IND vs ENG 5th Test: ಒಂದಲ್ಲ, ಎರಡಲ್ಲ: ಐದನೇ ಟೆಸ್ಟ್​ನಲ್ಲಿ ಯಶಸ್ವಿ ಜೈಸ್ವಾಲ್ ಸೃಷ್ಟಿಸಲಿರುವ ದಾಖಲೆಗಳು ನೋಡಿ

|

Updated on: Mar 04, 2024 | 9:22 AM

Yashasvi Jaiswal Record: ತವರಿನಲ್ಲಿ ತನ್ನ ಮೊದಲ ಟೆಸ್ಟ್ ಸರಣಿ ಆಡುತ್ತಿರುವ 22 ವರ್ಷದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್, ಇದುವರೆಗೆ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಇದೀಗ ಐದನೇ ಟೆಸ್ಟ್‌ನಲ್ಲಿ ಕೂಡ ಸಾಧನೆಯ ಶಿಖರವನ್ನೇರಲು ಸಜ್ಜಾಗಿದ್ದಾರೆ. ಗುರುವಾರ (ಮಾರ್ಚ್ 7) ಧರ್ಮಶಾಲಾದಲ್ಲಿ ಐದನೇ ಟೆಸ್ಟ್ ಆರಂಭವಾಗಲಿದೆ.

1 / 7
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಯಂಗ್ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಇಲ್ಲಿಯವರೆಗೆ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಎಡಗೈ ಬ್ಯಾಟರ್ 93.57 ರನ್ ಸರಾಸರಿಯಲ್ಲಿ 655 ರನ್ ಗಳಿಸಿದ್ದಾರೆ. ಅವರು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

2 / 7
ತವರಿನಲ್ಲಿ ತನ್ನ ಮೊದಲ ಟೆಸ್ಟ್ ಸರಣಿ ಆಡುತ್ತಿರುವ 22 ವರ್ಷದ ಕ್ರಿಕೆಟಿಗ, ಇದುವರೆಗೆ ಆಡಿದ ನಾಲ್ಕು ಟೆಸ್ಟ್‌ಗಳಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಮುರಿದಿದ್ದಾರೆ. ಇದೀಗ ಐದನೇ ಟೆಸ್ಟ್‌ನಲ್ಲಿ ಕೂಡ ಸಾಧನೆಯ ಶಿಖರವನ್ನೇರಲು ಸಜ್ಜಾಗಿದ್ದಾರೆ. ಗುರುವಾರ (ಮಾರ್ಚ್ 7) ಧರ್ಮಶಾಲಾದಲ್ಲಿ ಐದನೇ ಟೆಸ್ಟ್ ಆರಂಭವಾಗಲಿದೆ.

3 / 7
ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ 29 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟೆಸ್ಟ್‌ ಇತಿಹಾಸದಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಲಿದ್ದಾರೆ. ಸದ್ಯ ಈ ದಾಖಲೆ ಚೇತೇಶ್ವರ ಪೂಜಾರ ಅವರ ಹೆಸರಿನಲ್ಲಿದ್ದು, ಈ ಮೈಲುಗಲ್ಲು ತಲುಪಲು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.

4 / 7
ಜೈಸ್ವಾಲ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇತಿಹಾಸದ ಮೊದಲ ಭಾರತೀಯ ಬ್ಯಾಟರ್ ಮತ್ತು ಒಟ್ಟಾರೆ ಮೂರನೇ ಆಟಗಾರನಾಗುವ ಅವಕಾಶಹೊಂದಿದ್ದಾರೆ. ಸದ್ಯಕ್ಕೆ, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಗ್ರಹಾಂ ಗೂಚ್ ಹೆಸರಿನಲ್ಲಿದೆ, ಅವರು 1990 ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ಸರಣಿಯಲ್ಲಿ ಒಟ್ಟು 752 ರನ್ ಗಳಿಸಿದ್ದರು.

5 / 7
ಐದನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 1 ರನ್ ಪೂರೈಸಿದ ತಕ್ಷಣ ಟೀಮ್ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ. ಇದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ದಾಖಲೆಯಾಗಿದೆ.

6 / 7
ಈವರೆಗೆ ವಿರಾಟ್ ಕೊಹ್ಲಿ (2018 ರಲ್ಲಿ 655 ರನ್) ಮತ್ತು ಜೈಸ್ವಾಲ್ (655 ರನ್) ಸಮಬಲದಲ್ಲಿದ್ದಾರೆ. ಹಾಗೆಯೆ ಈ ಟೆಸ್ಟ್‌ನಲ್ಲಿ ಜೈಸ್ವಾಲ್ 120 ರನ್ ಗಳಿಸಿದರೆ, ಅವರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸುನಿಲ್ ಗವಾಸ್ಕರ್ ಅವರ (774) ದಾಖಲೆಯನ್ನು ಮುರಿಯುತ್ತಾರೆ.

7 / 7
ಆಂಗ್ಲರ ವಿರುದ್ಧದ ಐದನೇ ಟೆಸ್ಟ್‌ನಲ್ಲಿ, ಯಶಸ್ವಿ ಜೈಸ್ವಾಲ್ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟೆಸ್ಟ್ ಸರಣಿಯಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಇತಿಹಾಸದಲ್ಲಿ ಮತ್ತು ಒಟ್ಟಾರೆಯಾಗಿ ಬ್ರಾಡ್‌ಮನ್ ನಂತರ ಎರಡನೇ ಭಾರತೀಯ ಬ್ಯಾಟರ್ ಆಗುತ್ತಾರೆ.