IND vs ENG 1st Test: ಆಂಗ್ಲರಿಗೆ ಪೋಪ್ ಆಸರೆ: ರೋಚಕತೆ ಸೃಷ್ಟಿಸಿದ ಇಂದಿನ ನಾಲ್ಕನೇ ದಿನದಾಟ

|

Updated on: Jan 28, 2024 | 7:26 AM

India vs England 1st Test, Day 4: ಭಾರತವನ್ನು 436 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಕೈಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ 47 ರನ್ ಕೊಡುಗೆ ನೀಡಿದರೆ, ಜಾಕ್ ಕ್ರೌಲಿ ಅವರೊಂದಿಗೆ 45 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

1 / 6
ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕತೆ ಸೃಷ್ಟಿಸಿದೆ. ಮೂರನೇ ದಿನದಲ್ಲಿ ಆರಂಭಿಕ ವೈಫಲ್ಯದ ನಡುವೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಓಲಿ ಪೋಲ್ ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.

2 / 6
ಭಾರತವನ್ನು 436 ರನ್​ಗಳಿಗೆ ಆಲೌಟ್ ಮಾಡಿ ದ್ವಿತೀಯ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 316 ರನ್ ಗಳಿಸಿದೆ. 126 ರನ್​ಗಳ ಮುನ್ನಡೆಯಲ್ಲಿದೆ. ಇನ್ನು ಎರಡು ದಿನಗಳ ಆಟ ಬಾಕಿ ಇರುವ ಕಾರಣ ಇಂದಿನ ನಾಲ್ಕನೇ ದಿನದಾಟ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

3 / 6
ಭಾರತವನ್ನು 436 ರನ್​ಗಳಿಗೆ ಆಲೌಟ್ ಮಾಡಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಕೈಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಬೆನ್ ಡಕೆಟ್ 47 ರನ್ ಕೊಡುಗೆ ನೀಡಿದರೆ, ಜಾಕ್ ಕ್ರೌಲಿ ಅವರೊಂದಿಗೆ 45 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

4 / 6
ಈ ಇಬ್ಬರ ನಂತರ ಬಂದ ಜೋ ರೂಟ್, ಜಾನಿ ಬೈರ್‌ಸ್ಟೋ ಮತ್ತು ನಾಯಕ ಬೆನ್ ಸ್ಟೋಕ್ಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು. ಸತತವಾಗಿ ಬೀಳುತ್ತಿರುವ ವಿಕೆಟ್‌ಗಳ ನಡುವೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಓಲಿ ಪೋಪ್ ತಂಡದ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡರು.

5 / 6
ಹಾಗೆಯೇ ತಂಡದ ವಿಕೆಟ್‌ಕೀಪರ್ ಬೆನ್ ಫಾಕ್ಸ್ ಜತೆಗೂಡಿ ಒಲಿ ಪೋಪ್ 100ಕ್ಕೂ ಹೆಚ್ಚು ರನ್ ಜೊತೆಯಾಟ ನಡೆಸಿದರು. ಈ ವೇಳೆ ಪೋಪ್ ಕೂಡ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಒಲಿ ಪೋಪ್ ಅವರ 5ನೇ ಶತಕ ಹಾಗೂ ಭಾರತದ ವಿರುದ್ಧ ಮೊದಲ ಟೆಸ್ಟ್ ಶತಕವಾಯಿತು. ದಿನದಾಟದಂತ್ಯಕ್ಕೆ ಪೋಪ್ 208 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಿತ ಅಜೇಯ 148 ರನ್ ಕಲೆಹಾಕಿದ್ದಾರೆ.

6 / 6
ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ 246 ರನ್​ಗಳಿಗೆ ಆಲೌಟ್ ಆಗಿತ್ತು. ಬಳಿಕ ಭಾರತ 436 ರನ್ ಗಳಿಸಿತು. ಭಾರತ ಪರ ಯಶಸ್ವಿ ಜೈಸ್ವಾಲ್ 74 ಎಸೆತಗಳಲ್ಲಿ 80 ರನ್, ಕೆಎಲ್ ರಾಹುಲ್ 86 ರನ್ ಮತ್ತು ರವೀಂದ್ರ ಜಡೇಜಾ 87 ರನ್​ಗಳ ಕೊಡುಗೆ ನೀಡಿದರು.