IND vs WI: 200ರ ಗಡಿ ದಾಟಿಲ್ಲ, ಏಕೈಕ ಗೆಲುವು! ಬಾರ್ಬಡೋಸ್‌ ಮೈದಾನದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ?

|

Updated on: Jul 27, 2023 | 8:50 AM

IND vs WI: ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲ್ಲಿವೆ. ಈ ಮೈದಾನದಲ್ಲಿ 2002 ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ, ಆ ಬಳಿಕ ಇಲ್ಲಿ ವೈಟ್ ಬಾಲ್ ಸರಣಿಯನ್ನು ಆಡಿಲ್ಲ.

1 / 6
ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿದ ಟೀಂ ಇಂಡಿಯಾ ಜುಲೈ 27 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಏಕದಿನ ವಿಶ್ವಕಪ್​ಗೆ ಮೂರು ತಿಂಗಳಿಗೂ ಕಡಿಮೆ ಸಮಯವಿರುವುದರಿಂದ ಟೀಂ ಇಂಡಿಯಾಕ್ಕೆ ಸಿದ್ಧತೆ ನಡೆಸಿಕೊಳ್ಳಲು ಈ ಸರಣಿ ಬಹಳ ಮುಖ್ಯವಾಗಿದೆ.

2 / 6
ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲ್ಲಿವೆ. ಈ ಮೈದಾನದಲ್ಲಿ 2002 ರಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ, ಆ ಬಳಿಕ ಇಲ್ಲಿ ವೈಟ್ ಬಾಲ್ ಸರಣಿಯನ್ನು ಆಡಿಲ್ಲ.

3 / 6
ಈ ಮೈದಾನದಲ್ಲಿ ಭಾರತದ ದಾಖಲೆಯ ಬಗ್ಗೆ ಹೇಳುವುದಾದರೆ, ತಂಡವು ಮೂರು ಏಕದಿನ ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. 2002 ರಲ್ಲಿ ಇಲ್ಲಿ ಆಡಿದ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸೌರವ್ ಗಂಗೂಲಿ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು.

4 / 6
ಆ ಪಂದ್ಯದಲ್ಲಿ ಕಾರ್ಲ್ ಹೂಪರ್ ನೇತೃತ್ವದ ಆತಿಥೇಯರು ಕೇವಲ 186 ರನ್‌ಗಳಿಗೆ ಆಲೌಟ್ ಆದರೆ, ಇದಕ್ಕೆ ಉತ್ತರವಾಗಿ ಭಾರತ 44ನೇ ಓವರ್‌ನಲ್ಲಿ ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು. ನಾಯಕ ಗಂಗೂಲಿ 41 ರನ್ ಕಲೆಹಾಕಿದರೆ, ದಿನೇಶ್ ಮೊಂಗಿಯಾ 104 ಎಸೆತಗಳಲ್ಲಿ 74 ರನ್ ಬಾರಿಸಿದ್ದರು.

5 / 6
ಕುತೂಹಲಕಾರಿ ವಿಚಾರವೆಂದರೆ ಈ ಮೈದಾನದಲ್ಲಿ ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ಇನ್ನು 200 ರನ್‌ಗಳ ಗಡಿಯನ್ನು ದಾಟಿಲ್ಲ. 1989 ರಲ್ಲಿ 249 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 198 ರನ್ ಬಾರಿಸಲಷ್ಟೇ ಶಕ್ತವಾಗಿತ್ತು. ಬಳಿಕ 1997 ರಲ್ಲಿ ನಡೆದ ಪಂದ್ಯದಲ್ಲಿ ಕೇವಲ 199 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ನಂತರ 2002 ರಲ್ಲಿ ನಡೆದ ಪಂದ್ಯದಲ್ಲಿ 187 ರನ್‌ಗಳನ್ನು ಬೆನ್ನಟ್ಟಿತು.

6 / 6
ಇನ್ನು ಈ ಮೈದಾನದಲ್ಲಿ ಇದುವರೆಗೆ 49 ಏಕದಿನ ಪಂದ್ಯಗಳು ನಡೆದಿದ್ದು, 2019 ರಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 361 ರನ್​ಗಳ ಟಾರ್ಗೆಟ್ ಅನ್ನು ಇಂಗ್ಲೆಂಡ್ ಆರಾಮವಾಗಿ ಬೆನ್ನಟ್ಟಿತು. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ನಾವು ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಎನ್‌ಕೌಂಟರ್‌ಗೆ ಸಾಕ್ಷಿಯಾಗಬಹುದು. ಹಾಗೆಯೇ ಬಾರ್ಬಡೋಸ್‌ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ 200 ರನ್‌ಗಳ ಗಡಿ ದಾಟುತ್ತದೆ ಎಂದು ನಿರೀಕ್ಷಿಸಬಹುದು.