IND vs SA 1st T20I: ಬೌನ್ಸ್-ಸ್ವಿಂಗ್: ಭಾರತ-ಆಫ್ರಿಕಾ ಮೊದಲ T20I ನಡೆಯಲಿರುವ ಕಿಂಗ್ಸ್‌ಮೀಡ್ ಪಿಚ್ ಹೇಗಿದೆ?

|

Updated on: Dec 09, 2023 | 10:22 AM

India vs South Africa 1st T20I, Kingsmead Pitch Report: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ನಡೆಯಲಿರುವ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂ ಪಿಚ್‌ನಲ್ಲಿ ಸ್ವಲ್ಪ ಬೌನ್ಸ್ ಇರುತ್ತದೆ, ಆದರೆ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ನಿರೀಕ್ಷೆಯಿದೆ. ಔಟ್‌ಫೀಲ್ಡ್ ವೇಗವಾಗಿದ್ದು, ರನ್‌ಗಳು ಮಳೆಯಂತೆ ಸುರಿಯಲಿದೆ.

1 / 6
ಡಿಸೆಂಬರ್ 10 ರ ಭಾನುವಾರದಂದು ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಮೂಲಕ ಇಂಡೋ-ಆಫ್ರಿಕಾ ನಡುವಣ ಸುದೀರ್ಘ ಸರಣಿಗೆ ಚಾಲನೆ ಸಿಗಲಿದೆ.

2 / 6
ಶುಭ್​ಮನ್ ಗಿಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ತಂಡಕ್ಕೆ ಮರಳಿದ ಕಾರಣ, ಮೆನ್ ಇನ್ ಬ್ಲೂ ಸಾಕಷ್ಟು ಬಲಿಷ್ಠವಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.

3 / 6
ದಕ್ಷಿಣ ಆಫ್ರಿಕಾದ ಪಿಚ್‌ಗಳು ಸಾಮಾನ್ಯವಾಗಿ ಬೌಲಿಂಗ್‌ಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿ ಹೆಚ್ಚು ಬೌನ್ಸ್ ಮತ್ತು ಸ್ವಿಂಗ್ ಇರುತ್ತದೆ, ಕಿಂಗ್ಸ್‌ಮೀಡ್ ಕ್ರಿಕೆಟ್ ಸ್ಟೇಡಿಯಂ ಕೂಡ ಅದೇ ಮಾದರಿಯಲ್ಲಿದೆ. ಪಿಚ್‌ನಲ್ಲಿ ಸ್ವಲ್ಪ ಬೌನ್ಸ್ ಇರುತ್ತದೆ, ಆದರೆ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ನಿರೀಕ್ಷೆಯಿದೆ.

4 / 6
ಔಟ್‌ಫೀಲ್ಡ್ ವೇಗವಾಗಿದ್ದು, ರನ್‌ಗಳು ಮಳೆಯಂತೆ ಸುರಿಯಲಿದೆ. ಒಟ್ಟಾರೆಯಾಗಿ, ಕಿಂಗ್ಸ್‌ಮೀಡ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಹೈ-ಸ್ಕೋರ್ ಗೇಮ್ ಆಗಲಿದೆ. ಟಾಸ್ ಗೆದ್ದ ತಂಡವು ಚೇಸಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತ. ಆದರೂ ದಾಖಲೆಯು ಸ್ವಲ್ಪಮಟ್ಟಿಗೆ ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲಕರವಾಗಿದೆ.

5 / 6
ಕಿಂಗ್ಸ್‌ಮೀಡ್‌ನಲ್ಲಿ ನಡೆದ 18 T20I ಪಂದ್ಯಗಳಲ್ಲಿ, ಗುರಿಯನ್ನು ಬೆನ್ನಟ್ಟಿದ ತಂಡಗಳು 8 ಬಾರಿ ಗೆದ್ದಿದ್ದರೆ, ಮೊದಲು ಬ್ಯಾಟ್ ಮಾಡಿದ ತಂಡಗಳು 9 ಬಾರಿ ವಿಜಯಶಾಲಿಯಾಗಿ ಹೊರಹೊಮ್ಮಿವೆ. ಈ ಸ್ಥಳದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 143 ಆಗಿದೆ.

6 / 6
ದಿ ಮೆನ್ ಇನ್ ಬ್ಲೂ ಡರ್ಬನ್ ಸ್ಥಳದಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಕಿಂಗ್ಸ್‌ಮೀಡ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ, ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಒಂದು ಪಂದ್ಯವು ರೋಚಕ ಟೈನಲ್ಲಿ ಕೊನೆಗೊಂಡಿತು. ಉಳಿದ ಪಂದ್ಯವನ್ನು ಮಳೆಯಿಂದಾಗಿ ರದ್ದಾಗಿದೆ.

Published On - 10:22 am, Sat, 9 December 23