IND Vs WI: 5 ಎಸೆತದಲ್ಲಿ 5 ಸಿಕ್ಸರ್ ಸಿಡಿಸಿದ್ದ ರಿಂಕು ಸಿಂಗ್‌ಗೆ ಟಿ20 ತಂಡದಲ್ಲಿಲ್ಲ ಸ್ಥಾನ..!

|

Updated on: Jul 06, 2023 | 7:32 AM

Rinku Singh: ಅದ್ಭುತ ಪ್ರದರ್ಶನದ ಹೊರತಾಗಿಯೂ ಇನ್ನೂ ಕೆಲವು ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದರಲ್ಲಿ ಒಂದು ಹೆಸರು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಸೂಪರ್ ಸ್ಟಾರ್ ರಿಂಕು ಸಿಂಗ್ ಅವರದ್ದು.

1 / 7
ಹೊಸದಾಗಿ ಆಯ್ಕೆಯಾದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಬಿಸಿಸಿಐ ಆಯ್ಕೆ ಮಾಡಿರುವ ತಂಡದಲ್ಲಿ ಈ ವರ್ಷದ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅನೇಕ ಯುವ ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

2 / 7
ಈ ಟಿ20 ಸರಣಿಗೆ ಆಯ್ಕೆ ಸಮಿತಿ ಹಿರಿಯ ಆಟಗಾರರನ್ನು ಬದಿಗೊತ್ತಿ, ಐಪಿಎಲ್ 16ನೇ ಸೀಸನ್​ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರರ ಮೇಲೆ ನಂಬಿಕೆಯನ್ನಿಟ್ಟು ಅವಕಾಶ ಕಲ್ಪಿಸಲಾಗಿದೆ. ಆದರೆ ಅದ್ಭುತ ಪ್ರದರ್ಶನದ ಹೊರತಾಗಿಯೂ ಇನ್ನೂ ಕೆಲವು ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಇದರಲ್ಲಿ ಒಂದು ಹೆಸರು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಸೂಪರ್ ಸ್ಟಾರ್ ರಿಂಕು ಸಿಂಗ್ ಅವರದ್ದು.

3 / 7
ಟಿ20 ಸರಣಿಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹಲವಾರು ಸ್ಪರ್ಧಿಗಳು ಇದ್ದರು. ಇದರಲ್ಲಿ ರಿಂಕು ಸಿಂಗ್ ಅವರ ಹೆಸರು ಅಗ್ರಸ್ಥಾನದಲ್ಲಿತ್ತು. ಆದರೂ ಅವರನ್ನು ಕಡೆಗಣಿಸಲಾಗಿದ್ದು, ರಿಂಕುಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದಲ್ಲದೇ ಮತ್ತೊಬ್ಬ ಯುವ ಆಟಗಾರ ಜಿತೇಶ್ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ.

4 / 7
ತಂಡ ಪ್ರಕಟವಾಗುವುದಕ್ಕೂ ಮುನ್ನ ರಿಂಕು ಆಯ್ಕೆ ಖಚಿತ ಎಂದು ಪರಿಗಣಿಸಲಾಗಿತ್ತು. ಆದರೆ ಬಿಸಿಸಿಐ ಅವಕಾಶ ನೀಡದ ಕಾರಣ ರಿಂಕು ಟೀಂ ಇಂಡಿಯಾದಲ್ಲಿ ಆಯ್ಕೆಯಾಗಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಇದೀಗ ರಿಂಕು ಅವರ ಅವಕಾಶಕ್ಕಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯವರೆಗೂ ಕಾಯಬೇಕಾಗಿದೆ. ಟೀಂ ಇಂಡಿಯಾ ಆಗಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ವೇಳೆ ರಿಂಕು ಸಿಂಗ್​ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

5 / 7
ಇನ್ನು ಈಗಷ್ಟೇ ಮುಕ್ತಾಯಗೊಂಡಿದ್ದ ಐಪಿಎಲ್ 16ನೇ ಸೀಸನ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ರಿಂಕು ಸಿಂಗ್ ಆಡಿದ 14 ಪಂದ್ಯಗಳಲ್ಲಿ 59.25 ಸರಾಸರಿ ಮತ್ತು 149.53 ಸ್ಟ್ರೈಕ್ ರೇಟ್‌ನಲ್ಲಿ 474 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್‌ನಲ್ಲಿ 4 ಅರ್ಧಶತಕಗಳನ್ನೊಳಗೊಂಡಂತೆ 31 ಬೌಂಡರಿ ಹಾಗೂ 29 ಸಿಕ್ಸರ್‌ಗಳು ಸೇರಿದ್ದವು. ಹೀಗಾಗಿ ಐಪಿಎಲ್​ನಲ್ಲಿ ಮಿಂಚಿದ್ದ ರಿಂಕುಗೆ ಅವಕಾಶ ಸಿಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಬಿಸಿಸಿಐ ರಿಂಕು ಅವರನ್ನು ಟಿ20 ಸರಣಿಯಿಂದ ಕೈಬಿಟ್ಟಿದೆ.

6 / 7
ಇನ್ನು ವೆಸ್ಟ್ ಇಂಡೀಸ್ ಪ್ರವಾಸದ ಬಗ್ಗೆ ಹೇಳುವುದಾದರೆ, ಉಭಯ ತಂಡಗಳು ಈ ಪ್ರವಾಸದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿವೆ. ಈ ಟೆಸ್ಟ್ ಮತ್ತು ಏಕದಿನ ಸರಣಿಗೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಇದೀಗ 12 ದಿನಗಳ ಬಳಿಕ ಟಿ20 ತಂಡವನ್ನು ಪ್ರಕಟಿಸಲಾಗಿದೆ.

7 / 7
ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.