IND vs ENG: ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಜೇಮ್ಸ್ ಆಂಡರ್ಸನ್ ದಾಖಲೆ ಮುರಿದ ಶೋಯೆಬ್ ಬಶೀರ್..!
IND vs ENG: ಟೀಂ ಇಂಡಿಯಾ ವಿರುದ್ಧದ ಚೊಚ್ಚಲ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಬಶೀರ್, ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಜೇಮ್ಸ್ ಆಂಡರ್ಸನ್ ಅವರಂತಹ ಆಟಗಾರರನ್ನು ಮೀರಿಸಿದ್ದಾರೆ.
1 / 7
ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಇಂಜುರಿಯಿಂದಾಗಿ ಹಾಗೂ ರೆಹಾನ್ ಅಹ್ಮದ್ ಅವರ ಅಲಭ್ಯತೆಯಿಂದಾಗಿ ಇಂಗ್ಲೆಂಡ್ ತಂಡದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಆಡುವ ಅವಕಾಶ ಪಡೆದಿರುವ ಯುವ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್, ಸರಣಿಯಲ್ಲಿ ಆಡಿದ ಎರಡನೇ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ್ದಾರೆ.
2 / 7
ಭಾರತ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಐದು ವಿಕೆಟ್ ಕಬಳಿಸಿದ ಬಶೀರ್, ಟೀಂ ಇಂಡಿಯಾ ಇನ್ನಿಂಗ್ಸ್ ಹಿನ್ನಡೆ ಅನುಭವಿಸುವಲು ಪ್ರಮುಖ ರೂವಾರಿಯಾದರು.
3 / 7
ಮೊದಲ ಇನ್ನಿಂಗ್ಸ್ನಲ್ಲಿ 44 ಓವರ್ಗಳನ್ನು ಬೌಲ್ ಮಾಡಿದ ಬಶೀರ್, 8 ಮೇಡನ್ ಓವರ್ಗಳೊಂದಿಗೆ 118 ರನ್ ಬಿಟ್ಟುಕೊಟ್ಟು ಪ್ರಮುಖ5 ವಿಕೆಟ್ ಕಬಳಿಸಿದರು.
4 / 7
ಬಷೀರ್ಗೆ ಬಲಿಯಾದವರಲ್ಲಿ ಅರ್ಧಶತಕ ಸಿಡಿಸಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದರ್, ರವೀಂದ್ರ ಜಡೇಜಾ, ಆಕಾಶ್ ದೀಪ್ ಸೇರಿದ್ದಾರೆ. ಆಡಿದ ಮೊದಲ ಸರಣಿಯ ಎರಡನೇ ಪಂದ್ಯದಲ್ಲಿ 5 ವಿಕೆಟ್ಗಳ ಸಾಧನೆ ಮಾಡಿದ ಬಶೀರ್, ತಮ್ಮದೇ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅವರ ಅಪರೂಪದ ದಾಖಲೆಯನ್ನು ಪುಡಿಗಟ್ಟಿದ್ದಾರೆ.
5 / 7
ಟೀಂ ಇಂಡಿಯಾ ವಿರುದ್ಧದ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಐದು ವಿಕೆಟ್ ಪಡೆದ ಬಶೀರ್, ಇಂಗ್ಲೆಂಡ್ ಪರ ಈ ಸಾಧನೆ ಮಾಡಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಜೇಮ್ಸ್ ಆಂಡರ್ಸನ್ ಅವರಂತಹ ಆಟಗಾರರನ್ನು ಮೀರಿಸಿದ್ದಾರೆ.
6 / 7
20 ವರ್ಷ ಮತ್ತು 135 ದಿನಗಳಲ್ಲಿ ಬಶೀರ್ ಈ ಸಾಧನೆ ಮಾಡಿದ್ದು, ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ 20 ವರ್ಷ ಮತ್ತು 298 ದಿನಗಳಲ್ಲಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
7 / 7
ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೆಹಾನ್ ಅಹ್ಮದ್ 18 ವರ್ಷ 128 ದಿನಗಳಲ್ಲಿ ಕರಾಚಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 48 ರನ್ಗಳಿಗೆ 5 ವಿಕೆಟ್ ಪಡೆದಿದ್ದರು.