IND vs WI: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ದಾಖಲೆ ಮುರಿದ ಸೂರ್ಯಕುಮಾರ್ ಯಾದವ್..!

|

Updated on: Aug 14, 2023 | 6:15 AM

Suryakumar Yadav: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯ ಸೋತ ಟೀಂ ಇಂಡಿಯಾ, ಟಿ20 ಸರಣಿಯನ್ನು ಕಳೆದುಕೊಂಡಿದೆ. ಭಾರತ ನೀಡಿದ 165 ರನ್​ಗಳ ಗುರಿಯನ್ನು ಕೆರಿಬಿಯನ್ನರು ಸುಲಭವಾಗಿ ಬೆನ್ನಟ್ಟಿದರು. ಆದರೆ ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಅರ್ಧಶತಕದ ಏಕಾಂಗಿ ಹೋರಾಟ ನಡೆಸಿದ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಪ್ರಮುಖ ದಾಖಲೆ ಮುರಿದರು.

1 / 8
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯ ಸೋತ ಟೀಂ ಇಂಡಿಯಾ, ಟಿ20 ಸರಣಿಯನ್ನು ಕಳೆದುಕೊಂಡಿದೆ. ಭಾರತ ನೀಡಿದ 165 ರನ್​ಗಳ ಗುರಿಯನ್ನು ಕೆರಿಬಿಯನ್ನರು ಸುಲಭವಾಗಿ ಬೆನ್ನಟ್ಟಿದರು. ಆದರೆ ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಅರ್ಧಶತಕದ ಏಕಾಂಗಿ ಹೋರಾಟ ನಡೆಸಿದ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ಹಲವು ದಾಖಲೆಗಳನ್ನು ಮುರಿದರು.

2 / 8
ಆಗಸ್ಟ್ 13 ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ 45 ಎಸೆತಗಳಲ್ಲಿ 61 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರೆಸಿದ್ದು ಇದರೊಂದಿಗೆ ಸಹ ಆಟಗಾರ ಕೆಎಲ್ ರಾಹುಲ್ ದಾಖಲೆಯನ್ನು ಮುರಿದರು.

3 / 8
ಟಿ20 ಮಾದರಿಯಲ್ಲಿ ಇದುವರೆಗೆ 53 ಪಂದ್ಯಗಳನ್ನಾಡಿರುವ ಸೂರ್ಯ, ಇದರಲ್ಲಿ 50 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಮಾಡಿ 1841 ರನ್‌ ಕಲೆಹಾಕಿದ್ದಾರೆ. ಈ ಮೂಲಕ 50 ಟಿ20 ಇನ್ನಿಂಗ್ಸ್‌ಗಳ ನಂತರ ಅತಿ ಹೆಚ್ಚು ರನ್ ಕಲೆಹಾಕಿದ್ದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 8
ಈ ಮೊದಲು ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ತಮ್ಮ ಮೊದಲ 50 ಟಿ20 ಇನ್ನಿಂಗ್ಸ್‌ನಲ್ಲಿ 1751 ರನ್ ಕಲೆಹಾಕಿ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಈ ದಾಖಲೆಯನ್ನು ಸೂರ್ಯಕುಮಾರ್ ಮುರಿದಿದ್ದಾರೆ.

5 / 8
ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊದಲ 50 ಟಿ20 ಇನ್ನಿಂಗ್ಸ್‌ಗಳಲ್ಲಿ 1943 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

6 / 8
ಪ್ರಸ್ತುತ ಸೂರ್ಯಕುಮಾರ್ ಯಾದವ್ 1841 ರನ್​ಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, 1751 ರನ್ ಕಲೆಹಾಕಿರುವ ಕೆಎಲ್ ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ.

7 / 8
ಹಾಗೆಯೇ ಟೀಂ ಇಂಡಿಯಾದಿಂದ ಬಹಳ ದಿನಗಳಿಂದ ದೂರವಿರುವ ಮತ್ತೊಬ್ಬ ಆರಂಭಿಕ ಆಟಗಾರ ಶಿಖರ್ ಧವನ್ 1311 ರನ್ ಕಲೆ ಹಾಕಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

8 / 8
ಐದನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಮೊದಲ 50 ಟಿ20 ಪಂದ್ಯಗಳಲ್ಲಿ 1219 ರನ್ ಕಲೆಹಾಕಿದ್ದಾರೆ.