
ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಆಂಗ್ಲರ ನಾಡಿಗೆ ತೆರಳಿದ್ದು ಬಾಕಿ ಇರುವ ಒಂದು ಟೆಸ್ಟ್ ಪಂದ್ಯವನ್ನು ಆಡಲು ತಯಾರಿ ನಡೆಸುತ್ತಿದೆ. ಕಳೆದ ವರ್ಷ ಇಂಗ್ಲೆಂಡ್ (ENG vs IND) ಪ್ರವಾಸ ಬೆಳೆಸಿದ್ದಾಗ 5 ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ನಾಲ್ಕನ್ನು ಮಾತ್ರ ಆಡಿತ್ತು. ಇದೀಗ ಉಳಿದಿರುವ ಒಂದು ಪಂದ್ಯವನ್ನು ಈ ಪ್ರವಾಸದಲ್ಲಿ ಆಡಲಿದೆ.

ಭಾರತ ಈ ಟೆಸ್ಟ್ ಸರಣಿಯಲ್ಲಿ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಜುಲೈ 1 ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಐದನೇ ಟೆಸ್ಟ್ ಕದನ ಶುರುವಾಗಲಿದೆ.

ಬಹುನಿರೀಕ್ಷಿತ ಟೆಸ್ಟ್ ಪಂದ್ಯವನ್ನು ಮುನ್ನಡೆಸುತ್ತಿರುವ ನಾಯಕ ರೋಹಿತ್ ಶರ್ಮಾ ಮತ್ತು ಸಹ ಓಪನರ್ ಶುಭ್ಮನ್ ಗಿಲ್ ತಮ್ಮ ಮೊದಲ ನೆಟ್ ಸೆಷನ್‌ನಲ್ಲಿ ಭರ್ಜರಿ ಅಭ್ಯಾಸ ಮಾಡುತ್ತಿರುವುದು ಕಂಡುಬಂತು.

ರೋಹಿತ್ ಮತ್ತು ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಬಿಸಿಸಿಐ ಹಂಚಿಕೊಂಡ ಕಿರು ಕ್ಲಿಪ್‌ನ ಮುಂಭಾಗದ ಪಾದದ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ್ದಾರೆ.

ಇಂಗ್ಲೆಂಡ್ಗೆ ತೆರಳುವ ಮುನ್ನ ಭಾರತೀಯ ಆಟಗಾರರು ಫೋಟೋಕ್ಕೆ ಪೋಸ್ ಕೊಟ್ಟ ಕ್ಷಣ.

ಅಭ್ಯಾಸದ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ.

ಬ್ಯಾಟಿಂಗ್ ಅಭ್ಯಾಸದಲ್ಲಿ ವಿರಾಟ್ ಕೊಹ್ಲಿ.
Published On - 8:45 am, Tue, 21 June 22