ಆಸ್ಟ್ರೇಲಿಯಾ ಸರಣಿ ಮುಕ್ತಾಯ: ಭಾರತದ ಮುಂದಿನ ಟಾರ್ಗೆಟ್ ದಕ್ಷಿಣ ಆಫ್ರಿಕಾ, ಪಂದ್ಯ ಯಾವಾಗ?, ಯಾವುದರಲ್ಲಿ ನೇರಪ್ರಸಾರ?

|

Updated on: Dec 04, 2023 | 9:37 AM

India’s tour of South Africa Full Squad, Schedule, Timings, Live Streaming: ಭಾರತ-ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡಿದ್ದು, ಇದೀಗ ಟೀಮ್ ಇಂಡಿಯಾದ ಮುಂದಿನ ಟಾರ್ಗೆಟ್ ದಕ್ಷಿಣ ಆಫ್ರಿಕಾ. ಮೂರು ಪಂದ್ಯಗಳ ಟಿ20I ಸರಣಿ, ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ಹರಿಣಗಳ ನಾಡಿಗೆ ತೆರಳುತ್ತಿದೆ.

1 / 10
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಮುಕ್ತಾಯಗೊಂಡಿದೆ. ಟೀಮ್ ಇಂಡಿಯಾ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಇದೀಗ ಭಾರತದ ಮುಂದಿನ ಟಾರ್ಗೆಟ್ ದಕ್ಷಿಣ ಆಫ್ರಿಕಾ. ಮೂರು ಪಂದ್ಯಗಳ ಟಿ20I ಸರಣಿ, ಮೂರು ಏಕದಿನ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದೆ.

2 / 10
ಡಿಸೆಂಬರ್ 10 ರಂದು ಡರ್ಬನ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಸರಣಿ ಪ್ರಾರಂಭವಾದರೆ ಅಂತಿಮ ಪಂದ್ಯವು ಕೇಪ್ ಟೌನ್‌ನಲ್ಲಿ ಜನವರಿ 3 ರಿಂದ 7, 2024 ರವರೆಗೆ ನಡೆಯಲಿದೆ. ವಿಶೇಷ ಎಂದರೆ ಟೀಮ್ ಇಂಡಿಯಾ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸುತ್ತಿದೆ. ಈಗಾಗಲೇ ಬಿಸಿಸಿಐ ಈ ಮೂರು ಮಾದರಿಯ ಸರಣಿಗೆ ಭಾರತ ತಂಡವನ್ನು ಪ್ರಕಟ ಮಾಡಿದೆ.

3 / 10
ಮೂರು ವಿಭಿನ್ನ ಸ್ವರೂಪಗಳಿಗೆ ಮೂರು ವಿಭಿನ್ನ ನಾಯಕರನ್ನು ಆಯ್ಕೆ ಮಾಡಿದೆ. ಟಿ20ಗೆ ಸೂರ್ಯಕುಮಾರ್, ಏಕದಿನಕ್ಕೆ ಕೆಎಲ್ ರಾಹುಲ್ ಹಾಗೂ ಟೆಸ್ಟ್​ಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದಾರೆ. ಹಾಗಾದರೆ ಭಾರತ-ದಕ್ಷಿಣ ಆಫ್ರಿಕಾ ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ನೇರಪ್ರಸಾರ ಯಾವುದರಲ್ಲಿದೆ?. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

4 / 10
ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ: ಡಿಸೆಂಬರ್ 10 ರಂದು ಮೊದಲ ಟಿ20ಐ- ಕಿಂಗ್ಸ್‌ಮೀಡ್, ಡರ್ಬನ್​ನಲ್ಲಿ ನಡೆಯಲಿದೆ. ಡಿಸೆಂಬರ್ 12 ರಂದು ಎರಡನೇ ಟಿ20ಐ- ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾನಲ್ಲಿ ಆಯೋಜಿಸಲಾಗಿದೆ. ಕೊನೆಯ ಟಿ20 ಡಿಸೆಂಬರ್ 14 ರಂದು ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್​ನಲ್ಲಿ ನಡೆಯಲಿದೆ. ಮೂರು ಟಿ20Iಗಳು ರಾತ್ರಿ 9:30 IST ಕ್ಕೆ ಪ್ರಾರಂಭವಾಗುತ್ತದೆ.

5 / 10
ODI ಸರಣಿ: ಡಿಸೆಂಬರ್ 17: ಪ್ರಥಮ ಏಕದಿನ- ನ್ಯೂ ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್​ನಲ್ಲಿ ನಡೆಯಲಿದೆ. ಡಿಸೆಂಬರ್ 19 ರಂದು 2ನೇ ಏಕದಿನ- ಸೇಂಟ್ ಜಾರ್ಜ್ ಪಾರ್ಕ್, ಗ್ಕೆಬರ್ಹಾ ಹಾಗೂ ಡಿಸೆಂಬರ್ 21 ರಂದು 3ನೇ ಏಕದಿನ- ಬೋಲ್ಯಾಂಡ್ ಪಾರ್ಕ್, ಪಾರ್ಲ್ ನಲ್ಲಿ ಆಯೋಜಿಸಲಾಗಿದೆ. ಮೊದಲ ಏಕದಿನ 1:30ಕ್ಕೆ IST ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮುಂದಿನ ಎರಡು ಪಂದ್ಯಗಳು 4:30 IST ಕ್ಕೆ ಶುರುವಾಗಲಿದೆ.

6 / 10
ಟೆಸ್ಟ್ ಸರಣಿ: ಡಿಸೆಂಬರ್ 26-30 ವರೆಗೆ ಮೊದಲನೇ ಟೆಸ್ಟ್ ಪಂದ್ಯ ಸೂಪರ್‌ಸ್ಪೋರ್ಟ್ ಪಾರ್ಕ್, ಸೆಂಚುರಿಯನ್​ನಲ್ಲಿ ನಡೆಯಲಿದೆ. ಜನವರಿ 3-7: ಎರಡನೇ ಟೆಸ್ಟ್ ನ್ಯೂಲ್ಯಾಂಡ್ಸ್, ಕೇಪ್ ಟೌನ್​ನಲ್ಲಿ ಆಯೋಜಿಸಲಾಗಿದೆ. ಡಿ. 17 ರಂದು ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಮಧ್ಯಾಹ್ನ 1:30 IST ಕ್ಕೆ ಪ್ರಾರಂಭವಾಗಲಿದೆ ಮತ್ತು ಹೊಸ ವರ್ಷದ ಟೆಸ್ಟ್ ಅನ್ನು ಕೇಪ್ ಟೌನ್‌ನಲ್ಲಿ ಮಧ್ಯಾಹ್ನ 2:00 IST ಕ್ಕೆ ಆಯೋಜಿಸಲಾಗಿದೆ.

7 / 10
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತದೆ.

8 / 10
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ಹಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ದೀಪಕ್ ಚಹರ್.

9 / 10
ಭಾರತ ಏಕದಿನ ತಂಡ: ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ-ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ದೀಪಕ್ ಚಹರ್.

10 / 10
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ (ಫಿಟ್ನೆಸ್ ಅವಲಂಬಿಸಿ), ಜಸ್​ಪ್ರಿತ್ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ.