ICC rankings: ಪಾತಾಳಕ್ಕಿಳಿದ ಪಾಕ್; ಎರಡು ಮಾದರಿಗಳಲ್ಲಿ ಭಾರತವೇ ನಂ.1..!
ICC rankings: ಐಸಿಸಿ ಇಂದು ಮೂರು ಮಾದರಿಯ ಕ್ರಿಕೆಟ್ನ ವಾರ್ಷಿಕ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಬಿಡುಗಡೆಯಾಗಿರುವ ಈ ರ್ಯಾಂಕಿಂಗ್ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಏಕದಿನ ಹಾಗೂ ಟಿ20 ಮಾದರಿಯಲ್ಲಿ ತನ್ನ ಪಾರುಪತ್ಯವನ್ನು ಮುಂದವರೆಸಿದ್ದರೆ, ಟೆಸ್ಟ್ ಮಾದರಿಯಲ್ಲಿ ಮಾತ್ರ 1 ಸ್ಥಾನ ಕುಸಿದಿದ್ದು, 2ನೇ ಸ್ಥಾನಕ್ಕೆ ಜಾರಿದೆ.
1 / 6
ಐಸಿಸಿ ಇಂದು ಮೂರು ಮಾದರಿಯ ಕ್ರಿಕೆಟ್ನ ವಾರ್ಷಿಕ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಅದರಂತೆ ಪ್ರಕಟವಾಗಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬಂದಿವೆ. ಟೀಂ ಇಂಡಿಯಾ 2 ಮಾದರಿಗಳಲ್ಲಿ ನಂಬರ್ 1 ಸ್ಥಾನದಲ್ಲಿದ್ದರೆ, 1ಮಾದರಿಯಲ್ಲಿ ಮಾತ್ರ ತನ್ನ ಅಗ್ರಸ್ಥಾನದಿಂದ ಕೆಳಗಿಳಿದಿದೆ.
2 / 6
ಮೊದಲಿಗೆ ಟಿ20 ತಂಡಗಳ ರ್ಯಾಂಕಿಂಗ್ ಪಟ್ಟಿಯನ್ನು ನೋಡುವುದಾದರೆ.. ಈ ಮಾದರಿಯಲ್ಲಿ ಎಂದಿನಂತೆ ಟೀಂ ಇಂಡಿಯಾ 264 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತವು ಈ ಹಿಂದೆಯೂ ಮೊದಲ ಸ್ಥಾನದಲ್ಲಿತ್ತು. ಇದೀಗ ವಾರ್ಷಿಕ ರ್ಯಾಂಕಿಂಗ್ ಪಟ್ಟಿಯಲ್ಲೂ ಅದೇ ಸ್ಥಾನದಲ್ಲಿ ಮುಂದುವರೆಸಿದೆ.
3 / 6
ಇಷ್ಟು ದಿನ ಎರಡನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ 1 ಸ್ಥಾನ ಕುಸಿತ ಕಂಡಿದ್ದು, ಮೂರನೇ ಸ್ಥಾನಕ್ಕೆ ಜಾರಿದ್ದರೆ, ಒಂದು ಸ್ಥಾನ ಮೇಲೇರಿರುವ ಆಸ್ಟ್ರೇಲಿಯಾ ಇದೀಗ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಆಸ್ಟ್ರೇಲಿಯಾ 257 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ಇಂಗ್ಲೆಂಡ್ ಬಳಿ 252 ರೇಟಿಂಗ್ ಪಾಯಿಂಟ್ಗಳಿವೆ.
4 / 6
ದಕ್ಷಿಣ ಆಫ್ರಿಕಾ ಎರಡು ಸ್ಥಾನ ಕುಸಿದಿದ್ದು 250 ರೇಟಿಂಗ್‌ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಾರಿದೆ. ನ್ಯೂಜಿಲೆಂಡ್ ಒಂದು ಸ್ಥಾನ ಕಳೆದುಕೊಂಡಿದ್ದು, 250 ರೇಟಿಂಗ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ 249 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದೆ.
5 / 6
ಸಾಕಷ್ಟು ನಷ್ಟ ಅನುಭವಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಎರಡು ಸ್ಥಾನ ಕೆಳಗಿಳಿದ್ದು, 247 ರೇಟಿಂಗ್‌ನೊಂದಿಗೆ ತಂಡ ಏಳನೇ ಸ್ಥಾನದಲ್ಲಿದೆ. ಉಳಿದಂತೆ ಶ್ರೀಲಂಕಾ ತಂಡ 232 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಒಂಬತ್ತನೇ, ಅಫ್ಘಾನಿಸ್ತಾನ ಹತ್ತನೇ ಸ್ಥಾನದಲ್ಲಿದೆ.
6 / 6
ಇನ್ನು ಏಕದಿನ ಮಾದರಿಯಲ್ಲೂ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ 122 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದರೆ, ಆಸ್ಟ್ರೇಲಿಯಾ 116 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.