Updated on: Mar 07, 2022 | 5:20 PM
ಮೊಹಾಲಿ ಟೆಸ್ಟ್, ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಮೊದಲ ಟೆಸ್ಟ್. ಇದರಲ್ಲಿ ರೋಹಿತ್ ತಮ್ಮ ಯಶಸ್ಸಿನ ಅದ್ಭುತ ಸ್ಕ್ರಿಪ್ಟ್ ಅನ್ನು ಬರೆದಿದ್ದಾರೆ. ಈ ದಾಖಲೆಯ ಮೂಲಕ 8 ನಾಯಕರನ್ನು ಹಿಂದಿಕ್ಕಿದ್ದಾರೆ. ನಾಯಕತ್ವದ ಮೊದಲ ಟೆಸ್ಟ್‌ನಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿ ರೋಹಿತ್ ಈ ಯಶಸ್ಸನ್ನು ಸಾಧಿಸಿದ್ದಾರೆ.
ಇದುವರೆಗೆ ತಮ್ಮ ಮೊದಲ ಪಂದ್ಯದಲ್ಲೇ ಅತಿ ದೊಡ್ಡ ಗೆಲುವು ದಾಖಲಿಸಿದ 10 ಟೆಸ್ಟ್ ನಾಯಕರ ಪೈಕಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನೂತನ ಟೆಸ್ಟ್ ನಾಯಕ ಮೊಹಾಲಿಯಲ್ಲಿ ಕೇವಲ 3 ದಿನಗಳಲ್ಲಿ ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಸೋಲಿಸುವ ಮೂಲಕ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ನಾಯಕತ್ವದ ಚೊಚ್ಚಲ ಟೆಸ್ಟ್‌ನಲ್ಲಿ ಅತಿ ದೊಡ್ಡ ಗೆಲುವಿನ ಭಾರತೀಯ ದಾಖಲೆಯು ಪಾಲಿ ಉಮ್ರಿಗರ್ ಹೆಸರಿನಲ್ಲಿತ್ತು.