68 ವರ್ಷಗಳಲ್ಲಿ 2 ಗೆಲುವು: 18 ದಿವಸದಲ್ಲಿ ಸರಣಿ ಗೆಲುವು

|

Updated on: Nov 03, 2024 | 3:55 PM

India vs New Zealand: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿ ಮುಕ್ತಾಯಗೊಂಡಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಕಿವೀಸ್ ಪಡೆ 8 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 113 ರನ್​ಗಳ ಗೆಲುವು ದಾಖಲಿಸಿದ್ದ ನ್ಯೂಝಿಲೆಂಡ್, 3ನೇ ಪಂದ್ಯದಲ್ಲಿ 25 ರನ್​ಗಳ ಜಯ ಸಾಧಿಸಿದೆ.

1 / 5
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿ ಶುರುವಾಗಿ 69 ವರ್ಷಗಳಾಗಿವೆ. ಆದರೆ ಕಳೆದ 68 ವರ್ಷಗಳಲ್ಲಿ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಗೆದ್ದಿದ್ದು ಕೇವಲ 2 ಪಂದ್ಯಗಳನ್ನು ಮಾತ್ರ ಎಂದರೆ ನಂಬಲೇಬೇಕು. ಆದರೆ ಈ ಬಾರಿ ಹಳೆಯ ಲೆಕ್ಕಾಚಾರಗಳನ್ನೆಲ್ಲಾ ಬುಡಮೇಲು ಮಾಡುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ.

2 / 5
ಭಾರತದಲ್ಲಿ ನ್ಯೂಝಿಲೆಂಡ್ ತಂಡವು ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದಿದ್ದು 1969 ರಲ್ಲಿ. ನಾಗ್ಪುರದಲ್ಲಿ ನಡೆದ ಈ ಟೆಸ್ಟ್​ ಪಂದ್ಯವನ್ನು ನ್ಯೂಝಿಲೆಂಡ್ 167 ರನ್​ಗಳಿಂದ ಗೆದ್ದುಕೊಂಡಿತ್ತು. ಆ ಬಳಿಕ ಗೆದ್ದಿದ್ದು 1988 ರಲ್ಲಿ 2ನೇ ಗೆಲುವು ದಾಖಲಿಸಿತ್ತು. ಇದಾದ ನಂತರ ನ್ಯೂಝಿಲೆಂಡ್ ತಂಡಕ್ಕೆ ಭಾರತದಲ್ಲಿ ಒಂದೇ ಒಂದು ಗೆಲುವು ದಕ್ಕಿರಲಿಲ್ಲ.

3 / 5
ಅಂದರೆ 1955 ರಿಂದ 2023 ರವರೆಗೆ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಗೆದ್ದಿದ್ದು ಕೇವಲ 2 ಟೆಸ್ಟ್ ಪಂದ್ಯಗಳನ್ನು ಮಾತ್ರ. ಆದರೆ ಈ ಬಾರಿ ರಣ ಉತ್ಸಾಹದಲ್ಲಿ ಕಾಣಿಸಿಕೊಂಡಿದ್ದ ಕಿವೀಸ್ ಪಡೆ ಟೀಮ್ ಇಂಡಿಯಾದ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ.

4 / 5
ಅಕ್ಟೋಬರ್ 16 ರಿಂದ ಶುರುವಾದ ಮೂರು ಪಂದ್ಯಗಳ ಸರಣಿಯನ್ನು ನ್ಯೂಝಿಲೆಂಡ್ ತಂಡವು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ಸಾಧನೆ ಮೆರೆದಿದೆ. ಅಲ್ಲದೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ತವರಿನಲ್ಲಿ 3-0 ಅಂತರದಿಂದ ಸೋಲಿಸಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಕೂಡ ನ್ಯೂಝಿಲೆಂಡ್ ತನ್ನದಾಗಿಸಿಕೊಂಡಿದೆ.

5 / 5
ಅಂದರೆ 1955 ರಿಂದ 2023 ರವರೆಗೆ ಕೇವಲ 2 ಪಂದ್ಯಗಳನ್ನು ಗೆದ್ದಿದ್ದ ನ್ಯೂಝಿಲೆಂಡ್ ತಂಡವು, ಕೇವಲ 18 ದಿನಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಟೀಮ್ ಇಂಡಿಯಾ ವಿರುದ್ಧ ಭಾರತದಲ್ಲಿ ಪಾರುಪತ್ಯ ಮೆರೆದಿದೆ. ಈ ಮೂಲಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ 68 ವರ್ಷಗಳ ಹಳೆಯ ಕನಸನ್ನು ಸಹ ಈಡೇರಿಸಿಕೊಂಡಿದೆ. ಅದು ಕೂಡ ಕ್ಲೀನ್ ಸ್ವೀಪ್ ಸರಣಿ ಜಯದೊಂದಿಗೆ ಎಂಬುದು ವಿಶೇಷ.