
ಭಾರತ-ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿತು. ಅದರಂತೆ ರಿಷಭ್ ಪಂತ್ ಬದಲಿಗೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದರು.

ಇದರ ಬೆನ್ನಲ್ಲೇ ಪಂತ್ ಬದಲು ಕಾರ್ತಿಕ್ ಆಯ್ಕೆಯು ಚರ್ಚೆಗೀಡಾಗಿದೆ. ಆದರೆ ಟೀಮ್ ಇಂಡಿಯಾ ಮಾನ್ಯೇಜ್ಮೆಂಟ್ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿ ಪ್ಲೇಯಿಂಗ್ ಇಲೆವೆನ್ ರೂಪಿಸಿರುವುದು ಸ್ಪಷ್ಟ. ಏಕೆಂದರೆ...

ಟಿ20 ಕ್ರಿಕೆಟ್ನಲ್ಲಿ ರಿಷಭ್ ಪಂತ್ ಉತ್ತಮ ಫಾರ್ಮ್ನಲ್ಲಿಲ್ಲ. ಕೊನೆಯ 6 ಟಿ20 ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಕೂಡ ಬಾರಿಸಿಲ್ಲ.

ಮತ್ತೊಂದೆಡೆ, ದಿನೇಶ್ ಕಾರ್ತಿಕ್ ಅವರು IPL-2022 ರ ಬಳಿಕ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಡೆತ್ ಓವರ್ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನುಭವಕ್ಕೆ ಮಣೆಹಾಕಿದೆ.

ಇನ್ನು ಮಹತ್ವದ ಪಂದ್ಯಗಳಲ್ಲಿ ಎಚ್ಚರಿಕೆಯ ಆಟವಾಡಬೇಕಾಗುತ್ತದೆ. ಆದರೆ ರಿಷಭ್ ಪಂತ್ ಅವರ ಆಟದ ಬಗ್ಗೆ ಅವರಿಗೆ ಪ್ರಬುದ್ಧತೆಯ ಕೊರತೆಯಿದೆ ಎಂಬ ಟೀಕೆಗಳು ನಿರಂತರ ಕೇಳಿ ಬರುತ್ತಿರುತ್ತದೆ.

ಮತ್ತೊಂದೆಡೆ ದಿನೇಶ್ ಕಾರ್ತಿಕ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹಾಗೆಯೇ ವಿಕೆಟ್ ಹಿಂದೆ ಕೂಡ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಹೈವೋಲ್ಟೇಜ್ ಪಂದ್ಯದಲ್ಲಿ ರಿಷಭ್ ಪಂತ್ ಬದಲಿಗೆ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ರಿಷಭ್ ಪಂತ್ ಅವರನ್ನು ಹೊರಗಿಡುವ ಮೂಲಕ ಟೀಮ್ ಇಂಡಿಯಾ ಮೂವರು ವೇಗಿಗಳನ್ನು ಕಣಕ್ಕಿಳಿಸಿದೆ. ಒಂದು ವೇಳೆ ಪಂತ್ ಆಡಿದ್ದರೆ ಟೀಮ್ ಇಂಡಿಯಾ ಇಬ್ಬರು ವೇಗಿಗಳು, ಓರ್ವ ಸ್ಪಿನ್ನರ್ ಹಾಗೂ ಇಬ್ಬರು ಆಲ್ರೌಂಡರ್ಗಳೊಂದಿಗೆ ಕಣಕ್ಕಿಳಿಯಬೇಕಿತ್ತು. ಇದರಿಂದ ಕೇವಲ 5 ಬೌಲರ್ಗಳನ್ನು ಮಾತ್ರ ಬಳಸಿಕೊಳ್ಳುವ ಅವಕಾಶವಿರುತ್ತಿತ್ತು. ಹೀಗಾಗಿ ಪಂತ್ ಅವರನ್ನು ಕೈ ಬಿಡುವ ಮೂಲಕ ಟೀಮ್ ಇಂಡಿಯಾ 6 ಬೌಲರ್ಗಳನ್ನು ಬಳಸಿಕೊಂಡಿದೆ.