪ್ರಸ್ತುತ ನಾಲ್ಕನೇ ಟೆಸ್ಟ್ನಲ್ಲಿ 192 ರನ್‌ಗಳ ಗೆಲುವಿನ ಗುರಿ ಪಡೆದಿರುವ ಭಾರತ ನಾಲ್ಕನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಕಲೆಹಾಕಿದೆ. ನಾಲ್ಕನೇ ದಿನದಂದು ಭಾರತದ ಗೆಲುವಿಗೆ ಇನ್ನು 152 ರನ್ ಬೇಕಾಗಿದೆ. ಇಂಗ್ಲೆಂಡ್ ಗೆಲುವಿಗೆ 10 ವಿಕೆಟ್ ಅವಶ್ಯಕವಾಗಿದೆ.