James Anderson: ಅ್ಯಂಡರ್ಸನ್ ಮುಂದಿದೆ ಮೂರು ದಾಖಲೆಗಳು
TV9 Web | Updated By: ಝಾಹಿರ್ ಯೂಸುಫ್
Updated on:
Mar 02, 2024 | 1:59 PM
India vs England 5th Test: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 3-1 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿದರೆ, ಉಳಿದ ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಇದೀಗ 5ನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ.
1 / 5
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಗುರುವಾರದಿಂದ ಶುರುವಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಮಿಂಚಿದರೆ, ಮೂರು ದಾಖಲೆಗಳನ್ನು ಬರೆಯಬಹುದು. ಆ ದಾಖಲೆಗಳಾವುವು ಎಂಬುದನ್ನು ನೋಡೋಣ...
2 / 5
700 ವಿಕೆಟ್ಗಳ ವಿಶ್ವ ದಾಖಲೆ: ಟೀಮ್ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಎಂಬ ವಿಶ್ವ ದಾಖಲೆ ಜೇಮ್ಸ್ ಅ್ಯಂಡರ್ಸನ್ ಪಾಲಾಗಲಿದೆ. 186 ಟೆಸ್ಟ್ ಪಂದ್ಯಗಳಿಂದ ಒಟ್ಟು 698 ವಿಕೆಟ್ ಕಬಳಿಸಿರುವ ಅ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.
3 / 5
150 ವಿಕೆಟ್ಗಳ ಸಾಧನೆ: ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ 150 ವಿಕೆಟ್ಗಳನ್ನು ಕಬಳಿಸಿದ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ಗೆ ಬೇಕಿರುವುದು ಕೇವಲ 3 ವಿಕೆಟ್ಗಳು ಮಾತ್ರ. ಟೀಮ್ ಇಂಡಿಯಾ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನಾಡಿರುವ ಜಿಮ್ಮಿ ಇದುವರೆಗೆ 147 ವಿಕೆಟ್ಗಳನ್ನು ಕಬಳಿಸಿದ್ದಾರೆ.
4 / 5
250 ವಿಕೆಟ್ಗಳ ದಾಖಲೆ: ವಿದೇಶಿ ಪಿಚ್ನಲ್ಲಿ 250 ಟೆಸ್ಟ್ ಪಂದ್ಯಗಳನ್ನು ಕಬಳಿಸಿದ ಸಾಧನೆ ಮಾಡಲು ಅ್ಯಂಡರ್ಸನ್ಗೆ ಇನ್ನೂ 8 ವಿಕೆಟ್ಗಳ ಅವಶ್ಯಕತೆಯಿದೆ. ಟೀಮ್ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿದರೆ ವಿಶೇಷ ದಾಖಲೆ ಬರೆಯಬಹುದು.
5 / 5
ಒಟ್ಟಿನಲ್ಲಿ 41ರ ಹರೆಯದಲ್ಲೂ ಕರಾರುವಾಕ್ ದಾಳಿ ಸಂಘಟಿಸುತ್ತಿರುವ ಜೇಮ್ಸ್ ಅ್ಯಂಡರ್ಸನ್ ಇದೀಗ ವಿಶ್ವ ದಾಖಲೆ ಹೊಸ್ತಿಲಲ್ಲಿದ್ದು, ಧರ್ಮಶಾಲಾದಲ್ಲಿ ನಡೆಯಲಿರುವ ಭಾರತದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ 700 ವಿಕೆಟ್ಗಳ ವಿಶೇಷ ಸಾಧನೆ ಮಾಡಲಿದ್ದಾರಾ ಕಾದು ನೋಡಬೇಕಿದೆ.