IND vs ENG: ‘ಅವನಲ್ಲಿ ಹಸಿವಿದೆ’; ಸರ್ಫರಾಜ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರೋಹಿತ್ ಶರ್ಮಾ

Updated on: Feb 19, 2024 | 5:05 PM

IND vs ENG: ಸತತ ಪ್ರಯತ್ನಗಳ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ಆಯ್ಕೆಗಾರರ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್​ ಚೊಚ್ಚಲ ಟೆಸ್ಟ್​ನಲ್ಲಿ ಆಡಿದ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, ಸರ್ಫರಾಜ್ ಆಟವನ್ನು ಹಾಡಿ ಹೊಗಳಿದ್ದಾರೆ.

1 / 8
ರಾಜ್‌ಕೋಟ್‌ ಟೆಸ್ಟ್​ನಲ್ಲಿ ಬಲಿಷ್ಠ ಆಂಗ್ಲ ತಂಡವನ್ನು ಬರೋಬ್ಬರಿ 434 ರನ್​ಗಳಿಂದ ಮಣಿಸಿದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯುವ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಾಜ್‌ಕೋಟ್‌ ಟೆಸ್ಟ್​ನಲ್ಲಿ ಬಲಿಷ್ಠ ಆಂಗ್ಲ ತಂಡವನ್ನು ಬರೋಬ್ಬರಿ 434 ರನ್​ಗಳಿಂದ ಮಣಿಸಿದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯುವ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

2 / 8

ಅದರಲ್ಲೂ ಸತತ ಪ್ರಯತ್ನಗಳ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ಆಯ್ಕೆಗಾರರ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಿದ ಸರ್ಫರಾಜ್ ಖಾನ್​ ಚೊಚ್ಚಲ ಟೆಸ್ಟ್​ನಲ್ಲಿ ಆಡಿದ ಎರಡೂ ಇನ್ನಿಂಗ್ಸ್​ಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು.

3 / 8

ಈ ಮೂಲಕ ಸರ್ಫರಾಜ್ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಅಲ್ಲದೆ ನಾಯಕ ರೋಹಿತ್ ಶರ್ಮಾ ಅವರ ನಂಬಿಕೆ ಗೆಲ್ಲುವಲ್ಲು ಯಶಸ್ವಿಯಾಗಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, ಸರ್ಫರಾಜ್ ಆಟವನ್ನು ಹಾಡಿ ಹೊಗಳಿದ್ದಾರೆ.

4 / 8

ಮೂರನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, ಸರ್ಫರಾಜ್ ಆಟವನ್ನು ನಾನು ಅಷ್ಟಾಗಿ ನೋಡಿಲ್ಲ. ಆದರೆ ಕೆಲವು ಮುಂಬೈ ಆಟಗಾರರು ಹೇಳಿದ ಪ್ರಕಾರ, ತಂಡ ಸಂಕಷ್ಟದಲ್ಲಿದ್ದಾಗ ಸರ್ಫರಾಜ್ ಏಕಾಂಗಿಯಾಗಿ ನಿಂತು ಹಲವು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಆಡಿದ್ದಾರೆ ಎಂಬುದನ್ನು ಕೇಳಿದ್ದೇನೆ.

5 / 8

ಸರ್ಫರಾಜ್​ಗೆ ರನ್​ಗಳ ಹಸಿವಿದೆ ಎಂಬುದನ್ನು ಅವರ ಆಟದಿಂದ ಗಮನಿಸಬಹುದಾಗಿದೆ. ಕಳೆದ 4-5 ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ ಎಂದರೆ ಅವರಲ್ಲಿ ಆ ಸಾಮಥ್ಯ್ರವಿದೆ ಎಂದರ್ಥ. ಸದ್ಯಕ್ಕೆ ನಾವು ಅವರೊಂದಿಗೆ ಯಾವುದೇ ಯೋಜನೆಗಳನ್ನು ಚರ್ಚಿಸಿಲ್ಲ.

6 / 8

ಏಕೆಂದರೆ ನೀವು ಅವನನ್ನು ಅವನ ಪಾಡಿಗೆ ಆಡಲು ಬಿಟ್ಟರೆ ಅವನು ತಂಡಕ್ಕಾಗಿ ಏನನ್ನು ಬೇಕಾದರು ಮಾಡುತ್ತಾನೆ ಎಂದು ನಾನು ಮುಂಬೈ ಆಟಗಾರರಿಂದ ಕೇಳಿದ್ದೇನೆ. ರಾಜ್‌ಕೋಟ್​ನಲ್ಲಿ ಪಂದ್ಯ ಆರಂಭವಾದಾಗ ಸರ್ಫರಾಜ್ ಕೊಂಚ ನರ್ವಸ್ ಆದಂತೆ ಕಾಣುತ್ತಿದ್ದರು. ಆದರೆ ಆಟ ಆರಂಭವಾದ ಬಳಿಕ ವಿಭಿನ್ನವಾದ ಸರ್ಫರಾಜ್ ಕಂಡುಬಂದರು ಎಂದಿದ್ದಾರೆ.

7 / 8

ರಾಜ್‌ಕೋಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ 62 ರನ್‌ಗಳ ಇನ್ನಿಂಗ್ಸ್ ಆಡಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 68 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಚೊಚ್ಚಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡರು.

8 / 8

ರಾಜ್‌ಕೋಟ್‌ನಲ್ಲಿ ತನ್ನ ಆಟದಿಂದ ನಾಯಕ ರೋಹಿತ್ ಶರ್ಮಾ ಅವರ ಹೃದಯ ಗೆದ್ದಿರುವ ಸರ್ಫರಾಜ್ ಮುಂದಿನ ಟೆಸ್ಟ್‌ಗಳಲ್ಲಿ ಇದೇ ರೀತಿಯ ಪ್ರದರ್ಶನ ನೀಡುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Loading...
Unable to load recommendations.
Follow Us