IND vs NZ: ಇಂದೋರ್ ಕದನ ಗೆದ್ದರೆ ನಂ.1 ಪಟ್ಟಕ್ಕೇರಲಿದೆ ಟೀಂ ಇಂಡಿಯಾ..!

| Updated By: ಪೃಥ್ವಿಶಂಕರ

Updated on: Jan 23, 2023 | 11:27 AM

IND vs NZ: ಇಂದೋರ್‌ನಲ್ಲಿ ಭಾರತ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರೆ, ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲಿದೆ.

1 / 5
ಹೈದರಾಬಾದ್ ಮತ್ತು ರಾಯ್​ಪುರದಲ್ಲಿ ಕಿವೀಸ್ ಕಿವಿ ಹಿಂಡಿದ ಟೀಂ ಇಂಡಿಯಾ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು. ಈಗ ಇಂದೋರ್ ಸರದಿ ಬಂದಿದ್ದು, ಜನವರಿ 24ರ ಮಂಗಳವಾರದಂದು ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾಗೆ ಎರಡು ವಿಶೇಷ ದಾಖಲೆ ಬರೆಯುವ ಅವಕಾಶವಿದೆ.

2 / 5
ಹೈದರಾಬಾದ್‌ನಲ್ಲಿ ರೋಚಕ ಗೆಲುವು ಸಾಧಿಸಿದ ನಂತರ ರಾಯ್‌ಪುರದಲ್ಲಿ ಏಕಪಕ್ಷೀಯವಾಗಿ ಕಿವೀಸ್ ತಂಡವನ್ನು ಮಣಿಸಿದ್ದ ಟೀಂ ಇಂಡಿಯಾ ಸರಣಿಯನ್ನು ಗೆದ್ದುಕೊಂಡಿತು. ಇದೀಗ ಇಂದೋರ್‌ನಲ್ಲಿ ಟೀಂ ಇಂಡಿಯಾಗೆ ಸರಣಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಸಿಕ್ಕಿದೆ.

3 / 5
ಅಷ್ಟೇ ಅಲ್ಲ, ಇಂದೋರ್‌ನಲ್ಲಿ ಭಾರತ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರೆ, ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಲಿದೆ.

4 / 5
ರಾಯ್‌ಪುರದಲ್ಲಿ ನಡೆದ ಎರಡನೇ ಪಂದ್ಯದ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡವನ್ನು ಮೊದಲ ಸ್ಥಾನದಿಂದ 2ನೇ ಸ್ಥಾನಕ್ಕೆ ತಳ್ಳಿರುವ ಟೀಂ ಇಂಡಿಯಾ ಸದ್ಯ ಮೂರನೇ ಸ್ಥಾನದಲ್ಲಿದೆ. ಆದರೆ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಭಾರತ ಒಂದೇ ರೇಟಿಂಗ್ (113) ಪಾಯಿಂಟ್ ಹೊಂದಿರುವುದರಿಂದ 3ನೇ ಏಕದಿನ ಪಂದ್ಯವನ್ನು ಗೆದ್ದರೆ ತನ್ನ ರೇಟಿಂಗ್ ಪಾಯಿಂಟ್ಸ್ ಹೆಚ್ಚಿಸಿಕೊಳ್ಳುವುದರೊಂದಿಗೆ ನಂ.1 ಸ್ಥಾನವನ್ನು ಅಲಂಕರಿಸಲಿದೆ.

5 / 5
ಅಂದಹಾಗೆ, ಇಂದೋರ್‌ನಲ್ಲಿ ಟೀಂ ಇಂಡಿಯಾ ಇನ್ನೂ ಒಂದು ವಿಶೇಷ ದಾಖಲೆ ಮಾಡುವ ಅವಕಾಶ ಹೊಂದಿದೆ. ಅದೆನೆಂದರೆ, ಇದುವರೆಗೆ ಹೋಳ್ಕರ್ ಸ್ಟೇಡಿಯಂನಲ್ಲಿ 5 ಏಕದಿನ ಪಂದ್ಯಗಳು ನಡೆದಿದ್ದು, ಈ ಐದು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯ ಸಾಧಿಸಿದೆ. ಈಗ ನಡೆಯುವ 6ನೇ ಏಕದಿನ ಪಂದ್ಯದಲ್ಲೂ ಗೆಲುವ ಸಾಧಿಸಿದರೆ, ಈ ಮೈದಾನದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದ ದಾಖಲೆಯನ್ನು ಟೀಂ ಇಂಡಿಯಾ ಬರೆಯಲಿದೆ.