IND vs PAK: ಭಾರತ – ಪಾಕಿಸ್ತಾನ ಪಂದ್ಯದ ಕೆಲ ರೋಚಕ ಫೋಟೋಗಳು ಇಲ್ಲಿದೆ ನೋಡಿ

| Updated By: Vinay Bhat

Updated on: Sep 05, 2022 | 12:00 PM

ಏಷ್ಯಾಕಪ್ 2022ರ ಲೀಗ್ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಸೂಪರ್ 4ಗೆ ಲಗ್ಗೆಯಿಟ್ಟಿದ್ದ ಭಾರತಕ್ಕೆ ಮೊದಲ ಮ್ಯಾಚ್​ ನಲ್ಲೇ ಶಾಕ್ ಆಗಿದೆ. ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಕೆಲ ತಪ್ಪುಗಳನ್ನು ಎಸಗಿ ಅಂತಿಮ ಹಂತದಲ್ಲಿ ಸೋಲು ಕಾಣಬೇಕಾಯಿತು.

1 / 7

2 / 7
ಪಾಕ್ ಪರ ವಿರಾಟ್ ಕೊಹ್ಲಿ ಮಾತ್ರ ಕೊನೆಯ ವರೆಗೂ ನಿಂತು ತಂಡದ ಮೊತ್ತ ಹೆಚ್ಚಿಸಲು ನೆರವಾದರು. ರೋಹಿತ್–ರಾಹುಲ್ ನಿರ್ಗಮನದ ಬಳಿಕ ಕುಸಿತ ಕಂಡ ಭಾರತಕ್ಕೆ ಕೊಹ್ಲಿ ಬೆನ್ನೆಲುಬಾಗಿ ನಿಂತರು. 44 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸರ್ ಬಾರಿಸಿ 60 ರನ್​ ಗಳ ಕೊಡುಗೆ ನೀಡಿದರು.

3 / 7
ಈ ಸೋಲಿನ ಮೂಲಕ ಇದೀಗ ರೋಹಿತ್ ಪಡೆಯ ಫೈನಲ್ ಹಾದಿ ಕಠಿಣವಾಗಿದ್ದು, ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲ ಬೇಕಾದ ಒತ್ತಡದಲ್ಲಿದೆ.

4 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​​ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತು.

5 / 7
ರೋಹಿತ್ ಹಾಗೂ ಕೆಎಲ್ ರಾಹುಲ್ ತಲಾ 28 ರನ್ ​​​ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಉರುಳುತ್ತಿದ್ದರೆ ಅತ್ತ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಾಕಿಸ್ತಾನದ ಪರ ಶದಾಬ್ ಖಾನ್ 2 ವಿಕೆಟ್ ಪಡೆದರೆ, ನಸೀಮ್ ಶಾ, ಮೊಹಮ್ಮದ್, ಹ್ಯಾರಿಸ್ ರೌಫ್ ಹಾಗೂ ನವಾಜ್ ತಲಾ 1 ವಿಕೆಟ್ ಕಿತ್ತರು.

6 / 7
ಪಾಕಿಸ್ತಾನ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮೊಹಮ್ಮದ್ ರಿಜ್ವಾನ್ (71 ರನ್, 51 ಎಸೆತ, 6 ಬೌಂಡರಿ,2 ಸಿಕ್ಸರ್) ಹಾಗೂ ಮೊಹಮ್ಮದ್ ನವಾಜ್ (42 ರನ್, 20 ಎಸೆತ) 3ನೇ ವಿಕೆಟಿಗೆ 73 ರನ್ ಜೊತೆಯಾಟ ನಡೆಸಿ ಗೆಲುವಿಗೆ ಕಾರಣರಾದರು.

7 / 7
ಭಾರತದ ಪರ ಭುವನೇಶ್ವರ್, ರವಿ ಬಿಷ್ಣೋಯಿ, ಹಾರ್ದಿಕ್ ಪಾಂಡ್ಯ ಹಾಗೂ ಯುಜ್ವೇಂದ್ರ ಚಹಲ್ ತಲಾ 1 ವಿಕೆಟ್ ಪಡೆದರು.

Published On - 12:00 pm, Mon, 5 September 22