ಜಸ್ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್ಗಳ ಪಟ್ಟಿ ಇಲ್ಲಿದೆ
TV9 Web | Updated By: ಝಾಹಿರ್ ಯೂಸುಫ್
Updated on:
Aug 16, 2023 | 8:38 PM
Jasprit Bumrah: ಟೀಮ್ ಇಂಡಿಯಾದ 11ನೇ ಟಿ20 ನಾಯಕನಾಗಿ ಕಣಕ್ಕಿಳಿಯಲು ಜಸ್ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ. ಆಗಸ್ಟ್ 18 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಭಾರತ ಟಿ20 ತಂಡದ ನಾಯಕರಾಗಿ ಬುಮ್ರಾ ಪಾದಾರ್ಪಣೆ ಮಾಡಲಿದ್ದಾರೆ.
1 / 13
ಭಾರತ-ಐರ್ಲೆಂಡ್ ನಡುವಣ ಟಿ20 ಸರಣಿ ಆಗಸ್ಟ್ 18 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಭಾರತ ಟಿ20 ತಂಡದ 11ನೇ ನಾಯಕ ಎಂಬ ಹೆಗ್ಗಳಿಕೆ ಬುಮ್ರಾ ಪಾತ್ರರಾಗಲಿದ್ದಾರೆ.
2 / 13
ಇದಕ್ಕೂ ಮುನ್ನ ಭಾರತ ಟಿ20 ತಂಡವನ್ನು 10 ಕ್ಯಾಪ್ಟನ್ಗಳು ಮುನ್ನಡೆಸಿದ್ದಾರೆ. ಆ ಆಟಗಾರರು ಯಾರು? ಎಷ್ಟು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
3 / 13
1- ವೀರೇಂದ್ರ ಸೆಹ್ವಾಗ್: ಭಾರತ ಟಿ20 ತಂಡದ ಮೊದಲ ನಾಯಕ ವೀರೇಂದ್ರ ಸೆಹ್ವಾಗ್. 2006 ರಲ್ಲಿ ಸೆಹ್ವಾಗ್ ಒಂದು ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲೇ ಭಾರತ ತಂಡ ಜಯ ಸಾಧಿಸಿತ್ತು.
4 / 13
2- ಮಹೇಂದ್ರ ಸಿಂಗ್ ಧೋನಿ: 2007 ರಿಂದ 2016 ರವರೆಗೆ ಧೋನಿ ಭಾರತ ಟಿ20 ತಂಡವನ್ನು 72 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಟೀಮ್ ಇಂಡಿಯಾ 41 ಜಯ ಸಾಧಿಸಿದರೆ, 28 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಇನ್ನು ಒಂದು ಪಂದ್ಯ ಟೈ ಆದರೆ, 2 ಪಂದ್ಯ ರದ್ದಾಗಿತ್ತು.
5 / 13
3- ಸುರೇಶ್ ರೈನಾ: 2010-11 ರ ನಡುವೆ ಧೋನಿ ಅನುಪಸ್ಥಿತಿಯಲ್ಲಿ ರೈನಾ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಮೂರು ಪಂದ್ಯಗಳಲ್ಲೂ ಭಾರತ ಜಯ ಸಾಧಿಸಿತ್ತು.
6 / 13
4- ಅಜಿಂಕ್ಯ ರಹಾನೆ: 2015 ರಲ್ಲಿ ಅಜಿಂಕ್ಯ ರಹಾನೆ 2 ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು.
7 / 13
5- ವಿರಾಟ್ ಕೊಹ್ಲಿ: 2017 ರಿಂದ 2021ರವರೆಗೆ 50 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಈ ವೇಳೆ ಭಾರತ ತಂಡವು 30 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು 16 ಪಂದ್ಯಗಳಲ್ಲಿ ಸೋತರೆ, 2 ಪಂದ್ಯ ಟೈ ಹಾಗೂ 2 ಪಂದ್ಯ ರದ್ದಾಗಿತ್ತು.
8 / 13
6- ರೋಹಿತ್ ಶರ್ಮಾ: ಟೀಮ್ ಇಂಡಿಯಾವನ್ನು 51 ಪಂದ್ಯಗಳಲ್ಲಿ ಮುನ್ನಡೆಸಿರುವ ರೋಹಿತ್ ಶರ್ಮಾ 39 ಗೆಲುವು ತಂದುಕೊಟ್ಟಿದ್ದಾರೆ. ಇದೇ ವೇಳೆ ಸೋತಿರುವುದು ಕೇವಲ 12 ಪಂದ್ಯಗಳಲ್ಲಿ ಮಾತ್ರ.
9 / 13
7- ಶಿಖರ್ ಧವನ್: ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ 3 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಸೋತರೆ, 1 ಪಂದ್ಯದಲ್ಲಿ ಜಯ ಸಾಧಿಸಿತ್ತು.
10 / 13
8- ರಿಷಭ್ ಪಂತ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 5 ಪಂದ್ಯಗಳಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದರು. ಈ ವೇಳೆ 2 ಜಯ ಸಾಧಿಸಿದರೆ, ಮತ್ತೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋತಿತ್ತು. ಇನ್ನು ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
11 / 13
9- ಕೆಎಲ್ ರಾಹುಲ್: ಏಕೈಕ ಟಿ20 ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು.
12 / 13
10- ಹಾರ್ದಿಕ್ ಪಾಂಡ್ಯ: ಪ್ರಸ್ತುತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇದುವರೆಗೆ 16 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ ವೇಳೆ ಭಾರತ ಗೆದ್ದಿರುವುದು 10 ಪಂದ್ಯಗಳಲ್ಲಿ ಮಾತ್ರ. ಇನ್ನು 5 ಪಂದ್ಯಗಳಲ್ಲಿ ಸೋತರೆ, 1 ಪಂದ್ಯವು ಟೈ ಆಗಿದೆ.
13 / 13
11- ಜಸ್ಪ್ರೀತ್ ಬುಮ್ರಾ: ಇದೀಗ ಟೀಮ್ ಇಂಡಿಯಾದ 11ನೇ ಟಿ20 ನಾಯಕನಾಗಿ ಕಣಕ್ಕಿಳಿಯಲು ಜಸ್ಪ್ರೀತ್ ಬುಮ್ರಾ ಸಜ್ಜಾಗಿದ್ದಾರೆ. ಆಗಸ್ಟ್ 18 ರಂದು ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಭಾರತ ಟಿ20 ತಂಡದ ನಾಯಕರಾಗಿ ಬುಮ್ರಾ ಪಾದಾರ್ಪಣೆ ಮಾಡಲಿದ್ದಾರೆ.