IND vs AUS 2nd Test: ರೋಹಿತ್- ರಾಹುಲ್ ಮೇಲೆ ದೊಡ್ಡ ಜವಾಬ್ದಾರಿ: ಕುತೂಹಲ ಕೆರಳಿಸಿದ ದ್ವಿತೀಯ ದಿನದಾಟ
India vs Australia 2nd Test: ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇನು ಪಡೆದಿದೆ. ಮೊದಲ ದಿಣದಾಟದ ಅಂತ್ಯಕ್ಕೆ 9 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ 13 ಹಾಗೂ ಕೆಎಲ್ ರಾಹುಲ್ 4 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
1 / 8
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಮೊದಲ ದಿನವೇ ರೋಚಕತೆಯಿಂದ ಕೂಡಿತ್ತು. ಮೊದಲ ಪಂದ್ಯದಂತೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ದಿನದಾಟ ಮುಗಿಯುವ ಮುನ್ನ ಆಲೌಟ್ ಆಯಿತು.
2 / 8
ಡೇವಿಡ್ ವಾರ್ನರ್ 15 ರನ್ ಗಳಿಸಿ ಪುನಃ ಶಮಿ ದಾಳಿಗೆ ಪೆವಿಲಿಯನ್ ಸೇರಿದರೆ ಮಾರ್ನಸ್ ಲಾಬುಶೇನ್ಗೆ (18) ಅಶ್ವಿನ್ ಕಂಟಕವಾದರು. ಅನುಭವವಿ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಸೊನ್ನೆ ಸುತ್ತಿದ್ದು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು. ಟ್ರಾವಿಸ್ ಹೆಡ್ ಆಟ 12 ರನ್ಗೆ ಅಂತ್ಯವಾಯಿತು.
3 / 8
ಹೀಗೆ ಒಂದುಕಡೆ ಆಸೀಸ್ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಅತ್ತ ಓಪನರ್ ಉಸ್ಮಾನ್ ಖ್ವಾಜಾ ಭಾರತೀಯ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 125 ಎಸಸೆತಗಳಲ್ಲಿ 12 ಫೋರ್, 1 ಸಿಕ್ಸರ್ನೊಂದಿಗೆ 81 ರನ್ ಗಳಿಸಿದರು.
4 / 8
ನಂತರ ಪೀಟರ್ ಹ್ಯಾಂಡ್ಸ್ಕಾಂಬ್ ನಾಯಕ ಪ್ಯಾಟ್ ಕಮಿನ್ಸ್ ಜೊತೆಸೇರಿ ತಂಡದ ರನ್ ಗತಿಯನ್ನು ಏರಿಸಲು ಪ್ರಯತ್ನಿಸಿದರು. ಅದರಂತೆ ಈ ಜೋಡಿ 59 ರನ್ಗಳ ಕಾಣಿಕೆ ನೀಡಿತು. ಕಮಿನ್ಸ್ 59 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರೆ, ನಂತರ ಬಂದ ಬ್ಯಾಟರ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದರು.
5 / 8
ಹ್ಯಾಂಡ್ಸ್ಕಾಂಬ್ಗೆ ಯಾವೊಬ್ಬ ಪ್ಲೇಯರ್ ಸಾಥ್ ನೀಡಲಿಲ್ಲ. ಇವರು 142 ಎಸೆತಗಳಲ್ಲಿ 72 ರನ್ ಸಿಡಿಸಿ ಅಜೇಯರಾಗಿ ಉಳಿದರು.
6 / 8
ಆಸ್ಟ್ರೇಲಿಯಾ 78.4 ಓವರ್ಗಳಲ್ಲಿ 263 ರನ್ಗೆ ಆಲೌಟ್ ಆಯಿತು. ಭಾರತ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು.
7 / 8
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭವನ್ನೇನು ಪಡೆದಿದೆ. ಮೊದಲ ದಿಣದಾಟದ ಅಂತ್ಯಕ್ಕೆ 9 ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
8 / 8
ನಾಯಕ ರೋಹಿತ್ ಶರ್ಮಾ 13 ಹಾಗೂ ಕೆಎಲ್ ರಾಹುಲ್ 4 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಇನ್ನೂ 242 ರನ್ಗಳ ಹಿನ್ನಡೆಯಲ್ಲಿದ್ದು ರೋಹಿತ್-ರಾಹುಲ್ ಮೇಲೆ ದೊಡ್ಡ ಜವಾಬ್ದಾರಿಯಿದೆ.